ಚುನಾವಣೆ ಆಯೋಗದಿಂದ 'ಮೋದಿ ನೀತಿ ಸಂಹಿತೆ' ಪಾಲನೆ: ಮಮತಾ ಬ್ಯಾನರ್ಜಿ

Update: 2024-05-07 11:15 GMT

ಪುರುಲಿಯಾ (ಪಶ್ಚಿಮ ಬಂಗಾಳ), ಮೇ 7: ʻಚುನಾವಣೆ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಮೋದಿ ನೀತಿ ಸಂಹಿತೆಯಾಗಿ ಪರಿವರ್ತಿಸಿದೆʼ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ದೂರಿದ್ದಾರೆ. 

ಪುರುಲಿಯಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ʻಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕರು ದ್ವೇಷದ ಭಾಷಣ ಮಾಡುತ್ತಾರೆ ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘಿಸುತ್ತಾರೆ ಎಂಬ ಆರೋಪಗಳಿಗೆ ಆಯೋಗ ಕಣ್ಣು ಮುಚ್ಚಿಕೊಂಡಿದೆʼ ಎಂದು ಆರೋಪಿಸಿದ್ದಾರೆ. 

ʻಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ತಮ್ಮನ್ನು ಮಾತ್ರ ಹಿಂದುಗಳು ಎಂದು ಪರಿಗಣಿಸುತ್ತಾರೆ. ಅವರು ಇತರ ಸಮುದಾಯಗಳ ಬಗ್ಗೆ ಯೋಚಿಸುವುದಿಲ್ಲ. ದ್ವೇಷ ಭಾಷಣಗಳ ಮೂಲಕ ಕೆಳ ಜಾತಿಯ ಹಿಂದುಗಳು, ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ವರ್ಗಗಳನ್ನು ಬೆದರಿಸುತ್ತಿದ್ದಾರೆ. ಆದರೆ, ಚುನಾವಣೆ ಆಯೋಗ ಮೌನವಾಗಿದೆ,ʼ ಎಂದು ಹೇಳಿದ್ದಾರೆ. 

ʻಆಯೋಗದ ಮಾದರಿ ನೀತಿ ಸಂಹಿತೆ ಅಪಹಾಸ್ಯಕ್ಕೀಡಾಗಿದೆ. ಅದಕ್ಕೆ ಮೋದಿ ನೀತಿ ಸಂಹಿತೆ ಎಂದು ಮರುನಾಮಕರಣ ಮಾಡಬೇಕು. ನಾವು ದೇಶದ ನಾಗರಿಕರ ಹಕ್ಕುಗಳ ಉಲ್ಲಂಘನೆಯ ಪ್ರತಿಯೊಂದು ಘಟನೆಯನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆʼ ಎಂದು ಬ್ಯಾನರ್ಜಿ ಹೇಳಿದರು. 

Tags:    

Similar News