ಆಗಸ್ಟ್ 18 ರೊಳಗೆ ಜಪಾನ್‌ನಿಂದ ನೇತಾಜಿ ಅವಶೇಷಗಳನ್ನು ಮರಳಿ ತರಲಿ: ಪ್ರಧಾನಿ ಮೋದಿಗೆ ನೇತಾಜಿ ಮೊಮ್ಮಗ ಮನವಿ

ಸುಭಾಷ್ ಚಂದ್ರ ಬೋಸ್ ಅವರ ಪಾರ್ಥೀವ ಶರೀರವನ್ನು ಆಗಸ್ಟ್ 18 ರೊಳಗೆ ಭಾರತಕ್ಕೆ ಮರಳಿ ತರುವಂತೆ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಮನವಿ ಮಾಡಿದ್ದಾರೆ.

Update: 2024-07-28 13:06 GMT
ಚಂದ್ರ ಕುಮಾರ್ ಬೋಸ್
Click the Play button to listen to article

ಜಪಾನ್‌ನ ರೆಂಕೋಜಿಯಲ್ಲಿರುವ ಭಾರತದ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಅವಶೇಷಗಳನ್ನು ಆಗಸ್ಟ್ 18 ರೊಳಗೆ ಭಾರತಕ್ಕೆ ಮರಳಿ ತರುವಂತೆ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಅವರು  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಎನ್‌ಡಿಎ ನೇತೃತ್ವದ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಲು ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಿದ ಬೋಸ್, ಎಲ್ಲಾ ರಾಷ್ಟ್ರೀಯ - ಅಂತರಾಷ್ಟ್ರೀಯ  10 ವಿಚಾರಣೆಗಳು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಆಗಸ್ಟ್ 18, 1945 ರಂದು ನಿಧನರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಭಾರತ ಸರ್ಕಾರದಿಂದ ಅಂತಿಮ ಹೇಳಿಕೆಯನ್ನು ನೀಡುವುದು ಕಡ್ಡಾಯವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 2024 ರ ಆಗಸ್ಟ್ 18 ರೊಳಗೆ ನೇತಾಜಿಯವರ ಅವಶೇಷಗಳನ್ನು ರೆಂಕೋಜಿಯಿಂದ ಭಾರತಕ್ಕೆ ಮರಳಿ ತರಬೇಕೆಂಬುದು ನನ್ನ ವಿನಮ್ರ ಮನವಿ ಎಂದು ಅವರು ಪ್ರಧಾನಿ ಮೋದಿಗೆ ವಿನಂತಿಸಿದ್ದಾರೆ. 

PTI ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಂದ್ರಕುಮಾರ್ ಬೋಸ್, ಪಶ್ಚಿಮ ಬಂಗಾಳದ ಬಿಜೆಪಿಯ ಮಾಜಿ ಉಪಾಧ್ಯಕ್ಷರಾಗಿದ್ದ ಬೋಸ್, "ಅಗಸ್ಟ್ 18, 1945 ರಂದು ನಡೆದ ಈ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂದು ನಿರ್ಣಾಯಕವಾಗಿ ಸ್ಥಾಪಿಸುವ ರಹಸ್ಯ ಕಡತಗಳು ಮತ್ತು ದಾಖಲೆಗಳನ್ನು ವರ್ಗೀಕರಣ ಪ್ರಕ್ರಿಯೆಯು ಬಹಿರಂಗಪಡಿಸಿದೆ. ಸ್ವಾತಂತ್ರ್ಯದ ನಂತರ ನೇತಾಜಿ ಭಾರತಕ್ಕೆ ಮರಳಲು ಬಯಸಿದ್ದರು. ಆದರೆ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಭಾರತಕ್ಕೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ನೇತಾಜಿ ಅವರ ಅಸ್ಥಿಯನ್ನು ರೆಂಕೋಜಿ ದೇವಸ್ಥಾನದಲ್ಲಿ ಇರಿಸಿರುವುದು ಅತ್ಯಂತ ಅವಮಾನಕರ ಎಂದು ಅವರು ಹೇಳಿದ್ದಾರೆ. 

ಭಾರತದ ವಿಮೋಚಕನನ್ನು ಗೌರವಿಸಲು, ಅವರ ಅವಶೇಷಗಳು ಭಾರತದ ನೆಲವನ್ನು ಮುಟ್ಟಬೇಕು ಎಂದು ನಾವು ಕಳೆದ ಮೂರೂವರೆ ವರ್ಷಗಳಿಂದ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇವೆ. ನೇತಾಜಿ ಅವರ ಪುತ್ರಿ ಅನಿತಾ ಬೋಸ್ ತಂದೆಯವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ಮಾಡಲು ಬಯಸುತ್ತಾರೆ ಎಂದು ಬೋಸ್ ಸಮರ್ಥಿಸಿಕೊಂಡರು.

ಈ ಬಗ್ಗೆ ಭಾರತ ಸರ್ಕಾರ ಪ್ರತಿಕ್ರಿಯಿಸಬೇಕು. ಈ ಅವಶೇಷಗಳು ನೇತಾಜಿಯವರಲ್ಲವೆಂದಾದರೆ ಅವುಗಳನ್ನು ರೆಂಕೋಜಿಯಲ್ಲಿ ಇರಿಸಲು ನಿರ್ವಹಣೆಯನ್ನು ಒದಗಿಸಬಾರದು. ಈ ಬಗ್ಗೆ ಪ್ರಧಾನ ಮಂತ್ರಿಯಿಂದ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ಸಂದರ್ಶನದಲ್ಲಿ ಹೇಳಿದರು.

Tags:    

Similar News