ಮಹಿಳಾ ಪಿಎಲ್ 2024 : ಮುಂಬೈ-ದೆಹಲಿ ಮುಖಾಮುಖಿ

ಯುವ ತಾರೆಯರು ಪ್ರಮುಖ ಆಕರ್ಷಣೆ

Update: 2024-02-22 10:31 GMT

ಬೆಂಗಳೂರು, ಫೆ. 22- ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿ ಶುಕ್ರವಾರ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಕಳೆದ ವರ್ಷ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಹಾಗೂ 16 ವಿಕೆಟ್‌ ಕಬಳಿಸಿದ ಮುಂಬೈನ ಹೇಲಿ ಮ್ಯಾಥ್ಯೂಸ್ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದರು. ಈ ಪಂದ್ಯಾವಳಿಗಳು ಉದಯೋನ್ಮಖ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ನೀಡುತ್ತವೆ. ಇದಕ್ಕೊಂದು ಉದಾಹರಣೆ- ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಶ್ರೇಯಾಂಕಾ ಪಾಟೀಲ್. ಏಳು ಪಂದ್ಯಗಳನ್ನು ಆಡಿದರು. ಆದರೆ, ಸ್ಮೃತಿ ಮಂಧಾನ ಅಥವಾ ಎಲ್ಲಿಸ್ ಪೆರ್ರಿ ಅಥವಾ ಸೋಫಿ ಡಿವೈನ್ ಅವರಂತಹ ಆಟಗಾರರ ಮೇಲೆ ಎಲ್ಲರ ಕಣ್ಣು ಇದ್ದಿತ್ತು. 

ಆದರೆ, ಶ್ರೇಯಾಂಕಾ ಗಯಾನಾ ಅಮೆಜಾನ್ ವಾರಿಯರ್ಸ್‌ಗಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಛಾಪು ಮೂಡಿಸುವುದರ ಜೊತೆಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೆಸ್ಟ್ ಮತ್ತು ಒಂದು ದಿನದ ಪಂದ್ಯದಲ್ಲಿ ಸ್ಥಾನ ಗಳಿಸಿದರು. 21 ವರ್ಷದ ಅವರು ಅಂತಿಮ ಓವರ್‌ಗಳಲ್ಲಿ ಭರ್ಜರಿ ಹೊಡೆತ ಬಾರಿಸುವುದನ್ವನು ಕಲಿತಿದ್ದಾರೆ. 

ದೆಹಲಿ ಕ್ಯಾಪಿಟಲ್ಸ್‌ನ ಟಿಟಾಸ್ ಸಾಧು ಅವರದ್ದೂ ಇಂಥದ್ದೇ ಕಥೆ. ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯದಲ್ಲಿ ಆಡಲಿಲ್ಲ. ಆದರೆ, ಶ್ರೀಲಂಕಾ ವಿರುದ್ಧ 4-1-6-3 ಸಾಧನೆಯಿಂದ ಭಾರತದ ಗೆಲುವಿಗೆ ಕಾರಣರಾದರು. ಕಳೆದ ತಿಂಗಳು ಮುಂಬೈನಲ್ಲಿ ಆಸ್ಟ್ರೇಲಿಯ ವಿರುದ್ಧ 17ಕ್ಕೆ 4 ವಿಕೆಟ್‌ಗಳನ್ನು ಗಳಿಸಿದರು. 

ಕ್ಯಾಪಿಟಲ್ಸ್‌ ನ ಮಿನ್ನು ಮಣಿ ಕೇರಳದಿಂದ ಆಯ್ಕೆಯಾದ ಮೊದಲ ಆಟಗಾರ್ತಿ. ಆದರೆ, ಕಳೆದ ವರ್ಷ ಮೂರು ಪಂದ್ಯಗಳಲ್ಲಿ ಆಡಿದರೂ, ಬ್ಯಾಟಿಂಗ್‌ ಎರಡು ಇನ್ನಿಂಗ್ಸ್‌ಗೆ ಸೀಮಿತವಾಗಿತ್ತು. ಆದರೆ, ಮಿನ್ನು ನಾಲ್ಕು ವಿಶ್ವ ಕಪ್‌ಗಳಲ್ಲಿ ಆಡಿದ್ದು, ಆಫ್-ಬ್ರೇಕ್ ಬೌಲಿಂಗ್‌ನಿಂದ ಭರವಸೆ ಮೂಡಿಸಿದ್ದಾರೆ. 

ಶುಕ್ರವಾರದ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್. ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೆಗ್ ಲ್ಯಾನಿಂಗ್ ಮುನ್ನಡೆಸುವರು. ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ. 

Tags:    

Similar News