ಐಪಿಎಲ್‌ ಮಾರ್ಚ್ 22 ರಿಂದ ಆರಂಭ

Update: 2024-02-20 11:25 GMT
2009 ರಲ್ಲಿ ಐಪಿಎಲ್ ದಕ್ಷಿಣ ಆಫ್ರಿಕಾ ಹಾಗೂ 2014 ರಲ್ಲಿ ಯುಎಇಯಲ್ಲಿ ಭಾಗಶಃ ನಡೆಯಿತು

ಹೊಸದಿಲ್ಲಿ, ಫೆ. 20 : ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಂದು ಆರಂಭವಾಗಲಿದ್ದು, ಎಲ್ಲ ಪಂದ್ಯಗಳು ದೇಶದಲ್ಲೇ ನಡೆ ಯಲಿವೆ ಎಂದು ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಮಂಗಳವಾರ ತಿಳಿಸಿದರು.

ಲೋಕಸಭೆ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿರುವುದರಿಂದ, ಐಪಿಎಲ್ 17ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ʻಮೊದಲ 15 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗುವುದು. ಸಾರ್ವತ್ರಿಕ ಚುನಾವಣೆಯ ದಿನಾಂಕಗಳ ಘೋಷಣೆ ನಂತರ ಉಳಿದ ಪಂದ್ಯಗಳ ದಿನವನ್ನು ನಿರ್ಧರಿಸಲಾಗುವುದು. ಮಾರ್ಚ್‌ 22 ರಂದು ಪಂದ್ಯಾವಳಿಯನ್ನು ಪ್ರಾರಂಭಿಸಲಿದ್ದೇವೆ. ಸಂಪೂರ್ಣ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆʼ ಎಂದು ಧುಮಾಲ್ ಹೇಳಿದರು. 

2009 ರ ಐಪಿಎಲ್ ದಕ್ಷಿಣ ಆಫ್ರಿಕಾ ಹಾಗೂ 2014 ರ ಆವೃತ್ತಿಯು ಯುಎಇಯಲ್ಲಿ ಭಾಗಶಃ ನಡೆಯಿತು. ಆದರೆ, 2019 ರಲ್ಲಿ ಚುನಾವಣೆಗಳ ಹೊರತಾಗಿಯೂ ದೇಶದಲ್ಲಿ ಪಂದ್ಯಾವಳಿ ನಡೆಯಿತು.  

ಐಪಿಎಲ್ ಆರಂಭಿಕ ಪಂದ್ಯ ಕಳೆದ ವರ್ಷದ ಫೈನಲಿಸ್ಟ್‌ಗಳಾದ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ ಅಪ್ ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. 

2024 ರ ಕ್ರೀಡಾಋತುವಿನ ಆಟಗಾರರ ಹರಾಜು 2023ರ ಡಿಸೆಂಬರ್‌ನಲ್ಲಿ ನಡೆಯಿತು. ಆಸ್ಟ್ರೇಲಿಯದ ವೇಗಿ ಮಿಶೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸಿದ್ದು, ಇದು ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿ. ಅಂತಿಮ ಪಂ ದ್ಯ ಮೇ 26 ರಂದು ನಡೆಯುವ ಸಾಧ್ಯತೆಯಿದೆ.

Similar News