ಭಾರತ ವಿ/ಎಸ್‌ ಇಂಗ್ಲೆಂಡ್ 5 ನೇ ಟೆಸ್ಟ್: ಕುಲದೀಪ್-ಅಶ್ವಿನ್ ಸ್ಪಿನ್ ಚಳಕಕ್ಕೆ ಕುಸಿದ ಇಂಗ್ಲೆಂಡ್

ಮಿಂಚಿದ ರೋಹಿತ್, ಜೈಸ್ವಾಲ್

Update: 2024-03-07 14:59 GMT
ಕುಲ್‌ ದೀಪ್‌ ಯಾದವ್

ಧರ್ಮಶಾಲಾ, ಮಾ.7- ಕುಲದೀಪ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಬೌಲಿಂಗ್‌ ಪ್ರದರ್ಶನದ ನಂತರ, ಭಾರತದ ಆರಂಭಿಕ ‌ಬ್ಯಾಟರ್‌ ಗಳಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅರ್ಧ ಶತಕ ಬಾರಿಸಿದರು. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ದಿನದಂದು 1 ವಿಕೆಟ್‌ಗೆ 135 ರನ್ ಗಳಿಸಿತು.

ನಾಯಕ ರೋಹಿತ್ (52 ಬ್ಯಾಟಿಂಗ್, 83 ಎಸೆತ) ಮತ್ತು ಜೈಸ್ವಾಲ್ (57, 58 ಬಾಲ್)‌ ಜೋಡಿ ಮೊದಲ ವಿಕೆಟ್‌ಗೆ ಕೇವಲ 20.4 ಓವರ್‌ಗಳಲ್ಲಿ 104 ರನ್‌ಗಳನ್ನು ಲೂಟಿ ಮಾಡಿತು. ಭಾರತವು ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಮೊತ್ತವಾದ 218 ರನ್‌ಗಳಿಗೆ ಪ್ರತಿಯಾಗಿ 135 ರನ್‌ ಗಳಿಸಿದ್ದು, 83 ರನ್‌ ಹಿನ್ನಡೆಯಲ್ಲಿದೆ.

ಜೈಸ್ವಾಲ್ ತಮ್ಮ ಅರ್ಧಶತಕದ ನಂತರ ಔಟಾದರು. ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಬೌಲಿಂಗ್‌ ನಲ್ಲಿ ಬೆನ್ ಫೋಕ್ಸ್ ಅವರಿಂದ ಸ್ಟಂಪ್ ಆದರು. ಶುಭಮನ್ ಗಿಲ್ ಔಟಾಗದೆ 26 ರನ್ ಗಳಿಸಿ, ರೋಹಿತ್‌ಗೆ ಕಂಪನಿ ನೀಡಿದರು.

ಕುಲದೀಪ್ (5/72) ಮತ್ತು 100ನೇ ಟೆಸ್ಟ್ ಆಡುತ್ತಿರುವ ಆರ್. ಅಶ್ವಿನ್ (4/51)‌ ಉರುಳಿದ ಒಂಬತ್ತು ವಿಕೆಟ್‌ಗಳನ್ನು ಹಂಚಿಕೊಂಡರು. ಇದರಿಂದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಶೋಚನೀಯ ಮೊತ್ತಕ್ಕೆ ಆಲೌಟ್ ಆಯಿತು.

ಭಾರತದ ಸ್ಪಿನ್ ತ್ರಿವಳಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿತು: ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಝಾಕ್ ಕ್ರಾಲಿ 108 ಎಸೆತಗಳಲ್ಲಿ 79 ರನ್ ಗಳಿಸುವ ಮೂಲಕ ಹೋರಾಟ ಮನೋಭಾವ ಪ್ರದರ್ಶಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್ (1ನೇ ಇನಿಂಗ್ಸ್): 57.4 ಓವರ್‌ಗಳಲ್ಲಿ 218 ಆಲೌಟ್ (ಜಾಕ್ ಕ್ರಾಲಿ 79; ಕುಲದೀಪ್ ಯಾದವ್ 5/72, ಆರ್. ಅಶ್ವಿನ್ 4/51). ಭಾರತ (1ನೇ ಇನಿಂಗ್ಸ್): 30 ಓವರ್‌ಗಳಲ್ಲಿ 135/1 (ಯಶಸ್ವಿ ಜೈಸ್ವಾಲ್ 57, ರೋಹಿತ್ ಶರ್ಮಾ 52 ಬ್ಯಾಟಿಂಗ್).

Tags:    

Similar News