200 ದಶಲಕ್ಷ ಡಾಲರ್‌ ಸಂಪೂರ್ಣ ಚಂದಾದಾರಿಕೆ: ಬೈಜು ರವೀಂದ್ರನ್

Update: 2024-02-21 15:24 GMT

ಹೊಸದಿಲ್ಲಿ, ಫೆ 21- ಬೈಜೂಸ್‌ ನ 200 ದಶಲಕ್ಷ ಡಾಲರ್‌ ಹಕ್ಕುಗಳು ಸಂಪೂರ್ಣವಾಗಿ ಚಂದಾದಾರಿಕೆಯಾಗಿವೆ. ʻನವೀಕೃತ ಮಿಷನ್ʼ ನಲ್ಲಿಎಲ್ಲ ಶೇರುದಾರರು ಪಾಲ್ಗೊಳ್ಳಬೇಕು ಎಂದು ಎಜುಟೆಕ್‌ ಕಂಪನಿ ಮುಖ್ಯಸ್ಥ ಬೈಜು ರವೀಂದ್ರನ್‌ ಬುಧವಾರ ಹೇಳಿದ್ದಾರೆ. 

ಬೈಜು ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್, 200 ದಸಲಕ್ಷ ಡಾಲರ್‌ ಮೌಲ್ಯದ ಹಕ್ಕುಗಳ ವಿತರಣೆ ಮಾಡಿದೆ. 

ʻನಮ್ಮ ಹಕ್ಕುಗಳ ಸಂಚಿಕೆಯು ಸಂಪೂರ್ಣವಾಗಿ ಚಂದಾದಾರವಾಗಿದೆ. ಷೇರುದಾರರಿಗೆ ನನ್ನ ಕೃತಜ್ಞತೆ ಸಲ್ಲುತ್ತದೆ. ಆದರೆ ನನ್ನ ಯಶಸ್ಸಿನ ಮಾನದಂಡವೆಂದರೆ ಹಕ್ಕುಗಳ ವಿತರಣೆಯಲ್ಲಿ ಎಲ್ಲಾ ಷೇರುದಾರರ ಭಾಗವಹಿಸುವಿಕೆ. ನಾವು ಈ ಕಂಪನಿಯನ್ನು ಒಟ್ಟಿಗೆ ನಿರ್ಮಿಸಿದ್ದೇವೆ ಮತ್ತು ನಾವೆಲ್ಲರೂ ಈ ನವೀಕೃತ ಮಿಷನ್‌ ನಲ್ಲಿ ಭಾಗವಹಿಸಬೇಕೆಂದು ಬಯಸುತ್ತೇನೆʼ ಎಂದು ಷೇರುದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಕಂಪನಿ ಸಂಗ್ರಹಿಸಿದ ನಿಧಿಯ ಮೇಲ್ವಿಚಾರಣೆ ಮಾಡಲು ಮೂರನೇ ವ್ಯಕ್ತಿಯ ಏಜೆನ್ಸಿಯನ್ನು ನೇಮಿಸಲಾಗುತ್ತದೆ ಎಂದು ರವೀಂದ್ರನ್ ಹೇಳಿದರು.

ಬೈಜುನಲ್ಲಿ ಜಂಟಿಯಾಗಿ ಶೇ.30 ಪಾಲು ಹೊಂದಿರುವ ಷೇರುದಾರರ ಗುಂಪು ಅಸಾಮಾನ್ಯ ಸಾಮಾನ್ಯ ಸಭೆಗೆ (ಇಜಿಎಂ) ಕರೆ ನೀಡಿದೆ. ʻಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಸಂಬಂಧವನ್ನು ಪ್ರತಿಕೂಲ ಎಂದು ತಪ್ಪಾಗಿ ಬಿಂಬಿಸುತ್ತಿವೆ. ಅಂತಹ ನಿರೂಪಣೆಗಳು ಸತ್ಯದಿಂದ ದೂರ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಸಂಘರ್ಷದಿಂದ ಏನನ್ನೂ ಪಡೆಯಲಾಗುವುದಿಲ್ಲʼ ಎಂದು ರವೀಂದ್ರನ್ ಹೇಳಿದರು. 

ಬೈಜು ಆಡಳಿತ ಮಂಡಳಿಯನ್ನು ಪುನಾರಚಿಸಲು ಮತ್ತು 2023 ರ ಹಣಕಾಸು ವರ್ಷದ ಲೆಕ್ಕಪರಿಶೋಧನೆ ಪೂರ್ಣಗೊಂಡ ನಂತರ ಸಂಸ್ಥಾಪಕರು ಮತ್ತು ಷೇರುದಾರರ ಪರಸ್ಪರ ಒಪ್ಪಿಗೆ ಮೂಲಕ ಮಂಡಳಿಗೆ ಇಬ್ಬರು ಕಾರ್ಯನಿರ್ವಾಹಕರಲ್ಲದ ನಿರ್ದೇಶಕರನ್ನು ನೇಮಿಸುವ ಪ್ರಸ್ತಾಪ ಇರಿಸಿದ್ದಾರೆ.

Tags:    

Similar News