ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಿಸಲು ಬಿಸಿಸಿಐ 'ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆʼಯಡಿ ಪಂದ್ಯ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಐದನೇ ಟೆಸ್ಟ್ ಮುಗಿದ ನಂತರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾರತೀಯ ಕ್ರಿಕೆಟಿಗರಿಗೆ ಪರಿಷ್ಕೃತ ಟೆಸ್ಟ್ ಪಂದ್ಯದ ಶುಲ್ಕವನ್ನು ಪ್ರಕಟಿಸಿದರು. .
ʻನಮ್ಮ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಮತ್ತು ಸ್ಥಿರತೆಯನ್ನು ಒದಗಿಸಲು 'ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆ'ಯ ಪ್ರಾರಂಭಿಸಲಾಗುತ್ತಿದೆ. 2022-23 ಋತುವಿನಿಂದ ಪಂದ್ಯ ಶುಲ್ಕದ ಮೇಲೆ ಹೆಚ್ಚುವರಿ ಬಹುಮಾನ 15 ಲಕ್ಷ ರೂ. ನೀಡಲಾಗುತ್ತದೆʼ ಎಂದು ಬರೆದಿದ್ದಾರೆ.
ಹೊಸ ಯೋಜನೆಯಡಿ ನಿರ್ದಿಷ್ಟ ಋತುವಿನಲ್ಲಿ ಏಳು ಅಥವಾ ಹೆಚ್ಚು ಟೆಸ್ಟ್ ಆಡಿದವರಿಗೆ 45 ಲಕ್ಷ ರೂ., ಆಡದೆ ಇರುವ ಸದಸ್ಯರಿಗೆ ಪ್ರತಿ ಪಂದ್ಯಕ್ಕೆ 22.5 ಲಕ್ಷ ರೂ.ಮತ್ತು ಐದು ಅಥವಾ ಆರು ಟೆಸ್ಟ್ ಆಡುವವರಿಗೆ ಪ್ರತಿ ಪಂದ್ಯಕ್ಕೆ 30 ಲಕ್ಷ ರೂ. ಮತ್ತು ಆಡದ ಸದಸ್ಯರಿಗೆ 15 ಲಕ್ಷ ರೂ. ನೀಡಲಾಗುತ್ತದೆ. ಹೊಸ ಶುಲ್ಕ ನೀತಿ ಋತುವಿನಲ್ಲಿ ನಾಲ್ಕು ಟೆಸ್ಟ್‌ಗಿಳಿಗಿಂತ ಕಡಿಮೆ (ಶೇ. 50 ಕ್ಕಿಂತ ಕಡಿಮೆ) ಆಡುವವರಿಗೆ ಅನ್ವಯಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ.