ಪ್ರಜ್ವಲ್ ರೇವಣ್ಣಗೆ ಕೈದಿ ನಂಬರ್ 15528: ಪರಪ್ಪನ ಅಗ್ರಹಾರದಲ್ಲಿ ಇನ್ನು ಸಜಾ ಕೈದಿ

ಜೈಲಿನ ನಿಯಮಗಳ ಪ್ರಕಾರ, ಅವರು ದಿನಕ್ಕೆ ಎಂಟು ಗಂಟೆಗಳ ಕಾಲ ಕಡ್ಡಾಯವಾಗಿ ಕೆಲಸ ಮಾಡಬೇಕು. ಬೇಕರಿ, ತೋಟಗಾರಿಕೆ, ಹೈನುಗಾರಿಕೆ ಅಥವಾ ಮರಗೆಲಸದಂತಹ ಲಭ್ಯವಿರುವ ಕೆಲಸಗಳಲ್ಲಿ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.;

Update: 2025-08-03 05:13 GMT

ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ. ತೀರ್ಪಿನ ನಂತರ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಕೈದಿ ನಂಬರ್ 15528 ಅನ್ನು ನೀಡಲಾಗಿದ್ದು, ಅವರ ಜೀವನಶೈಲಿ ಇನ್ನು ಮುಂದೆ ಸಂಪೂರ್ಣವಾಗಿ ಬದಲಾಗಲಿದೆ. ಅವರು ಯಾವುದೇ ವಿಶೇಷ ಸವಲತ್ತುಗಳಿಲ್ಲದೆ ಸಾಮಾನ್ಯ ಕೈದಿಯಂತೆ ಇರಲಿದ್ದು, ಜೈಲಿನ ಬಿಳಿ ಸಮವಸ್ತ್ರವನ್ನು ಧರಿಸಬೇಕಾಗುತ್ತದೆ. ಜೈಲಿನ ನಿಯಮಗಳ ಪ್ರಕಾರ, ಅವರು ದಿನಕ್ಕೆ ಎಂಟು ಗಂಟೆಗಳ ಕಾಲ ಕಡ್ಡಾಯವಾಗಿ ಕೆಲಸ ಮಾಡಬೇಕು. ಬೇಕರಿ, ತೋಟಗಾರಿಕೆ, ಹೈನುಗಾರಿಕೆ ಅಥವಾ ಮರಗೆಲಸದಂತಹ ಲಭ್ಯವಿರುವ ಕೆಲಸಗಳಲ್ಲಿ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಮಾಡುವ ಕೆಲಸಕ್ಕೆ ಅವರಿಗೆ ಸಂಬಳವನ್ನೂ ನೀಡಲಾಗುತ್ತದೆ. ಮೊದಲ ವರ್ಷ 'ಕೌಶಲ್ಯರಹಿತ' ಕೆಲಸಗಾರ ಎಂದು ಪರಿಗಣಿಸಿ ತಿಂಗಳಿಗೆ 524 ರೂಪಾಯಿ ಸಂಬಳ ನೀಡಲಾಗುತ್ತದೆ. ನಂತರ, ಅವರ ಕೌಶಲ್ಯ ವೃದ್ಧಿಯಾದ ಮೇಲೆ 'ನುರಿತ' ವರ್ಗಕ್ಕೆ ಬಡ್ತಿ ನೀಡಿ ಸಂಬಳವನ್ನು ಹೆಚ್ಚಿಸಲಾಗುತ್ತದೆ. ಸದ್ಯ ಅವರನ್ನು ವಿಶೇಷ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಮುಂದೆಯೂ ಅದೇ ಕೊಠಡಿಯಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಜೈಲು ಪ್ರವೇಶಿಸಿದ ತಕ್ಷಣ ಅವರ ವೈದ್ಯಕೀಯ ತಪಾಸಣೆಯನ್ನೂ ನಡೆಸಲಾಗಿದೆ.

ಈ ತೀರ್ಪು ಪ್ರಕಟವಾಗುತ್ತಿದ್ದಂತೆ ಪ್ರಜ್ವಲ್ ಕುಟುಂಬಸ್ಥರು, ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ. 

Tags:    

Similar News