BIFFes2025 | ಸಿನಿಮಾದವರು ಟೀಕಿಸಲೆಂದೇ ಹಾಗೆಲ್ಲ ಮಾತಾಡಿದ್ದು: ಡಿ ಕೆ ಶಿವಕುಮಾರ್

ಸಿನಿಮಾದವರಿಗೆ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ, ಸಹಾಯ ಪಡೆದವರಿಗೆ ಅದು ಚೆನ್ನಾಗಿ ಗೊತ್ತಿದೆ. ಆಯೋಜನೆಯಲ್ಲಿ ಒಂದಷ್ಟು ತಪ್ಪುಗಳಾಗಿರಬಹುದು, ನಿರ್ದೇಶಕ ನಾಗಾಭರಣ ಹೇಳಿರುವುದನ್ನು ಅಪಾರ್ಥ ಭಾವಿಸಲ್ಲ ಎಂದು ಶಿವಕುಮಾರ್ ಹೇಳಿದರು.;

Update: 2025-03-04 08:16 GMT
BIFFes2025 | ಸಿನಿಮಾದವರು ಟೀಕಿಸಲೆಂದೇ ಹಾಗೆಲ್ಲ ಮಾತಾಡಿದ್ದು: ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಸಿನಿಮಾ ರಂಗದವರು ಟೀಕೆ ಮಾಡಲಿ ಎಂದೇ ನಾನು ನಟ್ಟು ಬೋಲ್ಟು ಎಂಬ ಪದ ಬಳಕೆ ಮಾಡಿದ್ದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಮಂಗಳವಾರ ಕಲಾಪದಲ್ಲಿ ಭಾಗವಹಿಸುವ ಮೊದಲು ವಿಧಾನಸಭೆಯ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿನಿಮಾ ರಂಗದವರು ಟೀಕೆ ಮಾಡಲಿ ಎಂದೇ ನಾನು ನಟ್ಟು ಬೋಲ್ಟು ಎಂಬ ಪದ ಬಳಕೆ ಮಾಡಿದ್ದೇನೆ. ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂದು ಸರ್ಕಾರ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದ್ದು, ಅವರೇ ಅದರಲ್ಲಿ ಭಾಗವಹಿಸದಿದ್ದರೆ ಹೇಗೆ? ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. 

ಸಿನಿಮಾದವರಿಗೆ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ, ಸಹಾಯ ಪಡೆದವರಿಗೆ ಅದು ಚೆನ್ನಾಗಿ ಗೊತ್ತಿದೆ. ಆಯೋಜನೆಯಲ್ಲಿ ಒಂದಷ್ಟು ತಪ್ಪುಗಳಾಗಿರಬಹುದು, ನಿರ್ದೇಶಕ ನಾಗಾಭರಣ ಹೇಳಿರುವುದನ್ನು ಅಪಾರ್ಥ ಭಾವಿಸಲ್ಲ ಎಂದು ಶಿವಕುಮಾರ್ ಹೇಳಿದರು. 

ನಿರ್ದೇಶಕ ನಾಗಾಭರಣ ಹೇಳಿದ್ದೇನು?

ಶಿವಕುಮಾ‌ರ್ ನೀಡಿದ ಹೇಳಿಕೆ, ಅದರ ಸಂದರ್ಭ ಹಾಗೂ ರೀತಿ, ಬಳಸಿದ ಪದಗಳು ಸರಿಯಲ್ಲ. ಅವರು ಮಾತನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಆಗ್ರಹಿಸಿದ್ದಾರೆ.

ಚಿತ್ರೋತ್ಸವದಂತಹ ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದಿತ್ತು. ಅದು ಯಾವ ಸಂಸ್ಕಾರದಿಂದ ಬಂದಿದೆಯೋ ಆ ಸಂಸ್ಕಾರಕ್ಕೆ ಒಗ್ಗಿ ಹೋಗಿರುವುದರಿಂದ ನಾವದನ್ನು ದುರದೃಷ್ಟ ಎಂದುಕೊಳ್ಳಬೇಕು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Tags:    

Similar News