C T Ravi Case | ಆಶ್ಲೀಲ ಪದಪ್ರಯೋಗ ಪ್ರಕರಣ: ಸಿ.ಟಿ. ರವಿಗೆ ಷರತ್ತುಬದ್ಧ ಜಾಮೀನು: ತಕ್ಷಣ ಬಿಡುಗಡೆಗೆ ಆದೇಶ

ಸಿ.ಟಿ. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮಧ್ಯಂತರ ಶುಕ್ರವಾರ ಸಂಜೆ ಆದೇಶ ಮಾಡಿದ ಹೈಕೋರ್ಟ್‌, ತನಿಖಾಧಿಕಾರಿ ಸೂಚಿಸಿದಾಗ ರವಿ ತನಿಖೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ.

Update: 2024-12-20 12:08 GMT

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನ ಪರಿಷತ್‌ ಕಲಾಪದ ಬಳಿಕ ಗದ್ದಲದ ವೇಳೆ ಅವರನ್ನು ನಿಂದಿಸುವ ಅಶ್ಲೀಲ ಪದ ಬಳಕೆ ಪ್ರಕರಣದ ಸಂಬಂಧ  ಬಂಧಿತರಾಗಿರುವ ಬಿಜೆಪಿ ಎಂಎಲ್‌ಸಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್‌ ಆದೇಶ ಮಾಡಿದೆ.

ಸಿ.ಟಿ. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮಧ್ಯಂತರ ಶುಕ್ರವಾರ ಸಂಜೆ ಆದೇಶ ಮಾಡಿದ ಹೈಕೋರ್ಟ್‌, ತನಿಖಾಧಿಕಾರಿ ಸೂಚಿಸಿದಾಗ ರವಿ ತನಿಖೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ. ಹೈಕೋರ್ಟ್‌ ನ್ಯಾಯಾಧೀಶರಾದ ಜಸ್ಟಿಸ್‌  ಎಂ ಜಿ ಉಮಾ ಅವರ ಏಕಸದಸ್ಯ ಪೀಠ  ಸಿ.ಟಿ. ರವಿ ಅವರ ಜಾಮೀನು ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

 ರವಿ ಅವರ ಪರವಾಗಿ  ನ್ಯಾಯವಾದಿ  ಸಂದೇಶ್‌ ಚೌಟ  ಅವರು ರವಿ ಬಂಧನ ಅಕ್ರಮ ಎಂದು ವಾದಿಸಿದರು. 

ಈ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಸಿ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಎಂಎಲ್‌ಸಿ ಮತ್ತು ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಪೊಲೀಸರು ಕರೆತರುತ್ತಿದ್ದಾರೆ.  ಬೆಳಗಾವಿ 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಜಡ್ಜ್‌ ಸ್ಪರ್ಷಾ ಡಿ.ಸೋಜ ಅವರು ಶುಕ್ರವಾರ ಪ್ರರಣವನ್ನು ಬೆಳಗಾವಿಯಿಂದ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಿದ ಬಳಿಕ ಬೆಂಗಳೂರಿಗೆ ರವಿ ಅವರನ್ನು ಕರೆತರಲಾಗುತ್ತಿದೆ.

ಗುರುವಾರ ರಾತ್ರಿ ಬಂಧಿತರಾದ ರವಿ ಅವರನ್ನು ಶುಕ್ರವಾರ ಬೆಳಿಗ್ಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಆ ವೇಳೆ, ತನ್ನನ್ನು ಎನ್‌ಕೌಂಟರ್‌ ಮೂಲಕ ಸಾಯಿಸಲು ಯತ್ನ ನಡೆಯುತ್ತಿದೆ ಎಂದು ರವಿ ಹೇಳಿಕೆ ನೀಡಿದ್ದರು. ಅವರ ಜಾಮೀನು ಅರ್ಜಿ ಸಂಬಂಧ ಅಪರಾಹ್ನ ತೀರ್ಪು ಪ್ರಕಟಿಸುವುದಾಗಿ ಹೇಳಿದ್ದ ನ್ಯಾಯಾಲಯ, ಬಳಿಕ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿನಗಳ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು.

 

Tags:    

Similar News