LIVE | Winter Session 2025: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರ್ಕಾರದ ಉತ್ತರವೇನು?
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ 7ನೇ ದಿನದಂದು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳೇ ಪ್ರಮುಖವಾಗಿ ಚರ್ಚೆಯಾದವು. ಇಂದಿನ ಕಲಾಪದ ಹೈಲೈಟ್ಸ್ ಇಲ್ಲಿದೆ. ಉತ್ತರ ಕರ್ನಾಟಕ ಭಾಗದ ರಸ್ತೆ, ಮೂಲಸೌಕರ್ಯ ಮತ್ತು ಅನುದಾನ ತಾರತಮ್ಯದ ಬಗ್ಗೆ ಶಾಸಕರು ಧ್ವನಿ ಎತ್ತಿದರು. ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಉತ್ತರ ಕರ್ನಾಟಕವನ್ನು ಮದ್ಯವ್ಯಸನ ಮುಕ್ತವನ್ನಾಗಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. "ರಾಜ್ಯವನ್ನು ಸಾರಾಯಿ ಮುಕ್ತ ಮಾಡಿದರೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸುತ್ತೇನೆ" ಎಂದು ಸಲಗಾರ್ ಭಾವುಕರಾಗಿ ನುಡಿದರು.
By : The Federal
Update: 2025-12-16 13:19 GMT