Lahari Velu Interview: 50 ವರ್ಷ ಪೂರೈಸಿದ ಲಹರಿ; ಲಹರಿ ವೇಲು ಅವರ ಮನದಾಳದ ಮಾತು
ಕನ್ನಡ ಸಂಗೀತ ಕ್ಷೇತ್ರವು ಕಾಲಾಂತರದಲ್ಲಿ ಹಲವು ಹಂತಗಳನ್ನು ದಾಟಿ ಬಂದಿದೆ. ಗ್ರಾಮಫೋನ್, ಆಡಿಯೋ ಕ್ಯಾಸೆಟ್, ಸಿಡಿ, ಪೆನ್‌ಡ್ರೈವ್, ಡಿಜಿಟಲ್ ಪ್ಲಾಟ್‌ಫಾರ್ಮ್ ಹೀಗೆ ಹಲವು ಬದಲಾವಣೆಗಳನ್ನು ಕಂಡಿದೆ.ಇದು ಸಂಗೀತ ಕ್ಷೇತ್ರದಲ್ಲಿ ಹೊಸ ಸವಾಲು ಮತ್ತು ಅವಕಾಶಗಳನ್ನು ಸೃಷ್ಟಿಸಿದೆ. ಆದರೆ ಡಿಜಿಟಲ್ ಯುಗ ಬಂದಂತೆಯೇ ಆಡಿಯೋ ಕಂಪನಿಗಳ ದುಸ್ಥಿತಿ ಆರಂಭವಾಗಿ ಅದೆಷ್ಟೋ ಅಂಗಡಿಗಳು ಮುಚ್ಚಿಹೋದವು. ಯಾವುದೇ ಸಂಗೀತ, ಸಿನಿಮಾದ ಹಿನ್ನೆಲೆ ಇಲ್ಲದ ಸಾಮಾನ್ಯ ಮದ್ಯಮವರ್ಗದ ಕುಟುಂಬ ನಮ್ಮದು. ಆದರೆ ಅಣ್ಣನಿಗೆ ಏನಾದರೂ ಸಾಧಿಸಬೇಕು ಎನ್ನುವ ಛಲ ಇತ್ತು. ಈ ಛಲದಿಂದ ಐವತ್ತು ವರ್ಷಗಳ ಹಿಂದೆ ಅಣ್ಣ ಮನೋಹರ್ ನಾಯ್ದು 500ರೂ.ನಿಂದ ಲಹರಿ ಸಂಸ್ಥೆಯನ್ನು ಆರಂಭ ಮಾಡಿದರು. ಈ ಸಂಸ್ಥೆಗೆ ಸಾಹಿತಿ ದಿವಂಗತ ವಿಜಯನಾರಸಿಂಹ ಅವರು ʼಲಹರಿʼ ಎಂದು ನಾಮಕರಣ ಮಾಡಿದರು. ಮೊದಲಿಗೆ ಆರಂಭ ಮಾಡಿದ್ದು, ವಿವಾಹ ಗೀತೆಗಳಿಂದ. ಬಳಿಕ ಮಂಜುಳಾ ಗುರುರಾಜ್ ಆರ್ಕೆಸ್ಟ್ರಾದ ʻಅಷ್ಟದೇವಿ ದರ್ಶನ' ಎಂಬ ಭಕ್ತಿಗೀತೆಗಳನ್ನು ಬಿಡುಗಡೆಗೊಳಿಸಿದವು. 'ಚಾಮುಂಡೇಶ್ವರಿ ಪೂಜಾ ಮಹಿಮೆ' ನಮ್ಮ ಸಂಸ್ಥೆಯಿಂದ ಬಿಡುಗಡೆಗೊಂಡ ಮೊದಲ ಸಿನಿಮಾ ಧ್ವನಿಸುರಳಿ' ಎಂದು ಲಹರಿ ವೇಲು ತಮ್ಮ ಲಹರಿಯ ನಡೆದು ಬಂದ ಹಾದಿಯನ್ನು ವಿವರಿಸಿದರು.
By : The Federal
Update: 2025-09-24 13:37 GMT