ಇಂಡಿಗೊ ವಿಮಾನ ರದ್ದು; ಮದುವೆ ಆನ್‌ಲೈನ್‌ನಲ್ಲಿ ನಡೀತು! 1000 ವಿಮಾನ ರದ್ದು, ಕಣ್ಣೀರಲ್ಲಿ ಪ್ರಯಾಣಿಕರು

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಗೊಂದಲದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಲ್ಲಿ 1000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ. ಸಿಬ್ಬಂದಿ ಕೊರತೆ ಎಂದು ಹೇಳಲಾಗುತ್ತಿರುವ ಈ ಅವಾಂತರದಿಂದ ಹಲವು ಮನಕಲಕುವ ಘಟನೆಗಳು ನಡೆದಿವೆ. ಹರಿದ್ವಾರಕ್ಕೆ ತೆರಳಬೇಕಿದ್ದ ಕುಟುಂಬವೊಂದು ಅಸ್ಥಿ ಹಿಡಿದು ವಿಮಾನ ನಿಲ್ದಾಣದಲ್ಲೇ ಕಾಯುವಂತಾದರೆ, ಇತ್ತ ಹುಬ್ಬಳ್ಳಿಯ ಜೋಡಿಯೊಂದು ವಿಮಾನ ರದ್ದಾದ ಕಾರಣ ಆನ್‌ಲೈನ್ ಮೂಲಕವೇ ಆರತಕ್ಷತೆ ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ. ಶಬರಿಮಲೆ ಯಾತ್ರಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಯಾಣಿಕರ ಕಣ್ಣೀರು ಮತ್ತು ಆಕ್ರೋಶದ ಸಂಪೂರ್ಣ ವರದಿ ಇಲ್ಲಿದೆ.

Update: 2025-12-06 05:28 GMT


Tags:    

Similar News