Cubbon Park Flower Show | ಕಬ್ಬನ್ ಪಾರ್ಕ್‌ನಲ್ಲಿ ಅರಳಿದ ಹೂವಿನ ಲೋಕ; ಮೊದಲ ಪುಷ್ಪ ಪ್ರದರ್ಶನಕ್ಕೆ ಜನಸಾಗರ

ಲಾಲ್‌ಬಾಗ್‌ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಅಂಗವಾಗಿ ಫಲ-ಪುಷ್ಪ ಪ್ರದರ್ಶನ ನಡೆಯುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್, ಇದೀಗ ಹೂಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಈ ವರ್ಣರಂಜಿತ ಹೂವಿನ ಲೋಕ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಬಣ್ಣ ಬಣ್ಣದ ಹೂಗಳ ಜತೆಗೆ ಕಲೆ ಸಂಸ್ಕೃತಿಯ ಸಮಾಗಮವೂ ಅದ್ಭುತ ಅನುಭವ ಕಟ್ಟಿಕೊಡಲಿದೆ. ನ.27ರಂದು ಆರಂಭವಾಗಿರುವ ಪುಷ್ಪ ಪ್ರದರ್ಶನವು ಡಿ.7ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಕಂಗೊಳಿಸಲಿದೆ. ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.

Update: 2025-12-04 05:09 GMT


Tags:    

Similar News