ಗೊರಗುಂಟೆಪಾಳ್ಯ ಟ್ರಾಫಿಕ್​ಗೆ ಯುಪಿ ಸಂಸದರೇ ಹಿಡಿಶಾಪ ಹಾಕಿದ್ರೆ ಸಾಮಾನ್ಯರ ಗತಿಯೇನು? | Goraguntepalya Traffic

ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ (Rajeev Rai) ಅವರು ಇತ್ತೀಚೆಗೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಿಲುಕಿ ಹಿಡಿಶಾಪ ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ರಾಜ್‌ಕುಮಾರ್ ಸಮಾಧಿ ರಸ್ತೆಯಿಂದ (Rajkumar Samadhi Road) ಗೊರಗುಂಟೆಪಾಳ್ಯದ ಕಡೆಗೆ ಹೋಗುವಾಗ ಉಂಟಾದ ಟ್ರಾಫಿಕ್ ಜಾಮ್‌ನಿಂದ ಬೇಸತ್ತು, ಅವರು ಬೆಂಗಳೂರು ಟ್ರಾಫಿಕ್ ಪೊಲೀಸರ ವಿರುದ್ಧ ಕಿಡಿಕಾರಿದ್ದರು.​ ಈ ಹಿನ್ನೆಲೆಯಲ್ಲಿ, 'ದ ಫೆಡರಲ್ ಕರ್ನಾಟಕ' ತಂಡವು ಅದೇ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದೆ. ವಾಹನ ಸವಾರರು ಪ್ರತಿನಿತ್ಯ ಅನುಭವಿಸುವ ನರಕಯಾತನೆ, ಸಿಗ್ನಲ್ ದಾಟಲು ಪಡುವ ಪಾಡು, ಮತ್ತು ಸಂಸದರು ಹೇಳಿದಂತೆ ನಿಜವಾಗಿಯೂ ಅಲ್ಲಿನ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿದೆಯೇ? ಎಂಬುವುದರ ಕುರಿತು ಈ ಎಕ್ಸ್‌ಕ್ಲೂಸಿವ್ ಗ್ರೌಂಡ್ ರಿಪೋರ್ಟ್ (Ground Report) ಇಲ್ಲಿದೆ.

Update: 2025-12-03 06:17 GMT


Tags:    

Similar News