ಜ್ಞಾನಭಾರತಿ ಆವರಣದಲ್ಲಿ ಮರಗಳ ಹನನ ವಿರೋಧಿಸಿ ಕಾನೂನು ಮೊರೆ ಹೋದ ಪರಿಸರ ಪ್ರಿಯರು
ವಿಶ್ವವಿದ್ಯಾನಿಲಯದ ಬಯೋಪಾರ್ಕ್‌ನಲ್ಲಿ ಔಷಧೀಯ ಸಸ್ಯಗಳು, ಬಿದಿರು, ಅಶೋಕ, ಬೇವು, ನೇರಳೆ ಹಣ್ಣು ಸೇರಿದಂತೆ ವಿವಿಧ ಬಗೆಯ ಮರಗಳಿವೆ. ಇದು ನಗರದಲ್ಲಿ ಉಳಿದಿರುವ ಕೊನೆಯ ಹಸಿರು ಪ್ರದೇಶವಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲ, ನೈಸರ್ಗಿಕ ಜಲಮೂಲಗಳನ್ನು ಹೊಂದಿದ್ದು, ನಾಲ್ಕು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ.ಆದರೆ, ವಿವಿಧ ನಿರ್ಮಾಣ ಯೋಜನೆಗಳ ಹಿನ್ನೆಲೆಯಲ್ಲಿ ಕ್ಯಾಂಪಸ್‌ನ ಅರಣ್ಯ ಪ್ರದೇಶ ಅಪಾಯದಲ್ಲಿದೆ. ಇನ್ನೂ ಹಲವು ಯೋಜನೆಗಳಿಗೆ ನೂರಾರು ಮರಗಳನ್ನು ಕಡಿಯುವ ಪ್ರಸ್ತಾವನೆಯೂ ಇದೆ. ಆದ್ದರಿಂದ, ಯಾವುದೇ ಯೋಜನೆಗಳಿಗೆ ಭೂಮಿ ನೀಡದಂತೆ ನಿರ್ಬಂಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
By : The Federal
Update: 2025-12-03 12:57 GMT