ಬಾಂಬರ್‌ಗಾಗಿ ಸಮುದ್ರದಲ್ಲೂ ಹುಡುಕಾಟ | Rameshwaram Cafe Case | Bengaluru | Coastal Guard & Mangalore |Ina

ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಮಾಡಿದ ಬಾಂಬರ್‌ಗಾಗಿ ಹುಡುಕಾಟ ತೀವ್ರವಾಗಿದ್ದು, ಸಮುದ್ರದಲ್ಲೂ ಹುಡುಕಾಟ ನಡೆದಿದೆ. ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಇದೀಗ ಬಾಂಬ್ ಸ್ಫೋಟವಾಗಿ 10 ದಿನಗಳ ಸಮೀಪಿಸುತ್ತಿದ್ದು, ಬಾಂಬರ್‌ಗಾಗಿ ಹುಡುಕಾಟ ತೀವ್ರವಾಗಿದೆ. ಬಾಂಬರ್‌ಗಾಗಿ ಕಾರ್ಯಚಾರಣೆ ಚುರುಕುಗೊಳಿಸಿರುವ ಕರ್ನಾಟಕ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ಸಮುದ್ರದಲ್ಲೂ ಬಾಂಬರ್‌ಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಸಮುದ್ರದ ಮೂಲಕ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಕರ್ನಾಟಕದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿಯ ಸಮುದ್ರ ತೀರದಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆ ಅಲರ್ಟ್‌ ಆಗಿದ್ದಾರೆ.;

By :  Keerthik
Update: 2024-03-09 10:53 GMT


Similar News