ಬೆಂಗಳೂರಿನಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಾಯ.
ಇಂದು ಬೆಳಿಗ್ಗೆ 11ಗಂಟೆ ಸುಮಾರಿಗೆ ದೇವಿಹಳ್ಳಿಯ ಆರ್ ಎಂ ವಿ ಅಪಾರ್ಟ್ಮೆಂಟ್ ಮುಂಬಾಗದಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ & ಜ್ಯುವೆಲರಿ ಶಾಪ್ ನಲ್ಲಿ ದರೋಡೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಅಂಗಡಿಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅಪ್ಪುರಾಮ್, ಅಭಿರಾಮ್ ಎಂಬುವವರಿಗೆ ಗಾಯಗಳಾಗಿದೆ. ಒಬ್ಬರಿಗೆ ಕಾಲಿಗೆ ಗುಂಡು ಬಿದ್ದಿದ್ದು, ಮತ್ತೊಬ್ಬರಿಗೆ ಹೊಟ್ಟೆಗೆ ಗುಂಡು ಬಿದ್ದಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.;
By : Keerthik
Update: 2024-03-14 12:23 GMT