NCERT ಹೊಸ ಪಠ್ಯಪುಸ್ತಕಗಳಿಗೆ ತಮ್ಮ ಹೆಸರು ಬಳಸಿದ್ದಕ್ಕೆ ಯೋಗೇಂದ್ರ ಯಾದವ್ ಆಕ್ಷೇಪ

Update: 2024-06-20 03:05 GMT

ರಾಜಕೀಯ ಪಕ್ಷಪಾತ, ಶೈಕ್ಷಣಿಕವಾಗಿ ಅಸಮರ್ಥನೀಯ ಮತ್ತು ಶಿಕ್ಷಣಶಾಸ್ತ್ರದ ನಿಷ್ಕ್ರಿಯನ್ನೊಳಗೊಂಡಿರುವ ಹೊಸ ರಾಜ್ಯಶಾಸ್ತ್ರ ಪುಸ್ತಕಗಳಿಗೆ ತಮ್ಮ ಹೆಸರು ಸೇರಿಸಲು ನಾವು ಬಯಸುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರಾದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್ ಅವರು ಸೋಮವಾರ (ಜೂನ್ 17) ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:

ʻʻರಾಜಕೀಯ ಪಕ್ಷಪಾತ, ಶೈಕ್ಷಣಿಕವಾಗಿ ಅಸಮರ್ಥನೀಯ ಮತ್ತು ಶೈಕ್ಷಣಿಕವಾಗಿ ನಿಷ್ಕ್ರಿಯವಾಗಿರುವ" ರಾಜ್ಯಶಾಸ್ತ್ರ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ರವಾನಿಸಲು NCERT ಮುಂದಾಗಿದೆ. ಇಂತಹ ಪುಸ್ತಕಗಳಲ್ಲಿ ನಮ್ಮ ಹೆಸರನ್ನು ಸೇರಿಸಿರುವುದನ್ನು ನಾವು ಸಹಿಸುವುದಿಲ್ಲʼʼ ಎಂದು ಹೇಳಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಹೊಸ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳನ್ನು ರಚಿಸಿದಾಗಲೂ ಯಾದವ್ ಮತ್ತು ಪಾಲ್ಶಿಕರ್ ಅವರು ಬಲವಾಗಿ ವಿರೋಧಿಸಿದರು. ಅಲ್ಲದೆ, ತಮ್ಮ ಹೆಸರಿನ ಪುಸ್ತಕಗಳನ್ನು ಕೂಡಲೇ ಹಿಂಪಡೆಯದಿದ್ದರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೊಸ ಪಠ್ಯಪುಸ್ತಕ ವಿರೋಧಿಸಲು ಕಾರಣ?:

ಕಳೆದ ವರ್ಷ ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಪುಸ್ತಕಗಳನ್ನು ಗುರುತಿಸಲಾಗದಷ್ಟು "ವಿರೂಪಗೊಳಿಸಿದೆ" ಹಾಗಾಗಿ ಪುಸ್ತಕಗಳಿಂದ ತಮ್ಮ ಹೆಸರನ್ನು ಕೈಬಿಡುವಂತೆ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳ ಮುಖ್ಯ ಸಲಹೆಗಾರರಾಗಿದ್ದ ಪಾಲ್ಶಿಕರ್ ಮತ್ತು ಯಾದವ್ ಅವರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಪಠ್ಯಪುಸ್ತಕಗಳ ಪರಿಷ್ಕೃತ ಆವೃತ್ತಿಯು ಅವರನ್ನು ಇನ್ನೂ ಮುಖ್ಯ ಸಲಹೆಗಾರರನ್ನಾಗಿ ಗುರುತಿಸುತ್ತದೆ. ಈ ಹಿಂದೆ ತಮಗೆ ಹೆಮ್ಮೆಯ ವಿಷಯವಾಗಿದ್ದ ಪಠ್ಯಪುಸ್ತಕಗಳು ಈಗ ಮುಜುಗರಕ್ಕೆ ಕಾರಣವಾಗಿವೆ ಎಂದು ಹೇಳಿಕೆ ನೀಡಿದ್ದಾರೆ.

ಪಠ್ಯಪುಸ್ತಕದ ವಿವಾದಗಳು:

NCERT ಮತ್ತೊಮ್ಮೆ ವಿವಾದದ ಕೇಂದ್ರವಾಗಿದ್ದು, ಪರಿಷ್ಕೃತ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕವು ಬಾಬರಿ ಮಸೀದಿಯನ್ನು ಉಲ್ಲೇಖಿಸದೆ "ಮೂರು-ಗುಮ್ಮಟ ರಚನೆ" ಎಂದು ಉಲ್ಲೇಖಿಸಿದೆ.

ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆಯವರೆಗೆ ಬಿಜೆಪಿಯ 'ರಥಯಾತ್ರೆ'; ಕರ ಸೇವಕರ ಪಾತ್ರ; ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಕೋಮುಗಲಭೆ; ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ; ಮತ್ತು ಬಿಜೆಪಿಯ "ಅಯೋಧ್ಯೆಯಲ್ಲಿ ನಡೆದ ಘಟನೆಗಳ ಬಗ್ಗೆ ವಿಷಾದ"ದ ಅಭಿವ್ಯಕ್ತಿ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ.

Tags:    

Similar News