New Airport in Bangalore : ತಮಿಳುನಾಡಿಗೆ ಇಲ್ಲ, ಕರ್ನಾಟಕದಲ್ಲೇ ಏರ್‌ಪೋರ್ಟ್ ನಿರ್ಮಿಸಲು ಕೇಂದ್ರದ ಒಲವು
Bangalore New Airport : ಕರ್ನಾಟಕದಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಿಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಮಧ್ಯ ಕರ್ನಾಟಕಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಹಾಗೂ ಬೆಂಗಳೂರು ಸಮೀಪದ ದಾಬಸ್‌ಪೇಟೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಕರ್ನಾಟಕದ ಯೋಜನೆ.;
Bತಮಿಳುನಾಡಿನ ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಿಸುವ ಮೂಲಕ ಕರ್ನಾಟಕದ ಅವಕಾಶ ಕಸಿದುಕೊಳ್ಳುವ ತಮಿಳುನಾಡು ಸರ್ಕಾರದ ಯೋಜನೆ ಫಲಿಸುವಂತೆ ಕಾಣುತ್ತಿಲ್ಲ. ಕರ್ನಾಟಕ ಸರ್ಕಾರದ ಮನವಿಯಂತೆ ಬೆಂಗಳೂರು ಸಮೀಪವೇ ಎರಡನೇ ಏರ್‌ಪೋರ್ಟ್ ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಒಲವು ತೋರಿದೆ. ಮಾಜಿ ಪ್ರಧಾನಿ ದೇವೇಗೌಡರು ಈ ಬಗ್ಗೆ ರಾಜ್ಯಸಭೆಯ ಚರ್ಚೆಯ ವೇಳೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಸಹಮತ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ವಹಣೆ ಒತ್ತಡ ಕಡಿಮೆ ಮಾಡಲು ಬೆಂಗಳೂರು ಸಮೀಪದ ದಾಬಸ್‌ಪೇಟೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಕರ್ನಾಟಕದ ಯೋಜನೆ. ಆದರೆ, ತಮಿಳುನಾಡು ಸರ್ಕಾರ ಹೊಸೂರು ಪಕ್ಕ ವಿಮಾನ ನಿಲ್ದಾಣ ನಿರ್ಮಿಸಿ ಕರ್ನಾಟಕದ ಆದಾಯಕ್ಕೆ ಹೊಡೆತ ನೀಡಲು ಮುಂದಾಗಿದೆ. ಆದರೆ, ತಮಿಳುನಾಡಿನ ಲಾಬಿಯನ್ನು ಮೀರುವ ನಿಟ್ಟಿನಲ್ಲಿ ಕರ್ನಾಟಕ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದೆ. ಹಿರಿಯ ನಾಯಕರ ಪ್ರಯತ್ನಗಳು ನಡೆಯುತ್ತಿದ್ದು ಕೇಂದ್ರ ಸರ್ಕಾರ ಕರ್ನಾಟದ ಪರ ಒಲವು ತೋರಿದ್ದಾರೆ.
ಕರ್ನಾಟಕದಲ್ಲೇ ಮಾಡಲು ದೇವೇಗೌಡರ ಒತ್ತಾಯ
ವಿಮಾನ ನಿಲ್ದಾಣ ವಿಚಾರದ ಬಗ್ಗೆ ಸೋಮವಾರ ರಾಜ್ಯಸಭೆಯಲ್ಲಿ ಚರ್ಚೆಯಾಗಿದೆ. ಸಂಸತ್‌ನ ಬಜೆಟ್ ಅಧಿವೇಶನದ ಮೂರನೇ ದಿನ ತಮಿಳುನಾಡಿನ ಎಐಎಡಿಎಂಕೆ ಸಂಸದ ಡಾ.ಎಂ.ತಂಬಿದುರೈ ಈ ವಿಷಯ ಪ್ರಸ್ತಾಪಿಸಿ ವಿಮಾನ ನಿಲ್ದಾಣ ನಮಗೆ ಕೊಡಿ ಎಂದು ಕೋರಿದ್ದಾರೆ.
ಆದರೆ, ಮಾಜಿ ಪ್ರಧಾನಿ ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕಲ್ಲಿಯೇ ಏರ್‌ಪೋರ್ಟ್ ನಿರ್ಮಾಣವಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಈಗಾಗಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಪ್ರಸ್ತಾಪಿಸಿದೆ. ಕೇಂದ್ರ ವಿಮಾನಯಾನ ಸಚಿವರ ಜೊತೆಯೂ ಈ ಬಗ್ಗೆ ಮಾತುಕತೆ ನಡೆಸಿದೆ. ನೀವು ಏನೇ ನಿರ್ಧಾರ ತೆಗೆದುಕೊಂಡರು ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಸರ್ಕಾರ ಕೂಡ ಎರಡನೇ ಏರ್‌ಪೋರ್ಟ್ ನಿರ್ಮಿಸಲು ಮುಂದಾಗಿದೆ. ಈಗಿರುವ ಬೆಂಗಳೂರು ಏರ್‌ಪೋರ್ಟ್ ನಲ್ಲಿ ಒತ್ತಡ ನಿಭಾಯಿಸಲು ಆಗುತ್ತಿಲ್ಲ. ಆದ್ದರಿಂದ ಕರ್ನಾಟಕಕ್ಕೆ ಮತ್ತೊಂದು ವಿಮಾನ ನಿಲ್ದಾಣ ಅವಶ್ಯಕತೆಯಿದೆ ಎಂದು ದೇವೇಗೌಡರು ತಮ್ಮ ವಾದವನ್ನು ಮಂಡಿಸಿದ್ದಾರೆ.
ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಮಸ್ಯೆ?
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಹೊಸ ವಿಮಾನ ನಿಲ್ದಾಣ ಮಾಡಲು ಸಾಧ್ಯವಾಗುತ್ತಿಲ್ಲ. 25 ವರ್ಷಗಳ ಕಾಲ ಬೇರೆ ಏರ್‌ಪೋರ್ಟ್ ನಿರ್ಮಿಸಬಾರದು ಎಂಬ ನಿಯಮದಿಂದ ಸಮಸ್ಯೆಯಾಗುತ್ತಿದೆ. ಈಗಾಗಲೇ ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಈ ನಿಯಮದಿಂದ ವಿನಾಯಿತಿ ನೀಡಿ ಹೊಸ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಿಸಲಾಗುತ್ತಿದೆ. ಹೊಸೂರಿನಲ್ಲಿ ತಮಿಳುನಾಡು ಸರ್ಕಾರದಿಂದ ವಿಮಾನ ನಿಲ್ದಾಣ ನಿರ್ಮಿಸಲು ಅನುಮತಿ ನೀಡಬೇಕು ಎಂದು ತಂಬಿದುರೈ ಮನವಿ ಮಾಡಿದ್ದರು .
ಪ್ರತಿಕ್ರಿಯಿಸಿದ್ದ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು, " ಬೇಡಿಕೆ ಇರುವಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ನಾವು ಬದ್ಧ. ಆದರೆ, 150 ಕಿಮೀ ಅಂತರದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣ ಆಗಬಾರದು ಎಂಬ ಒಪ್ಪಂದ ಜಾರಿಯಲ್ಲಿದೆ. ಹೊಸೂರು ಬೆಂಗಳೂರು ವಿಮಾನ ನಿಲ್ದಾಣದ 150 ಕಿಮೀ ವ್ಯಾಪ್ತಿಯಲ್ಲಿಯೇ ಇದೆ. ಹೀಗಾಗಿ ಪರಿಶೀಲನೆ ಅಗತ್ಯ ಎಂದು ಹೇಳಿದರು. ಈ ವೇಳೆ ದೇವೇಗೌಡರು ಮಧ್ಯ ಪ್ರವೇಶಿಸಿ ಕರ್ನಾಟಕದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಾಣ ಆಗಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ಏರ್‌ಪೋರ್ಟ್ ನಿರ್ಮಿಸುತ್ತೆ ಎಂಬ ಮಾಹಿತಿ ಇದೆ. ಸ್ಥಳ ಅಂತಿಮವಾದ ಬಳಿಕ ನಾವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಕೇಂದ್ರ ಸಚಿವ ರಾಮಮೋಹನ್ ನಾಯ್ಡು ತಿಳಿಸಿದ