ಟಿ20 ವಿಶ್ವಕಪ್ ಅಭಿಯಾನಕ್ಕೆ ವಿರಾಟ್ ಕೊಹ್ಲಿ ಸೇರ್ಪಡೆ

Update: 2024-06-01 06:22 GMT

ನ್ಯೂಯಾರ್ಕ್‌- ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟಿ 20 ವಿಶ್ವಕಪ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 

ತಂಡ ನ್ಯೂಯಾರ್ಕ್‌ ತಲುಪಿದ ಐದು ದಿನಗಳ ನಂತರ ಅವರು ಆಗಮಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ. ʻವಿರಾಟ್ ಕೊಹ್ಲಿ ತಂಡದ ಹೋಟೆಲ್‌ ಗೆ ಬಂದಿದ್ದು, ಸುದೀರ್ಘ ವಿಮಾನ ಪ್ರಯಾಣದ ನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ,ʼ ಎಂದು ಬಿಸಿಸಿಐ ಮೂಲಗಳು ಹೇಳಿವೆ. 

ನ್ಯೂಯಾರ್ಕ್‌ ತಲುಪಲು 16 ಗಂಟೆ ಕಾಲ ಪ್ರಯಾಣ ಮಾಡಿರುವ ಅವರು ಅಭ್ಯಾಸ ಪಂದ್ಯದಲ್ಲಿ ಭಾಗವಹಿಸುವರೇ ಮತ್ತು ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಆಡುವರೇ ಎಂಬುದನ್ನು ಕಾಯ್ದು ನೋಡಬೇಕಿದೆ. 

15 ಐಪಿಎಲ್ ಪಂದ್ಯಗಳಲ್ಲಿ ಕೊಹ್ಲಿ 741 ರನ್ ಗಳಿಸಿದ್ದಾರೆ. ಆದ್ದರಿಂದ ಅವರಿಗೆ ಅಭ್ಯಾಸ ಪಂದ್ಯದ ಅಗತ್ಯವಿಲ್ಲ. ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಮೊದಲು ಅವರು ಮೂರು ನೆಟ್ ತರಬೇತಿಯನ್ನು ಪಡೆಯುತ್ತಾರೆ.

ಶುಕ್ರವಾರ ಬೆಳಗ್ಗೆ ನಡೆದ ತರಬೇತಿಯಲ್ಲಿ ರಿಂಕು ಸಿಂಗ್, ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಪಾಲ್ಗೊಂಡಿದ್ದರು. ತಂಡದ ಆಡಳಿತ ಮತ್ತು ಬಿಸಿಸಿಐ, ಕೊಹ್ಲಿಅವರಿಗೆ ತರಬೇತಿ ಇತ್ಯಾದಿಗೆ ಸಂಬಂಧಿಸಿದಂತೆ ವಿನಾಯಿತಿ ನೀಡುತ್ತಿರುತ್ತಿದೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳೆ ವೈಯಕ್ತಿಕ ಕಾರಣಗಳಿಗಾಗಿ ಇಂಗ್ಲೆಂಡಿಗೆ ತೆರಳಲು ವಿರಾಮವನ್ನೂ ನೀಡಿತ್ತು. ಎರಡನೇ ಮಗುವಿನ ಜನನದ ವೇಳೆ ಫೆಬ್ರವರಿ-ಮಾರ್ಚ್‌ನಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅವರು ಆಡಿರಲಿಲ್ಲ.

ಟಿ20 ವಿಶ್ವಕಪ್‌ಗೆ ಮೊದಲ ಬ್ಯಾಚ್ ಮೇ 25 ರಂದು ಪ್ರಯಾಣ ಮಾಡಿದರೆ, ಎರಡನೇ ಬ್ಯಾಚ್‌ ಮೇ 28 ರಂದು ಅಮೆರಿಕಕ್ಕೆ ಆಗಮಿಸಿದೆ.

Tags:    

Similar News