ಮೇಘಸ್ಫೋಟ: ಉತ್ತರಾಖಂಡದಲ್ಲಿ ಸಿಲುಕಿದ ಕೇರಳದ ಪ್ರವಾಸಿಗರು; ರಕ್ಷಣಾ ಕಾರ್ಯಾಚರಣೆ ಚುರುಕು
ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದ ಕೇರಳದ 28 ಸದಸ್ಯರು ಮೇಘಸ್ಫೋಟ ಹಾಗೂ ಭೂಕುಸಿತ ಸಂಭವಿಸಿದ ದಿನದಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗುತ್ತಿದೆ.;
ಉತ್ತರಾಖಂಡ್ ಮೇಘಸ್ಫೋಟ
ಕೇರಳ ಮೂಲದ 28 ಪ್ರವಾಸಿಗರ ಗುಂಪು ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದ ಸಿಲುಕಿದೆ ಎಂದು ತಿಳಿದುಬಂದಿದೆ. 28 ಜನರ ಪೈಕಿ 20 ಮಂದಿ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದ ಕೇರಳಿಗರು, ಉಳಿದವರು ಕೇರಳದ ವಿವಿಧ ಜಿಲ್ಲೆಯವರಾಗಿದ್ದು, ವಾರದ ಹಿಂದೆ ದೆಹಲಿಯಿಂದ ಹರಿದ್ವಾರ, ಉತ್ತರಾಖಂಡದ ಪ್ರವಾಸಕ್ಕೆ ತೆರಳಿದ್ದರು.
ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಅವರು ಉತ್ತರಕಾಶಿಯಿಂದ ಗಂಗೋತ್ರಿಗೆ ಹೋಗಲು ಹೊರಟಿದ್ದರು ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ದುರದೃಷ್ಟವಶಾತ್ ಅದೇ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, ಅಂದಿನಿಂದ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಮುಂಬೈನಲ್ಲಿರುವ ಕೇರಳ ಸಂಘಟನೆಯ ಮಾಹಿತಿ ಪ್ರಕಾರ, ಈ ಗುಂಪು ಭೂಕುಸಿತದ ಸ್ಥಳದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿದೆ. ಮಂಗಳವಾರ ಮಧ್ಯಾಹ್ನ ಧರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದ ನಂತರ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ಐಟಿಬಿಪಿ ಯೋಧರು ತೊಡಗಿಸಿಕೊಂಡಿದ್ದಾರೆ. ಗಂಗೋತ್ರಿಗೆ ತೆರಳುವ ಪ್ರಮುಖ ಮಾರ್ಗದಲ್ಲಿರುವ ಧರಾಲಿ ಗ್ರಾಮವು ಕೆಸರು ಮತ್ತು ಅವಶೇಷಗಳಿಂದ ತುಂಬಿ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.