Sonu Nigam: ಕಿಶೋರ್ ಕುಮಾರ್ಗೆ ಪದ್ಮ ಪ್ರಶಸ್ತಿ ಕೊಡದಿರುವುದಕ್ಕೆ ಸೋನು ನಿಗಮ್ ಬೇಸರ
Sonu Nigam: ರಫಿ ಅವರು ನಿಧನ ಹೊಂದುವ 13 ವರ್ಷಗಳ ಮೊದಲು 1967ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರೆ, 1987ರಲ್ಲಿ ನಿಧನರಾದ ಕುಮಾರ್ ಅವರಿಗೆ ಅತ್ಯುನ್ನತ ಗೌರವ ಕೊಟ್ಟಿಲ್ಲ.;
ವ್ಯಕ್ತಿಗಳ ಪ್ರತಿಭೆ ಮತ್ತು ಕೊಡುಗೆಗಳನ್ನು ಗುರುತಿಸಿ ಮರಣೋತ್ತರ ಪದ್ಮಪ್ರಶಸ್ತಿಗಳನ್ನು ನೀಡಲಾಗುತ್ತಿದ್ದರೂ ಒಂದು ತಲೆಮಾರಿನ ಗಾಯಕರಿಗೆ ಸ್ಫೂರ್ತಿ ನೀಡಿದ ಕಿಶೋರ್ ಕುಮಾರ್ ಅವರನ್ನು ಪದ್ಮಶ್ರೀಗೆ ಪರಿಗಣಿಸದಿರುವ ಬಗ್ಗೆ ಗಾಯಕ ಸೋನು ನಿಗಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿಗಳನ್ನು ಘೋಷಿಸಿದ ಒಂದು ದಿನದ ನಂತರ ಭಾನುವಾರ ಇನ್ಸ್ಟಾಗ್ರಾಮ್ ವೀಡಿಯೊ ಹಂಚಿಕೊಂಡಿರುವ ಸ್ವತಃ ಪದ್ಮಶ್ರೀ ಪುರಸ್ಕೃತರಾಗಿರುವ ನಿಗಮ್, ಕಿಶೋರ್ ಅವರಲ್ಲದೆ, ಸಂಗೀತ ಕ್ಷೇತ್ರದ ಪ್ರತಿಭಾವಂತರಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್ ಮತ್ತು ಸುನಿಧಿ ಚೌಹಾಣ್ ಅವರ ಕಲಾ ಸೇವೆಯನ್ನೂ ಗುರುತಿಸಿ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.
"ಪ್ರಪಂಚದಾದ್ಯಂತದ ಗಾಯಕರಿಗೆ ಸ್ಫೂರ್ತಿ ನೀಡಿದ ಇಬ್ಬರು ಗಾಯಕರಿದ್ದಾರೆ. ನಾವು ಅವರಲ್ಲಿ ಒಬ್ಬರನ್ನು ಪದ್ಮಶ್ರೀ ಪ್ರಶಸ್ತಿಗೆ ಸೀಮಿತಗೊಳಿಸಿದ್ದೇವೆ. ಅದು ಮೊಹಮ್ಮದ್ ರಫಿ. ಇನ್ನೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯೂ ಸಿಗಲಿಲ್ಲ, ಅವರೇ ಕಿಶೋರ್ ಕುಮಾರ್" ಎಂದು ನಿಗಮ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೊಗೆ ಅವರು "ಭಾರತ ಮತ್ತು ಬಾಕಿ ಇರುವ ಪದ್ಮ ಪ್ರಶಸ್ತಿ ಪುರಸ್ಕೃತರು" ಎಂದು ಶೀರ್ಷಿಕೆ ನೀಡಿದ್ದಾರೆ.
ರಫಿ ಅವರು ನಿಧನ ಹೊಂದುವ 13 ವರ್ಷಗಳ ಮೊದಲು 1967ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರೆ, 1987ರಲ್ಲಿ ನಿಧನರಾದ ಕುಮಾರ್ ಅವರಿಗೆ ಅತ್ಯುನ್ನತ ಗೌರವ ಕೊಟ್ಟಿಲ್ಲ.
ಪದ್ಮ ಪ್ರಶಸ್ತಿ 2025ರರಲ್ಲಿ ದಿವಂಗತ ಗಾಯಕರಾದ ಶಾರದಾ ಸಿನ್ಹಾ ಮತ್ತು ಪಂಕಜ್ ಉಧಾಸ್ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಮತ್ತು ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಗಾಯಕರಾದ ಅರಿಜಿತ್ ಸಿಂಗ್ ಮತ್ತು ಜಸ್ಪಿಂದರ್ ನರುಲಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2022ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿರುವ ಸೋನು ನಿಗಮ್, ವಿವಿಧ ಕ್ಷೇತ್ರಗಳ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಕೊಡುಗೆಗಾಗಿ ಸರ್ಕಾರದ ಗೌರವ ಸಿಕ್ಕಿಲ್ಲ,ʼʼ ಎಂದರು.
ಅಲ್ಕಾ ಯಾಗ್ನಿಕ್ ಸಂಗೀತ ಕ್ಷೇತ್ರಕ್ಕೆ ಸುದೀರ್ಘ ಮತ್ತು ಅಸಾಧಾರಣ ಕೊಡುಗೆ ನೀಡಿದವರು. ಶ್ರೇಯಾ ಘೋಷಾಲ್ ಸಾಕಷ್ಟು ವರ್ಷಗಳಿಂದ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಸುನಿಧಿ ಚೌಹಾಣ್ ವಿಭಿನ್ನ ಕಂಠಸಿರಿಯಿಂದ ಒಂದು ಪೀಳಿಗೆಗೆ ಸ್ಫೂರ್ತಿ ಕೊಟ್ಟವರು. ಇವರೆಲ್ಲರಿಗೂ ಯಾವುದೇ ಗೌರವ ಪ್ರಾಪ್ತಿಯಾಗಿಲ್ಲ" ಎಂದು ಸೋನು ನಿಗಮ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ವೀಡಿಯೊದ ಕೊನೆಯಲ್ಲಿ ಸೋನು, ಪದ್ಮ ಪ್ರಶಸ್ತಿಗಳಿಗೆ ಅರ್ಹರಾಗಿರುವ ಸಂಗೀತ, ನಟನಾ, ವಿಜ್ಞಾನ ಅಥವಾ ಸಾಹಿತ್ಯ ಮತ್ತಿತರ ಕ್ಷೇತ್ರಗಳ ವ್ಯಕ್ತಿಗಳ ಹೆಸರುಗಳ ಸೂಚಿಸುವಂತೆ ಕೋರಿದ್ದಾರೆ.
"ಸೂರಜ್ ಹುವಾ ಮದ್ಧಮ್", "ಅಭಿ ಮುಜ್ ಮೇ ಕಹಿನ್", "ತುಮ್ಸೆ ಮಿಲ್ಕೆ ದಿಲ್ ಕಾ", "ರಾಮ್ ಜಾನೆ" ಮತ್ತು "ದಿವಾನಾ ಹೈ ಯೆ ಮನ್" ಸೇರಿದಂತೆ ಜನಪ್ರಿಯ ಹಾಡುಗಳಿಗೆ ಹೆಸರುವಾಸಿಯಾದ ನಿಗಮ್ 1995ರಲ್ಲಿ "ಬೇವಾಫಾ ಸನಮ್" ಚಿತ್ರದ "ಅಚ್ಚಾ ಸಿಲಾ ದಿಯಾ" ಹಾಡಿನ ಮೂಲಕ ಖ್ಯಾತಿಯನ್ನು ಪಡೆದವರು.