ಈರೋಡ್ ಸಂಸದ ಹೃದಯಾಘಾತದಿಂದ ಸಾವು
ಆತ್ಮಹತ್ಯೆಗೆ ಪ್ರಯತ್ನಿಸಿದ್ದರೇ ತಮಿಳುನಾಡು ಸಂಸದ?;
ಮಾ.28- ಹಿರಿಯ ಎಂಡಿಎಂಕೆ ನಾಯಕ, ಈರೋಡ್ ಸಂಸದ ಎ. ಗಣೇಶಮೂರ್ತಿ ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು. ಅವರು ಆತ್ಮಹತ್ಯೆಗೆ ಪ್ರಯತ್ನದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವರದಿ ಪ್ರಕಾರ, ಗಣೇಶಮೂರ್ತಿ (77) ಅವರನ್ನು ಮಾರ್ಚ್ 24 ರಂದು ಈರೋಡಿನ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿತ್ತು. ಆತ್ಮಹತ್ಯೆಗೆ ಯತ್ನಿಸಿದ ನಂತರ ಅಸೌಖ್ಯ ಅನುಭವಿಸುತ್ತಿರುವುದಾಗಿ ದೂರಿದ್ದರು. ಅವರನ್ನು ಐಸಿಯುಗೆ ದಾಖಲಿಸಿ, ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆನಂತರ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಡಿಎಂಕೆ ಪಕ್ಷದಡಿ ಈರೋಡಿನಿಂದ ಆಯ್ಕೆಯಾಗಿರುವ ಗಣೇಶಮೂರ್ತಿ, ಆಡಳಿತ ಪಕ್ಷದ ಮೈತ್ರಿ ಪಾಲುದಾರನಾದ ವೈಕೊ ನೇತೃತ್ವದ ಎಂಡಿಎಂಕೆಯಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಡಿಎಂಕೆಗೆ ತಿರುಚ್ಚಿ ಕ್ಷೇತ್ರಕ್ಕೆ ಬದಲಾಗಿ ಈರೋಡನ್ನು ಬಿಟ್ಟುಕೊಡುವ ಪಕ್ಷದ ನಿರ್ಧಾರದಿಂದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ತಿರುಚ್ಚಿ ಕ್ಷೇತ್ರದಿಂದ ವೈಕೋ ಪುತ್ರ ದುರೈ ಅವರನ್ನು ಕಣಕ್ಕಿಳಿಸಲು ಎಂಡಿಎಂಕೆ ನಿರ್ಧರಿಸಿದೆ.
ʻಪಕ್ಷದ ಟಿಕೆಟ್ ವಿಚಾರದಲ್ಲಿ ಅವರು ಸಂತಸಗೊಂಡಿದ್ದರು. ನನ್ನನ್ನು ಎರಡು ಬಾರಿ ಭೇಟಿ ಮಾಡಿದ್ದರು. ಅವರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ.ಅವರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇವೆʼ ಎಂದು ವೈಕೋ ಹೇಳಿದರು.