TM Krishna: ಟಿಎಂ ಕೃಷ್ಣಗೆ ಎಂ ಎಸ್ ಸುಬ್ಬುಲಕ್ಷ್ಮೀ ಹೆಸರಲ್ಲಿ ಪ್ರಶಸ್ತಿ ನೀಡದಂತೆ ಸುಪ್ರೀಂ ಕೋರ್ಟ್​ ಆದೇಶ

TM Krishna: ದಿವಂಗತ ಸುಬ್ಬುಲಕ್ಷ್ಮೀ ವಿರುದ್ಧ ಟಿಎಂ ಕೃಷ್ಣ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸುಬ್ಬುಲಕ್ಷ್ಮಿ ಮೊಮ್ಮಗ ವಿ.ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್.ಭಟ್ಟಿ ಅವರ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

Update: 2024-12-16 13:50 GMT
ಟಎಂ ಕೃಷ್ಣ.

ಗಾಯಕ ಟಿಎಂ ಕೃಷ್ಣ ಅವರನ್ನು ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿಗೆ ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ (ಡಿಸೆಂಬರ್ 16) ಹೇಳಿದೆ. ಕೃಷ್ಣ ಅವರು ಸುಬ್ಬುಲಕ್ಷ್ಮೀ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಅವರನ್ನು ಆ ಹೆಸರಲ್ಲಿ ಪ್ರಶಸ್ತಿಗೆ ಪರಿಗಣಿಸಬಾರದು ಎಂದು ಅವರ ಮೊಮ್ಮಗ ವಿ.ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್.ಭಟ್ಟಿ ಅವರ ನ್ಯಾಯಪೀಠ ಈ ಆದೇಶ ನೀಡಿದೆ.


ಕೃಷ್ಣ ಅವರಿಗೆ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿ ನೀಡಿರುವುದನ್ನು ಪ್ರಶ್ನಿಸಿ ಶ್ರೀನಿವಾಸನ್ ಅವರು ದಾವೆ ಹೂಡಿದ್ದರು. ಕೃಷ್ಣ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಜ್ಜಿಯ ವಿರುದ್ಧ ", ನಿಂದನಾತ್ಮಕ ಮತ್ತು ಮಾನಹಾನಿಕರ ಹೇಳಿಕೆ " ದಾಖಲಿಸಿದ್ದರು. ಇದರಿಂದ ಅವರ ಖ್ಯಾತಿಗೆ ಹಾನಿಯಾಗಿದೆ. ಹೀಗಾಗಿ ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಅವರು ಶ್ರೀನವಾಸನ್​ ಅವರು ಆರೋಪಿಸಿದ್ದರು.

"ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಸಂಗೀತ ಪ್ರೇಮಿಗಳಿಂದ ಪಡೆದಿರುವ ಅಪಾರ ಗೌರವವನ್ನು ನ್ಯಾಯಾಲಯ ಗಮನಿಸಿದೆ. ಅವರು ಸುಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಡಿಸೆಂಬರ್, 2004ರಲ್ಲಿ ಅವರು ನಿಧನರಾದರೂ ಅವರ ಸುಮಧುರ ಧ್ವನಿ ಅವರ ಎಲ್ಲರಿಗೂ ಸಂತೋಷ ತರುತ್ತಿದೆ" ಎಂದು ನ್ಯಾಯಪೀಠ ಈ ಆದೇಶ ನೀಡುವ ವೇಳೆ ಅಭಿಪ್ರಾಯಪಟ್ಟಿದೆ .

"4ನೇ ಪ್ರತಿವಾದಿ ಟಿ.ಎಂ.ಕೃಷ್ಣ ಅವರನ್ನು ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿಗೆ ಸ್ವೀಕರಿಸಬಾರದು ಎಂದು ಹೇಳುವುದು ಸೂಕ್ತವೆಂದು ನಾವು ಭಾವಿಸುತ್ತೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೃಷ್ಣ ಅವರಿಗೆ ಪ್ರಶಸ್ತಿ ನೀಡದಂತೆ ನಗರ ಮೂಲದ ಮ್ಯೂಸಿಕ್ ಅಕಾಡೆಮಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಶ್ರೀನಿವಾಸನ್ ಸುಪ್ರೀಂ ಕೋರ್ಟ್ ಮುಂದೆ ಪ್ರಶ್ನಿಸಿದ್ದರು.

ಮ್ಯೂಸಿಕ್ ಅಕಾಡೆಮಿ, ದಿ ಹಿಂದೂ ಮತ್ತು ಟಿಎಚ್ ಜಿ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್ ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಸುಬ್ಬುಲಕ್ಷ್ಮಿ ಅವರನ್ನು ಅವಮಾನಿಸುವ ಲೇಖನಗಳನ್ನು ಕೃಷ್ಣ ಬರೆದಿದ್ದದ್ದರು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ದಾಖಲೆ ಸಲ್ಲಿಸಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ. 

Tags:    

Similar News