ಕನ್ಯಾಕುಮಾರಿಗೆ ಆಗಮಿಸಿದ ಪ್ರಧಾನಿ

Update: 2024-05-30 12:50 GMT

ವಿವೇಕಾನಂದ ಸ್ಮಾರಕದಲ್ಲಿ 45 ಗಂಟೆಗಳ ಧ್ಯಾನಕ್ಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಕನ್ಯಾಕುಮಾರಿಗೆ ಆಗಮಿಸಿದರು. 

ತಿರುವನಂತಪುರದಿಂದ ಆಗಮಿಸಿದ ಅವರು ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಆನಂತರ ವಿವೇಕಾನಂದ ಸ್ಮಾರಕವನ್ನು ತಲುಪಿ ಎರಡು ದಿನಗಳ ಕಾಲ ಧ್ಯಾನಮಗ್ನರಾಗಿರುತ್ತಾರೆ. ಜೂನ್ 1 ರಂದು ನಿರ್ಗಮಿಸುವ ಮೊದಲು, ಪಕ್ಕದಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಎರಡನ್ನೂ ಸಣ್ಣ ದ್ವೀಪಗಳ ಮೇಲೆ ನಿರ್ಮಿಸಲಾಗಿದೆ; ಅವು ಸಮುದ್ರದಲ್ಲಿ ಪ್ರತ್ಯೇಕವಾಗಿರುವ, ದಿಬ್ಬದಂತಹ ಕಲ್ಲಿನ ರಚನೆಗಳಾಗಿವೆ. 

ಮೋದಿ ಅವರ 45 ಗಂಟೆಗಳ ವಾಸ್ತವ್ಯಕ್ಕಾಗಿ ಭಾರೀ ಭದ್ರತೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. 2019 ರಲ್ಲಿ ಚುನಾವಣೆ ಪ್ರಚಾರ ಅಂತ್ಯಗೊಂಡ ನಂತರ ಕೇದಾರನಾಥ ಗುಹೆಯಲ್ಲಿ ಧ್ಯಾನ ಕೈಗೊಂಡಿದ್ದರು. 

ವಿವೇಕಾನಂದರು 'ಭಾರತ ಮಾತೆʼಯ ದರ್ಶನ ಪಡೆದರು ಎಂದು ನಂಬಲಾದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನ ಮಾಡಲಿದ್ದಾರೆ. ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆಯಲ್ಲದೆ, 2000 ಪೊಲೀಸರು ಕಾವಲು ಕಾಯಲಿದ್ದಾರೆ.

Tags:    

Similar News