ಟಿ20 ವಿಶ್ವಕಪ್ 2024| ಭಾರತದ 11 ವರ್ಷಗಳ ಐಸಿಸಿ ಟ್ರೋಫಿ ಬರ ಕೊನೆಗೊಳ್ಳುವುದೇ?

Update: 2024-05-31 12:54 GMT
ನ್ಯೂಯಾರ್ಕ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ಆಟಗಾರರು

ನ್ಯೂಯಾರ್ಕ್, ಮೇ 31- ಆಟವೆಂದರೆ ಸಾಮಾನ್ಯ ತಂಡಗಳು, ಅಸಾಮಾನ್ಯರು, ಗೆಲುವಿನ ಹಂತದಲ್ಲಿ ಸೋಲುವವರು ಮತ್ತು ಅನಿರೀಕ್ಷಿತವಾಗಿ ಗೆಲ್ಲುವವರು ಇರುತ್ತಾರೆ. ಆದರೆ, 20 ತಂಡಗಳಿರುವ ಟಿ 20 ಟೂರ್ನಿ ಭರ್ಜರಿಯಾಗಿರುತ್ತದೆ. ಈ ತಂಡಗಳು ಶನಿವಾರದಂದು ಅಮೆರಿಕದ ಮಾರುಕಟ್ಟೆಗೆ ನುಗ್ಗುವುದು ಅಭೂತಪೂರ್ವ ಘಟನೆಯಾಗಲಿದೆ. 

ಭಾರತ ಟ್ರೋಫಿಯನ್ನು ಪಡೆಯಲು ಉತ್ಸುಕವಾಗಿದ್ದರೂ, ಆಸ್ಟ್ರೇಲಿಯ ತನ್ನ ಯಶಸ್ಸಿನ ಕಥೆಗೆ ಮತ್ತೊಂದು ಅಧ್ಯಾಯವನ್ನು ಸೇರಿಸಲು ಬಯಸುತ್ತಿದೆ. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್‌ ತಂಡಗಳು ಅತ್ಯಂತ ಅಸಮರ್ಪಕ ಸಮಯದಲ್ಲಿ ಕೈ ಚೆಲ್ಲುವ ಪ್ರವೃತ್ತಿಯನ್ನು ನಿಯಂತ್ರಿಸಬೇಕಿದೆ. 

ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಕೂಡ ಪರಿಗಣಿಸಬೇಕಾದ ತಂಡಗಳಾಗಿವೆ. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್ ಮತ್ತು ಕಗಿಸೊ ರಬಾಡರಂತಹ ಪಂದ್ಯವನ್ನು ಗೆಲ್ಲಬಲ್ಲ ಆಟಗಾರರ ಉಪಸ್ಥಿತಿಯನ್ನು ಗಮನಿಸಿದರೆ, ಆಫ್ರಿಕ ಕೊನೆಗಳಿಗೆಯಲ್ಲಿ ಉಸಿರು ಕಟ್ಟುವವರು(ಚೋಕ‌ರ್)‌ ಎಂಬ ಹಣೆಪಟ್ಟಿ ತೊಡೆದುಹಾಕಲು ಪ್ರಯತ್ನಿಸಬೇಕಿದೆ. 

ಇದೊಂದು ಅಸಾಮಾನ್ಯ ಟೂರ್ನಿ ಎನ್ನುವುದು ಗಾತ್ರದಿಂದ ಮಾತ್ರವಲ್ಲ: ಕ್ರಿಕೆಟ್‌ ಲೋಕಕ್ಕೆ ಅಮೆರಿಕದ ಪ್ರವೇಶವನ್ನು ಅಧಿಕೃತವಾಗಿ ಖಚಿತಪಡಿಸುತ್ತದೆ. 29 ದಿನಗಳಲ್ಲಿ ಆಡಲಾಗುವ 55 ಪಂದ್ಯಗಳಲ್ಲಿ 16 ಪಂದ್ಯಗಳನ್ನು ಅಮೆರಿಕ ಆಯೋಜಿಸುತ್ತದೆ. ಸೂಪರ್ 8 ಹಂತ, ಸೆಮಿಫೈನಲ್ ಮತ್ತು ಜೂನ್ 29 ರಂದು ಫೈನಲ್ ಸೇರಿದಂತೆ ಉಳಿದ 39 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿವೆ. 

ಮೆಚ್ಚಿನ ತಂಡಗಳ ಜೊತೆಗೆ, ಅಫ್ಘಾನಿಸ್ತಾನದಂತಹ ತಂಡ ಅತ್ಯಂತ ಅನಿರೀಕ್ಷಿತವಾಗಿ ಅಚ್ಚುಮೆಚ್ಚಿನ ತಂಡವನ್ನು ಸೋಲಿಸುವ ಸಾಧ್ಯತೆಯನ್ನು ತೆಗೆದುಹಾಕುವಂತಿಲ್ಲ.

ಭಾರತಕ್ಕೆ ಅಪರೂಪದ ಅವಕಾಶ:  ಮುಂದಿನ ಒಂದು ತಿಂಗಳ ಅವಧಿಯಲ್ಲಿ ಹಲವು ಅನಿರೀಕ್ಷಿತಗಳು ಸಂಭವಿಸಬಹುದು. ಇದರಲ್ಲಿ ಬಹುಶಃ ಅತ್ಯಂತ ಆಸಕ್ತಿದಾಯಕವೆಂದರೆ, ಐಸಿಸಿ ಟ್ರೋಫಿಗೆ ಅರ್ಹವಾದ ಭಾರತ ತಂಡದ ಕಥೆ. 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಜಯದ ಐಸಿಸಿ ಟ್ರೋಫಿ ಕೈಗೆ ಎಟುಕದೆ ಉಳಿದುಕೊಂಡಿದೆ.

ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಸವಾಲು ಇದೆ. ಭಾರತ ತಂಡದ ಸಾಟಿಯಿಲ್ಲದ ಸಂಪನ್ಮೂಲ ಮತ್ತು ಬಲವನ್ನು ಪರಿಗಣಿಸಿದರೆ, ಕಳೆದ ದಶಕದಲ್ಲಿ ಟ್ರೋಫಿ ಬರ ಏಕೆ ಬಂದಿತು ಎಂಬುದನ್ನು ವಿವರಿಸುವುದು ಕಷ್ಟಕರ. ರೋಹಿತ್ ಅವರಿಗಿಂತ ಮೊದಲು ವಿರಾಟ್ ಕೊಹ್ಲಿ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿ ತಮ್ಮ ಅಧಿಕಾರಾವಧಿ ಕೊನೆಗೊಳಿಸಿದರು. ಆದರೆ, ಜಾಗತಿಕ ಟ್ರೋಫಿ ಅವರಿಗೆ ದಕ್ಕಲಿಲ್ಲ. ಈಗ ರೋಹಿ ತ್ ಹೆಗಲಿನ ಮೇಲೆ ವಿಶ್ವ ಪ್ರಶಸ್ತಿಯನ್ನು ಗೆಲ್ಲುವ ಹೊರೆ ಬಿದ್ದಿದೆ. ಕಳೆದ 12 ತಿಂಗಳುಗಳಲ್ಲಿ ತಂಡ ತವರಿನಲ್ಲಿ ನಡೆದ ಒಂದು ದಿನದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಸೋಲು ಸೇರಿದಂತೆ ಎರಡು ಐಸಿಸಿ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಹಿಂದಿನ ಎರಡು ಟಿ20 ವಿಶ್ವಕಪ್‌ಗಳಲ್ಲಿ ತಂಡದ ಹಳೆಯ ಕಾರ್ಯವಿಧಾನ ದುಬಾರಿಯಾಗಿ ಪರಿಣಮಿಸಿತು. ಆದರೆ, ಈ ಬಾರಿ ಅಮೆರಿಕದಲ್ಲಿ ಹಳೆಯ ತಪ್ಪುಗಳನ್ನು ಪುನರಾವರ್ತಿಸುವ ಸಾಧ್ಯತೆಯಿಲ್ಲ. 

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಬ್ಯಾಟರ್‌ಗಳು ಹೇಗೆ ಸಾಮರ್ಥ್ಯ ಮೀರಿ ಆಟವಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ ಮತ್ತು ಮೊದಲು ಬ್ಯಾಟ್‌ ಮಾಡುವವರು ಈ ಅಪಾಯಕರ ಮಾರ್ಗವನ್ನು ಅನುಸರಿಸುವ ಅಗತ್ಯವಿದೆ. ಕೆಲ ವು ಪ್ರತಿಸ್ಪರ್ಧಿ ತಂಡಗಳಿಗೆ ಹೋಲಿಸಿದರೆ ಭಾರತ ತಂಡ ಬ್ಯಾಟಿಂಗ್ ಫೈರ್‌ಪವರ್ ಹೊಂದಿಲ್ಲದೆ ಇರಬಹುದು. ಆದರೆ ಕೆರಿಬಿಯನ್‌ನಲ್ಲಿ ರುವ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಜೂನ್ 1 ರಂದು ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿರುವ ಭಾರತ, ಜೂನ್ 5 ರಂದು ಅದೇ ಕ್ರೀಡಾಂಗಣದಲ್ಲಿ ಆರಂ ಭಿಕ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಎದುರಿಸಲಿದೆ. ಜೂನ್ 9 ರಂದು ಪಾಕಿಸ್ತಾನ ವಿರುದ್ಧ ಮುಖ್ಯ ಪಂದ್ಯ ನಡೆಯಲಿದೆ. 

ಅಮೆರಿಕ ಮತ್ತು ಕೆನಡದ ಪ್ರವೇಶ:  ಅಮೆರಿಕ ಮತ್ತು ಕೆನಡಾ ನಡುವೆ ಮೊದಲ ಪಂದ್ಯ 1844 ರಲ್ಲಿ ನಡೆಯಿತು. ಆದರೆ, ಹೆಚ್ಚುಕಾಲ ಉಳಿಯದೆ ಬೇಸ್‌ಬಾಲ್‌ಗೆ ದಾರಿ ಮಾಡಿಕೊಟ್ಟಿತು. ಶತಮಾನಗಳ ನಂತರ ಅಮೆರಿಕನ್ ಕ್ರೀಡಾ ಮಾರುಕಟ್ಟೆಯಲ್ಲಿ ತನ್ನದೇ ಆದ ಜಾಗಕ್ಕಾಗಿ ಪ್ರಯತ್ನ ಮಾಡುತ್ತಿದೆ. ಶನಿವಾರದಂದು ಡಲ್ಲಾಸ್‌ನಲ್ಲಿ ಅಮೆರಿಕ-ಕೆನಡಾದ ಆರಂಭಿಕ ಪಂದ್ಯ ನಡೆಯಲಿದೆ. ಅಮೆರಿಕ ದ್ವಿಪಕ್ಷೀಯ ಸರಣಿಯಲ್ಲಿ ಕೆನಡಾ ಮತ್ತು ಇತ್ತೀಚೆಗೆ ಬಾಂಗ್ಲಾದೇಶವನ್ನು ಸೋಲಿಸಿದ್ದು,ತಂಡವನ್ನು ಲಘುವಾಗಿ ಪರಿಗಣಿಸಲು ಆಗುವುದಿಲ್ಲ. 

ಈ ಹಿಂದೆ ಒಡಿಐ ವಿಶ್ವ ಕಪ್‌ನಲ್ಲಿ ಕಾಣಿಸಿಕೊಂಡಿರುವ ಕೆನಡಾ, ಶನಿವಾರ ಟಿ20 ವಿಶ್ವಕಪ್‌ಗೆ ಸದಾರ್ಪಣೆ ಮಾಡಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್‌ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸವಾಲು ಇದೆ. ಆರು ತಿಂಗಳ ಹಿಂದೆ ಭಾರತದಲ್ಲಿ ನಡೆದ ಒಡಿಐ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‌ ಕಳಪೆ ಪ್ರದರ್ಶನ ನೀಡಿತು. ಜೋಸ್ ಬಟ್ಲರ್ ತಮ್ಮನ್ನು ಸಾಬೀತುಪಡಿಸಿಕೊಳ್ಳ ಬೇಕಿದೆ.

ಆಸ್ಟ್ರೇಲಿಯದ ನೂತನ ನಾಯಕ ಮಿಚೆಲ್ ಮಾರ್ಷ್‌ಗೆ ಇದು ಕಠಿಣ ಪರೀಕ್ಷೆಯಾಗಿರಲಿದೆ. ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್, ತವರಿನ ಅನುಭವ ಪ್ರಯೋಜನಕ್ಕೆ ಬರಲಿದೆ. 

ಪಾಕಿಸ್ತಾನ ಜೂನ್ 6 ರಂದು ಅಮೆರಿಕ ವಿರುದ್ಧ ಆರಂಭಿಕ ಪಂದ್ಯ ಆಡಲಿದೆ. ಅಗ್ರ ಸ್ಥಾನದಲ್ಲಿ ಸೈಮ್ ಅಯೂಬ್ ಉತ್ತಮ ಪ್ರದರ್ಶನ ನೀಡಿಲ್ಲ. ಆದ್ದರಿಂದ, ಮೊಹಮ್ಮದ್ ರಿಜ್ವಾನ್ ಜೊತೆಗೆ ನಾಯಕ ಬಾಬರ್ ಅಜಮ್ ಅವರನ್ನು ಮೊದಲು ಬ್ಯಾಟ್‌ ಮಾಡಲು ಕಳಿಸಲಾಗುತ್ತದೆಯೇ ಎಂದು ನೋಡಬೇಕಿದೆ. ನಿವೃತ್ತಿ ಪಡೆದಿದ್ದ ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸಿಮ್ ಅವರು ಅನುಭವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. 

Tags:    

Similar News