Supreme Court | ಇವಿಎಂ ಬದಲಿಗೆ ಮತ ಪತ್ರ ಬಳಕೆಗೆ ಮನವಿ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಇವಿಎಂಗಳನ್ನು ತಿರುಚಲಾಗುತ್ತದೆ. ಹೀಗಾಗಿ ಮತಪತ್ರಗಳ ವ್ಯವಸ್ಥೆ ಮತ್ತೆ ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಬಿ ವರಲೆ ಅವರ ನ್ಯಾಯಪೀಠ ತೀರ್ಪು ನೀಡಿದೆ.;
ದೇಶದ ಚುನಾವಣೆಗಳಲ್ಲಿ ಮತ ಪತ್ರಗಳನ್ನು ಮರು ಜಾರಿಗೆ ತರಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಆದೇಶ ನೀಡಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇವಿಎಂಗಳನ್ನು ತಿರುಚಲಾಗುತ್ತದೆ. ಹೀಗಾಗಿ ಮತಪತ್ರಗಳ ವ್ಯವಸ್ಥೆ ಮತ್ತೆ ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಬಿ ವರಲೆ ಅವರ ನ್ಯಾಯಪೀಠ, "ಈಗ ಪರಿಸ್ಥಿತಿ ಏನಾಗಿದೆ ಎಂದರೆ, ಚುನಾವಣೆಯಲ್ಲಿ ಗೆದ್ದಾಗ ಇವಿಎಂಗಳನ್ನು (ಎಲೆಕ್ಟ್ರಾನಿಕ್ ಮತದಾನ ಯಂತ್ರ) ಸರಿ ಇರುತ್ತದೆ. ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ ಎಂಬ ಮಾತು ಕೇಳಿಬರುತ್ತದೆ" ಎಂದು ಅಭಿಪ್ರಾಯಟ್ಟಿದೆ.
ಮತಪತ್ರದ ಹೊರತಾಗಿ, ಮತದಾನದ ಸಮಯದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರ ವಸ್ತುಗಳನ್ನು ವಿತರಿಸಿರುವುದು ಸಾಬೀತಾದರೆ ಅಭ್ಯರ್ಥಿಗಳನ್ನು ಕನಿಷ್ಠ ಐದು ವರ್ಷಗಳವರೆಗೆ ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವುದು ಸೇರಿದಂತೆ ಹಲವಾರು ಸಂಗತಿಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಅರ್ಜಿದಾರ ಕೆ.ಎ.ಪಾಲ್ ಅವರು, ಪಿಐಎಲ್ ಸಲ್ಲಿಸಿರುವುದಾಗಿ ಕೋರ್ಟ್‌ಗೆ ಮುಂದೆ ಹೇಳಿದಾಗ, "ನಿಮ್ಮ ಬಳಿ ಆಸಕ್ತಿದಾಯಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ. ಈ ಅದ್ಭುತ ಆಲೋಚನೆಗಳನ್ನು ನೀವು ಹೇಗೆ ಸಿಗುತ್ತವೆ ಎಂದು ನ್ಯಾಯಪೀಠ ಪ್ರಶ್ನಿಸಿತು
ಪ್ರಶ್ನೋತ್ತರ
ಮೂರು ಲಕ್ಷಕ್ಕೂ ಹೆಚ್ಚು ಅನಾಥರು ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಸಂಘಟನೆಯ ಅಧ್ಯಕ್ಷ ನಾನು ಎಂದು ಅರ್ಜಿದಾರ ಕೆ. ಎ ಪಾಲ್ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, "ನೀವು ಈ ರಾಜಕೀಯ ರಂಗಕ್ಕೆ ಏಕೆ ಪ್ರವೇಶ ಮಾಡುತ್ತಿದ್ದೀರಿ? ನಿಮ್ಮ ಕೆಲಸದ ಕ್ಷೇತ್ರವು ವಿಭಿನ್ನ ಅಲ್ಲವೇ" ಎಂದು ನ್ಯಾಯಪೀಠ ಪ್ರಶ್ನಿಸಿತು .
ಈ ವೇಳೆ ಅರ್ಜಿದಾರ ಪಾಲ್, ತಾನು 150 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು. ಈ ವೇಳೆ ನ್ಯಾಯಾಧೀಶರು, ನೀವು ಭೇಟಿ ನೀಡಿದ ಎಲ್ಲ ರಾಷ್ಟ್ರಗಳು ಬ್ಯಾಲೆಟ್ ಮತ ಒತ್ರ ಹೊಂದಿದೆಯೇ ಅಥವಾ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆ ಹೊಂದಿದೆಯೇ ಎಂದು ಕೇಳಿದರು.
ಈ ವೇಳೆ ಅವರು ಮುಂದುವರಿದ ದೇಶಗಳೂ ಮತ ಪತ್ರವನ್ನು ಅಳವಡಿಸಿಕೊಂಡಿವೆ ಮತ್ತು ಭಾರತವು ಇದನ್ನು ಅನುಸರಿಸಬೇಕು ಎಂದು ಅರ್ಜಿದಾರರು ಹೇಳಿದರು. ಆಗ ನ್ಯಾಯಪೀಠ "ನೀವು ಪ್ರಪಂಚದ ಉಳಿದ ದೇಶಗಳಿಗಿಂತ ಭಿನ್ನವಾಗಿರಲು ಏಕೆ ಬಯಸುವುದಿಲ್ಲ?" ಎಂದು ನ್ಯಾಯಪೀಠ ಪ್ರಶ್ನಿಸಿದರು.
2024ನೇ ವರ್ಷದ ಚುನಾವಣೆಯಲ್ಲಿ ಅಕ್ರಮ ನಡೆದಿದೆ. 9,000 ಕೋಟಿ ರೂಪಾಯಿ ಅಕ್ರಮ ಮೊತ್ತವನ್ನು ವಶಪಡಿಸಿಕೊಂಡಿರುವುದಾಗಿ ಜೂನ್‌ನಲ್ಲಿ ಚುನಾವಣಾ ಆಯೋಗ ಮಾಹಿತಿ ನೀಡಿತ್ತು ಎಂದು ಪಾಲ್ ಉತ್ತರಿಸಿದರು.
ಈ ವೇಳೆ ಕೋರ್ಟ್, ಮತಪತ್ರಕ್ಕೂ ಇದಕ್ಕೂ ಏನು ಸಂಬಂಧ. ಮತ ಪತ್ರದ ಚುನಾವಣೆ ಜಾರಿಗೆ ಬಂದರೆ ಭ್ರಷ್ಟಾಚಾರ ಇರುವುದಿಲ್ಲವೇ?" ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಪಾಲ್, ಟೆಸ್ಲಾ ಸಿಇಒ ಮತ್ತು ಸಹ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಇವಿಎಂಗಳನ್ನು ತಿರುಚಬಹುದು ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೂ ಇವಿಎಂಗಳನ್ನು ತಿರುಚಬಹುದು ಹೇಳಿಕೆ ನೀಡಿದ್ದಾರೆ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.
ಸೋತಾಗ ಹೇಳಿದ್ದು!
"ಚಂದ್ರಬಾಬು ನಾಯ್ಡ ತಾವು ಸೋತಾಗ, ಇವಿಎಂಗಳನ್ನು ತಿರುಚಬಹುದು ಎಂದು ಹೇಳಿಕೆ ನೀಡಿದ್ದಾರೆ. ಈಗ ಈ ಬಾರಿ ಜಗನ್ ಮೋಹನ್ ರೆಡ್ಡಿ ಸೋತಿದ್ದಾರೆ, ಇವಿಎಂಗಳನ್ನು ತಿರುಚಬಹುದು ಎಂದು ಅವರು ಹೇಳಿದ್ದಾರೆ " ಎಂದು ನ್ಯಾಯಪೀಠ ಹೇಳಿತು.
ಚುನಾವಣೆ ವೇಳೆ ಹಣ ವಿತರಿಸಲಾಗಿದೆ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದು ಅರ್ಜಿದಾರರು ಹೇಳಿದರು. ಆಗ ಕೋರ್ಟ್ "ನಾವು ಯಾವುದೇ ಚುನಾವಣೆಯಲ್ಲಿ ಯಾವುದೇ ಹಣವನ್ನು ಸ್ವೀಕರಿಸಿಲ್ಲ" ಎಂದು ಹೇಳಿತು.
ಚುನಾವಣಾ ಪ್ರಚಾರದ ಸಮಯದಲ್ಲಿ ಹಣ ಮತ್ತು ಮದ್ಯದ ಬಳಕೆ ನಿಯಂತ್ರಿಸಲು ಸಮಗ್ರ ನೀತಿ ರೂಪಿಸುವುದು ತಮ್ಮ ಮನವಿಯಲ್ಲಿನ ಮತ್ತೊಂದು ಪ್ರಾರ್ಥನೆ ಎಂದು ಅರ್ಜಿದಾರರು ಹೇಳಿದರು. ಅದೇ ರೀತಿ ಮತದಾರರ ಶಿಕ್ಷಣ ಅಭಿಯಾನ ಕಡ್ಡಾಯಗೊಳಿಸಲು ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಇಂದು ಶೇ.32ರಷ್ಟು ವಿದ್ಯಾವಂತರು ಮತ ಚಲಾಯಿಸುತ್ತಿಲ್ಲ. ಪ್ರಜಾಪ್ರಭುತ್ವವು ಈ ರೀತಿ ಸಾಯುತ್ತಿದ್ದರೆ ಮತ್ತು ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿಯೂ ಅರ್ಜಿದಾರರು ಹೇಳಿದರು.