ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಗುರುದ್ವಾರದಲ್ಲಿ ಗುಂಡಿನ ದಾಳಿ
ಅಕಾಲ್ ತಖ್ತ್ ಘೋಷಿಸಿದ 'ತಂಖಾ' (ಧಾರ್ಮಿಕ ಶಿಕ್ಷೆ) ಅಡಿಯಲ್ಲಿ 'ಸೇವಾದಾರ್' ಕರ್ತವ್ಯವನ್ನು ನಿರ್ವಹಿಸಲು ಬಾದಲ್ ಮತ್ತು ಇತರ ಎಸ್ಎಡಿ ನಾಯಕರು ಮಂಗಳವಾರ ಗೋಲ್ಡನ್ ಟೆಂಪಲ್ಗೆ ಬಂದು ಕೆಲಸ ಆರಂಭಿಸಿದಾಗ ದಾಳಿ ನಡೆಸಿದ್ದರು.
ಶಿರೋಮಣಿ ಅಕಾಲಿ ದಳ (ಎಸ್ಎಡಿ) ಮುಖಂಡ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಬುಧವಾರ (ಡಿಸೆಂಬರ್ 4) ಅಮೃತಸರದ ಗೋಲ್ಡನ್ ಟೆಂಪಲ್ ಹೊರಗೆ ಗುಂಡಿನ ದಾಳಿ ನಡೆದಿದೆ. ಅಲ್ಲಿ ಅವರು ಶ್ರೀ ಅಕಾಲ್ ತಖ್ತ್ ಸಾಹಿಬ್ ಘೋಷಿಸಿದ ಧಾರ್ಮಿಕ ಶಿಕ್ಷೆ ಅನುಭವಿಸುತ್ತಿದ್ದಾರೆ.
ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತು ಇಲ್ಲಿಯವರೆಗೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಮಾಜಿ ಉಗ್ರಗಾಮಿ ಎಂದು ಹೇಳಲಾದ ನರೈನ್ ಸಿಂಗ್ ಚೌರಾ ಎಂದು ದಾಳಿ ನಡೆಸಿದ ಶೂಟರ್ ಎಂದು ಹೇಳಲಾಗಿದೆ.
ಬಾದಲ್ ಬಳಿ ನಿಂತುಕೊಂಡೇ ಚೌರಾ ಗುಂಡು ಹಾರಿಸಲಯ ಯತ್ನಿಸಿದ್ದಾರೆ. ಆದಾಗ್ಯೂ, ಹತ್ತಿರದಲ್ಲಿ ನಿಂತಿದ್ದ 'ಸೇವಾದಾರ್' (ಸ್ವಯಂಸೇವಕ) ಸಮಯಕ್ಕೆ ಸರಿಯಾಗಿ ಅವರ ಕೈಯನ್ನು ಮೇಲಕ್ಕೆ ಎತ್ತಿ ಗುಂಡು ನೇರವಾಗಿ ಬೀಳುವುದನ್ನು ತಪ್ಪಿಸಿದ್ದರು.
ಗೋಲ್ಡನ್ ಟೆಂಪಲ್ನಲ್ಲೇ ದಾಳಿ
ಅಕಾಲ್ ತಖ್ತ್ ಘೋಷಿಸಿದ 'ತಂಖಾ' (ಧಾರ್ಮಿಕ ಶಿಕ್ಷೆ) ಅಡಿಯಲ್ಲಿ 'ಸೇವಾದಾರ್' ಕರ್ತವ್ಯವನ್ನು ನಿರ್ವಹಿಸಲು ಬಾದಲ್ ಮತ್ತು ಇತರ ಎಸ್ಎಡಿ ನಾಯಕರು ಮಂಗಳವಾರ ಗೋಲ್ಡನ್ ಟೆಂಪಲ್ಗೆ ಬಂದು ಕೆಲಸ ಆರಂಭಿಸಿದಾಗ ದಾಳಿ ನಡೆಸಿದ್ದರು.
ಮೂಳೆ ಮುರಿತದಿಂದಾಗಿ ಪ್ರಸ್ತುತ ಗಾಲಿಕುರ್ಚಿಯಲ್ಲಿರುವ ಬಾದಲ್ ಮಂಗಳವಾರ ಗೋಲ್ಡನ್ ಟೆಂಪಲ್ ಹೊರಗೆ ನೀಲಿ 'ಸೇವಾದಾರ್' ಸಮವಸ್ತ್ರದಲ್ಲಿ, ಒಂದು ಕೈಯಲ್ಲಿ ಈಟಿಯನ್ನು ಹಿಡಿದು ನಿಂತುಕೊಂಡಿದ್ದರು. ಕುತ್ತಿಗೆಯಲ್ಲಿ ತಮ್ಮ "ಪಾಪಗಳನ್ನು" ಒಪ್ಪಿಕೊಳ್ಳುವ ಬೋರ್ಡ್ ನೇತು ಹಾಕಿಕೊಂಡಿದ್ದರು.
ವಯೋಸಹಜ ಕಾರಣದಿಂದಾಗಿ ಗಾಲಿಕುರ್ಚಿಯಲ್ಲಿದ್ದ ಮತ್ತೊಬ್ಬ ಹಿರಿಯ ಅಕಾಲಿ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಕೂಡ ಇದೇ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಸುಖ್ಬೀರ್ ಅವರಲ್ಲದೆ ಮಾಜಿ ಸಚಿವರಾದ ಬಿಕ್ರಮ್ ಸಿಂಗ್ ಮಜಿಥಿಯಾ ಮತ್ತು ದಲ್ಜಿತ್ ಸಿಂಗ್ ಚೀಮಾ ಅವರು ಪಾತ್ರೆಗಳನ್ನು ತೊಳೆದು ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆ.
2007 ರಿಂದ 2017 ರವರೆಗೆ ಪಂಜಾಬ್ನಲ್ಲಿ ಅಕಾಲಿದಳ ಸರ್ಕಾರ ಮಾಡಿದ "ಪಾಪಗಳಿಗೆ" 'ತಂಖಾ' ನೀಡಲಾಗಿದೆ.