ವೇತನದ ಪ್ರಮಾಣಿತ ಕಡಿತ 75,000 ರೂ.ಗೆ ಹೆಚ್ಚಳ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಉದ್ಯೋಗದಾತರ ಕೊಡುಗೆಯ ಕಡಿತದ ಮಿತಿಯನ್ನು ಶೇ.10 ರಿಂದ ಶೇ.14 ಕ್ಕೆ ಹೆಚ್ಚಿಸಲಾಗಿದೆ;

Update: 2024-07-23 08:31 GMT

2024-25ರ ಹೊಸ ಆದಾಯ ತೆರಿಗೆ ಪದ್ಧತಿಯಡಿ ಸಂಬಳ ಪಡೆಯುವ ಉದ್ಯೋಗಿಗಳ ಪ್ರಮಾಣಿತ ಕಡಿತವನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಹೇಳಿದ್ದಾರೆ.

ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಇದು ಅನ್ವಯಿಸುತ್ತದೆ. ʻಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಪ್ರಮಾಣಿತ ಕಡಿತವನ್ನು 75,000 ರೂ.ಗೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)ಗೆ ಉದ್ಯೋಗದಾತರ ಕೊಡುಗೆಗೆ ಕಡಿತದ ಮಿತಿಯನ್ನು ಶೇ.10 ರಿಂದ 14 ಕ್ಕೆ ಹೆಚ್ಚಿಸಲಾಗಿದೆ,ʼ ಎಂದು ಹೇಳಿದರು.

ಕುಟುಂಬ ಪಿಂಚಣಿ: ಪಿಂಚಣಿ ಮೇಲಿನ ತೆರಿಗೆ ಕಡಿತವನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ. ಈ ಬದಲಾವಣೆಗಳಿಂದ ವೇತನದಾರರು ವಾರ್ಷಿಕ 17,500 ರೂ.ವರೆಗೆ ತೆರಿಗೆ ಉಳಿಸುತ್ತಾರೆ ಎಂದು ಸಚಿವರು ಹೇಳಿದರು.

ಶೇ. 2 ರಷ್ಟು ಸಮೀಕರಣ ತೆರಿಗೆಯನ್ನು ಹಿಂಪಡೆಯುವುದಾಗಿ ಅವರು ಘೋಷಿಸಿದರು.

Tags:    

Similar News