ಬಾಲಿವುಡ್ ನಟ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ ಮಾಲೀಕ ಶಾರುಖ್ ಖಾನ್, ಪ್ರಶಸ್ತಿಯನ್ನು ಗೆದ್ದ ತಂಡದ ಸ್ಟಾರ್ ಗಳನ್ನು ಬುಧವಾರ (ಮೇ 29) ಅಭಿನಂದಿಸಿದ್ದಾರೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಕೆಕೆಆರ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ತಂಡದ ಗೆಲುವಿಗಾಗಿ 10 ವರ್ಷಗಳ ಕಾಲ ಕಾದ ಅಭಿಮಾನಿಗಳಿಗೆ ಶಾರುಖ್ ಧನ್ಯವಾದ ಹೇಳಿದ್ದಾರೆ.ʻನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಪ್ರತಿಯೊಬ್ಬ ಕೆಕೆಆರ್ ಅಭಿಮಾನಿಗೆ ಧನ್ಯವಾದ ಸಲ್ಲಿಸುತ್ತೇನೆ. ಕಠಿಣ ಸಮಯ ದೀರ್ಘ ಕಾಲ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ,ʼ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದಿದ್ದಾರೆ.
ಕೆಕೆಆರ್ ಮಾರ್ಗದರ್ಶಕ ಗೌತಮ್ ಗಂಭೀರ್, ಸಹಾಯಕ ಕೋಚ್ ಅಭಿಷೇಕ್ ನಾಯರ್ ಮತ್ತು ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವ ರನ್ನು ಶ್ಲಾಘಿಸಿದ್ದಾರೆ. ಪೋಸ್ಟ್‌ನಲ್ಲಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸಹಾಯಕ ಸಿಬ್ಬಂದಿ ರಿಯಾನ್ ಟೆನ್ ಡೋಶೇಟ್, ಭರತ್ ಅರುಣ್, ಕಾರ್ಲ್ ಕ್ರೋವ್ ಮತ್ತು ನಾಥನ್ ಲೀಮನ್ ಅವರನ್ನು ಉಲ್ಲೇಖಿಸಿದ್ದಾರೆ.
ʻಸರಳವಾಗಿ ಹೇಳಬೇಕೆಂದರೆ, ಒಟ್ಟಿಗೆ ಇರುವುದು ಮುಖ್ಯ. ಗೌತಮ್ ಗಂಭೀರ್ ಅವರ ಸಾಮರ್ಥ್ಯ ಮತ್ತು ಮಾರ್ಗದರ್ಶನವನ್ನು ಮೀರಿ....ಚಂದು ಅವರ ಶ್ರದ್ಧೆ, @abhisheknayar1 ಮತ್ತು @ShreyasIyer15 ಅವರ ನಾಯಕತ್ವದ ಪ್ರೀತಿ... @rtendo27, Bharat Arun, @1crowey & @Numb3z ಅವರ ಸಮರ್ಪಣೆ ಭಾವದಿಂದ ಕೆಕೆಆರ್ ಒಂದು ತಂಡವಾಗಿದೆ,ʼ ಎಂದು ಅವರು ಬರೆದಿದ್ದಾರೆ.
ʻಒಂದು ತಂಡವಾಗಿ ಒಂದೇ ದೃಷ್ಟಿಕೋನವನ್ನು ಬೆಂಬಲಿಸಲು ಸಾಧ್ಯವಾಗದಿದ್ದರೆ, ನೀವು ತಂಡದ ವಿಭಜನೆಗೆ ಕಾರಣರಾಗುತ್ತೀರಿ ಎಂದು ಗಂಭೀರ್ ಹೇಳಿದ್ದರು. ಪ್ರತಿಯೊಬ್ಬ ಆಟಗಾರ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಟ್ರೋಫಿ ಅತ್ಯುತ್ತಮವಾದದ್ದನ್ನು ಹೊಂದಿರುವ ಸಾಕ್ಷಿಯಲ್ಲ. ಆದರೆ, ನೀವೆಲ್ಲರೂ ಕಠಿಣ ವಸ್ತುವಿನಿಂದ ಮಾಡಲ್ಪಟ್ಟಿದ್ದೀರಿ ಎಂಬುದಕ್ಕೆ ಪುರಾವೆ,ʼ ಎಂದು ಶಾರುಖ್ ಬರೆದಿದ್ದಾರೆ.
ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ಶಾರುಖ್, ಕೆಕೆಆರ್ ಐಪಿಎಲ್ 2024 ಅನ್ನು ಗೆದ್ದ ನಂತರ ಭಾವಪರವಶರಾಗಿದ್ದರು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಪಂದ್ಯದುದ್ದಕ್ಕೂ ಪಾಲ್ಗೊಂಡಿದ್ದರು. ಗುರಿ ಮುಟ್ಟಲು ಒಂದು ರನ್ ಇದ್ದಾಗ, ಮುಖವಾಡ ತೆಗೆದು ಹಾಕಿದರು. ಪತ್ನಿ ಗೌರಿ ಖಾನ್ ಮತ್ತು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್‌ರಾಮ್ ಜೊತೆಗಿದ್ದರು.
ಜೂಹಿ ಚಾವ್ಲಾ ಮತ್ತು ಜೇ ಮೆಹ್ತಾ ಅವರ ಸಹ ಮಾಲೀಕತ್ವದ ಕೆಕೆಆರ್, 2012 ಹಾಗೂ 2014ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದೆ.