ಯುಪಿಯಲ್ಲಿ ಕಾಂಗ್ರೆಸ್‌ಗೆ 17 ಲೋಕಸಭೆ ಸ್ಥಾನ: ಎಸ್ಪಿ

Update: 2024-02-19 12:04 GMT

ಲಕ್ನೋ, ಫೆ .19- ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳನ್ನು ನೀಡಲಾಗುವುದು ಎಂದು ಸಮಾಜವಾದಿ ಪಕ್ಷ ಸೋಮವಾರ ಹೇಳಿದ್ದು, ಪ್ರಸ್ತಾವನೆಗೆ ಸಮ್ಮತಿಸಿದರೆ ಮಾತ್ರ ಅಖಿಲೇಶ್ ಯಾದವ್ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸಮಾಜವಾದಿ ಪಕ್ಷ ಹೇಳಿದೆ. 

ʻನಾವು ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳ ಅಂತಿಮ ಪ್ರಸ್ತಾಪವನ್ನು ನೀಡಿದ್ದೇವೆ.ಪ್ರಸ್ತಾವನೆಗೆ ಸಮ್ಮತಿಸಿದರೆ ಮಾತ್ರ ಮಂಗಳವಾರ ರಾಯ್‌ ಬರೇಲಿಯಲ್ಲಿ ನಡೆಯುವ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಭಾಗವಹಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್‌ಗೆ ನೀಡಿರುವ ಕ್ಷೇತ್ರಗಳ ಹೆಸರು ಹೇಳಲು ನಿರಾಕರಿಸಿದರು. ಗಾಂಧಿ ನೇತೃತ್ವದ ಯಾತ್ರೆ ಸೋಮವಾರ ಅಮೇಥಿ ಮೂಲಕ ಸಾಗಲಿದೆ. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಅಮೇಠಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾನುವಾರ ಕಾಂಗ್ರೆಸ್ ಹೇಳಿತ್ತು. 

ಸಮಾಜವಾದಿ ಪಕ್ಷ ಈ ಹಿಂದೆ ಕಾಂಗ್ರೆಸ್‌ ಗೆ 11 ಸ್ಥಾನಗಳನ್ನು ನೀಡಿತ್ತು, ಆದರೆ ಕಾಂಗ್ರೆಸ್‌ ರಾಜ್ಯ ಘಟಕ ಹೆಚ್ಚಿನ ಸ್ಥಾನಕ್ಕೆ ಒತ್ತಾಯಿಸಿತ್ತು. ಕಾಂಗ್ರೆಸ್‌ ನ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಅಜಯ್ ರಾಯ್, 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಗೆದ್ದಿದ್ದ ಎರಡು ಡಜನ್ ಸ್ಥಾನಗಳನ್ನು ನೀಡಬೇಕು ಎಂದು ಈ ಹಿಂದೆ ಹೇಳಿದ್ದರು. 

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪ್ರತಿಪಕ್ಷ ಇಂಡಿಯ ಮೈತ್ರಿಕೂಟದ ಪಾಲುದಾರರಾಗಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ರಾಯ್‌ ಬರೇಲಿ ಕ್ಷೇತ್ರದಿಂದ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. 1980 ರಲ್ಲಿ ರಾಜ್ಯವು ಕಾಂಗ್ರೆಸ್‌ ನ ಅತಿ ಹೆಚ್ಚು ಸಂಸದರನ್ನು ಸಂಸತ್ತಿಗೆ ಕಳುಹಿಸಿತ್ತು.

Tags:    

Similar News