ಫಲಿತಾಂಶ ನಿರ್ಗಮನ ಸಮೀಕ್ಷೆಗೆ ವ್ಯತಿರಿಕ್ತವಾಗಿರಲಿದೆ: ಸೋನಿಯಾ ಗಾಂಧಿ

Update: 2024-06-03 09:17 GMT

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರಿ ಗೆಲುವಿನ ಭವಿಷ್ಯ ನಿರ್ಗಮನ ಸಮೀಕ್ಷೆಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ನಿಜವಾದ ಫಲಿತಾಂಶ ವಿಭಿನ್ನವಾಗಿರುವುದು ಖಚಿತ ಎಂದು ಹೇಳಿದ್ದಾರೆ.

ʻಫಲಿತಾಂಶಗಳು ನಿರ್ಗಮನ ಸಮೀಕ್ಷೆ ತೋರಿಸುವುದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ ಎಂಬ ಭರವಸೆ ಹೊಂದಿದ್ದೇವೆ" ಎಂದು ಹೇಳಿದರು. 

ನಿರ್ಗಮನ ಸಮೀಕ್ಷೆ: ಕೆಲವು ನಿರ್ಗಮನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ನೀಡಿವೆ. ಹೆಚ್ಚಿನ ಸಮೀಕ್ಷೆಗಳು 350 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ಕಾಂಗ್ರೆಸ್ ಮತ್ತು ಇಂಡಿಯ ಒಕ್ಕೂಟದ ಪಕ್ಷಗಳು ನಿರ್ಗಮನ ಸಮೀಕ್ಷೆಗಳನ್ನು ತಳ್ಳಿಹಾಕಿವೆ. ಇವು ಕಾಲ್ಪನಿಕ. ಪ್ರತಿ ಪಕ್ಷದ ಮೈತ್ರಿ ಕೂಟ ಮುಂದಿನ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿವೆ. 

ಮೋದಿ ಸಮೀಕ್ಷೆ: ʻಇದು ನಿರ್ಗಮನ ಸಮೀಕ್ಷೆಯಲ್ಲ; 'ಮೋದಿ ಮಾಧ್ಯಮ ಸಮೀಕ್ಷೆ'. ಮೋದಿಜಿಯವರ ಕಾಲ್ಪನಿಕ ಸಮೀಕ್ಷೆ,ʼ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಇಂಡಿಯ ಒಕ್ಕೂಟ 295 ಲೋಕಸಭೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ಹೇಳಿದೆ.

Tags:    

Similar News