ಹಿಮಾಚಲ: ಆರು ಅನರ್ಹ ಕಾಂಗ್ರೆಸ್ ಶಾಸಕರು ಬಿಜೆಪಿಯಿಂದ ಸ್ಪರ್ಧೆ

Update: 2024-03-26 10:23 GMT

ಹಿಮಾಚಲ ಪ್ರದೇಶದ ಆರು ಅನರ್ಹ ಕಾಂಗ್ರೆಸ್ ಶಾಸಕರು ಜೂನ್‌ 1ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇವರೆಲ್ಲರೂ ಮಾ. 23ರಂದು ದೆಹಲಿಯಲ್ಲಿ ಬಿಜೆಪಿ ಸೇರಿದ್ದಾರೆ.

ಲಹೌಲ್ ಮತ್ತು ಸ್ಪಿತಿಯಿಂದ ರವಿ ಠಾಕೂರ್, ಧರ್ಮಶಾಲಾದಿಂದ ಸುಧೀರ್ ಶರ್ಮಾ, ಸುಜಾನ್‌ಪುರದಿಂದ ರಾಜಿಂದರ್ ರಾಣಾ, ಗಾಗ್ರೆಟ್‌ನಿಂದ ಚೈತನ್ಯ ಶರ್ಮಾ, ಬರ್ಸಾರ್‌ನಿಂದ ಇಂದರ್ ದತ್ ಲಖನ್‌ಪಾಲ್ ಮತ್ತು ಕುಟ್ಲೆಹಾರ್‌ನಿಂದ ದೇವಿಂದರ್ ಕುಮಾರ್ ಭುಟ್ಟೊ ಅವರನ್ನುಬಿಜೆಪಿ ಕಣಕ್ಕಿಳಿಸಿದೆ. ಜೂನ್ 1 ರಂದು ಹಿಮಾಚಲದ ನಾಲ್ಕು ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಹಿಮಾಚಲ ಬಿಕ್ಕಟ್ಟು: ಕಾಂಗ್ರೆ ಸ್ ಫೆಬ್ರವರಿ 29 ರಂದು ವಿಧಾನಸಭೆಯಲ್ಲಿ ಪಕ್ಷದ ವಿಪ್ ಅನ್ನು ಉಲ್ಲಂಘಿಸಿದ ಆರು ಶಾಸಕರನ್ನು ಅನರ್ಹಗೊಳಿಸಿತು. ಮೂವರು ಸ್ವತಂತ್ರ ಶಾಸಕರ ರಾಜೀನಾಮೆಯಿಂದ ಸದನದಲ್ಲಿ ಕಾಂಗ್ರೆಸ್‌ ಬಲ 39 ರಿಂದ 33 ಕ್ಕೆ ಇಳಿದಿದೆ. ಬಿಜೆಪಿ 25 ಸದಸ್ಯರನ್ನು ಹೊಂದಿದೆ. ಒಂಬತ್ತು ಶಾಸಕರ ಬಂಡಾಯದಿಂದ ಬಿಜೆಪಿ, ರಾಜ್ಯಸಭೆ ಸ್ಥಾನ ಗೆದ್ದುಕೊಂಡಿತು. ಬಿಜೆಪಿಯು ಸುಖವಿಂದರ್ ಸಿಂಗ್ ಸುಖು ಅವರ ಸರ್ಕಾರವನ್ನು ಉರುಳಿಸಲು ಉಪಚುನಾವಣೆ ಗೆಲುವಿಗೆ ಕಾಯುತ್ತಿದೆ. ಕಳೆದ ವಾರ ಕೇಂದ್ರ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶದ ಮಾಜಿ ಸಿಎಂ ಜೈ ರಾಮ್ ಠಾಕೂರ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಾಲ್ ಅವರ ಸಮ್ಮುಖದಲ್ಲಿ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು. 

Tags:    

Similar News