ಜಗ್ಗಿ ವಾಸುದೇವ್ ಅವರಿಗೆ ಮಿದುಳಿನ ಶಸ್ತ್ರಚಿಕಿತ್ಸೆ

Update: 2024-03-21 09:19 GMT

ಜಗ್ಗಿ ವಾಸುದೇವ್ ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿಯ ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. 

ʻಮಿದುಳಿನಲ್ಲಿ ರಕ್ತಸ್ರಾವ ತಡೆಯಲು ಮಾರ್ಚ್ 17 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ವೆಂಟಿಲೇಟರ್‌ ತೆಗೆಯಲಾಗಿದ್ದು, ಆರೋಗ್ಯದಲ್ಲಿ ಸ್ಥಿರವಾದ ಪ್ರಗತಿ ಕಂಡುಬಂದಿದೆʼ ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. 

66 ವರ್ಷದ ಅವರು ಇಶಾ ಫೌಂಡೇಶನ್‌ನ ಸಂಸ್ಥಾಪಕ. ಚಿಕಿತ್ಸೆ ನೀಡಿದ ವೈದ್ಯರ ತಂಡದ ನೇತೃತ್ವ ವಹಿಸಿದ್ದ ನರರೋಗ ತಜ್ಞ ವಿನೀತ್ ಸೂರಿ, ಅವರು ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ದೈನಂದಿನ ಕೆಲಸಗಳಲ್ಲದೆ, ಮಾರ್ಚ್ 8 ರಂದು ಮಹಾ ಶಿವರಾತ್ರಿ ಕಾರ್ಯಕ್ರಮವನ್ನು ಕೂಡ ನಡೆಸಿದ್ದರು. ಮಾರ್ಚ್ 15 ರಂದು ತಲೆನೋವು ಉಲ್ಬಣಗೊಂಡಿತು. ಮೆದುಳಿನ ಎಂಆರೈ ಯಿಂದ ಮಿದುಳಿನಲ್ಲಿ ರಕ್ತಸ್ರಾವವನ್ನು ಪತ್ತೆಯಾಯಿತುʼ ಎಂದು ವಿವರಿಸಿದರು. ಡಾ. ವಿನೀತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ. ಎಸ್. ಚಟರ್ಜಿ ಅವರ ತಂಡ ಮಾರ್ಚ್ 17 ರಂದು ಶಸ್ತ್ರಚಿಕಿತ್ಸೆ ನಡೆಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಕ್ಸ್‌ ನ ಪೋಸ್ಟ್‌ನಲ್ಲಿ ʻಶೀಘ್ರವಾಗಿ ಚೇತರಿಸಿಕೊಳ್ಳಿʼ ಎಂದು ಹಾರೈಸಿದ್ದಾರೆ.

Tags:    

Similar News