ಸೋನಿಯಾ ಗಾಂಧಿಯ ದೀರ್ಘ ಕಾಲದ ಆಪ್ತ ಕಾರ್ಯದರ್ಶಿ ನಿಧನ, ಕೇರಳಕ್ಕೆ ತೆರಳಿದ ರಾಹುಲ್ ಗಾಂಧಿ

ದುಃಖಿತ ಅವರ ಕುಟುಂಬದೊಂದಿಗೆ ಸುಮಾರು 45 ನಿಮಿಷಗಳ ಕಾಲ ಕಳೆದರು. ಅವರಿಗೆ ಸಾಂತ್ವನ ಹೇಳಿದರು ಮತ್ತು ಸಂತಾಪ ವ್ಯಕ್ತಪಡಿಸಿದರು ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.;

Update: 2024-12-17 10:03 GMT
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ (ಸಾಂಧರ್ಭಿಕ ಚಿತ್ರ)

ಹೃದಯಾಘಾತದಿಂದ ನಿಧನರಾದ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ದೀರ್ಘಕಾಲದ ಆಪ್ತ ಕಾರ್ಯದರ್ಶಿ ಪಿ.ಪಿ.ಮಾಧವನ್ ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೀಗಾಗಿ ಅವರಿಗೆ ಅಂತಿನ ನಮನ ಸಲ್ಲಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಕೇರಳಕ್ಕೆ ತೆರಳಿದ್ದಾರೆ.

ಬೆಳಿಗ್ಗೆ ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ತ್ರಿಶೂರ್ ಜಿಲ್ಲೆಯ ಚೆರುಸ್ಸೆರಿ ಗ್ರಾಮದಲ್ಲಿರುವ ಮಾಧವನ್ ಅವರ ನಿವಾಸಕ್ಕೆ ತಲುಪಿ ಅವರ ಕುಟುಂಬ ಸದಸ್ಯರನ್ನು ಭೇಟಿಯಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ದುಃಖಿತ ಅವರ ಕುಟುಂಬದೊಂದಿಗೆ ಸುಮಾರು 45 ನಿಮಿಷಗಳ ಕಾಲ ಕಳೆದರು. ಅವರಿಗೆ ಸಾಂತ್ವನ ಹೇಳಿದರು ಮತ್ತು ಸಂತಾಪ ವ್ಯಕ್ತಪಡಿಸಿದರು ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ ಪರವಾಗಿ ಮಾಧವನ್ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪಗುಚ್ಛಗಳನ್ನು ಇರಿಸಿ ಗೌರವ ಸಲ್ಲಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಲ ಮತ್ತು ಪಕ್ಷದ ಇತರ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಮಾಧವನ್ ಅವರಿಗೆ ಗೌರವ ಸಲ್ಲಿಸಿದರು.  

Tags:    

Similar News