ತನಿಖಾ ಸಂಸ್ಥೆಗಳು ಗಂಭೀರ ಅಪರಾಧಗಳನ್ನು ಪರಿಗಣಿಸಲಿ: ಸಿಜೆಐ
ತನಿಖೆಯ ಅಗತ್ಯ ಮತ್ತು ವೈಯಕ್ತಿಕ ಹಕ್ಕುಗಳ ನಡುವೆ ಸಮತೋಲ ಅಗತ್ಯ;
ಸಿಬಿಐನಂತಹ ತನಿಖಾ ಸಂಸ್ಥೆಗಳು ವರ್ಷಗಳಿಂದ ʻತುಂಬ ತೆಳುವಾಗಿವೆʼ ಮತ್ತು ಅವು ʻರಾಷ್ಟ್ರದ ಭದ್ರತೆ, ಆರ್ಥಿಕ ಆರೋಗ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ನಿಜವಾಗಿಯೂ ಧಕ್ಕೆ ತರುವ ಅಪರಾಧಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಬೇಕುʼ ಎಂದು ಮು.ನ್ಯಾ.ಡಿ.ವೈ. ಚಂದ್ರಚೂಡ್ ಸೋಮವಾರ (ಏಪ್ರಿಲ್ 1) ಹೇಳಿದರು.
ದಾಳಿ ಸಮಯದಲ್ಲಿ ವೈಯಕ್ತಿಕ ಸಾಧನಗಳನ್ನು ʻಅನಗತ್ಯವಾಗಿʼ ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಇದು ತನಿಖೆಯ ಅಗತ್ಯಗಳು ಮತ್ತು ವೈಯಕ್ತಿಕ ಹಕ್ಕುಗಳ ನಡುವೆ ಸಮತೋಲವನ್ನು ಸಾಧಿಸುವ ಅಗತ್ಯವಿದೆ ಎಂದು ಏಜೆನ್ಸಿಯ ಮೊದಲ ನಿರ್ದೇಶಕರ ಸ್ಮರಣಾರ್ಥ ಹಮ್ಮಿಕೊಂಡಿದ್ದ 20ನೇ ಡಿ.ಪಿ. ಕೊಹ್ಲಿಸ್ಮಾರಕ ಉಪನ್ಯಾಸದಲ್ಲಿ ಹೇಳಿದರು.
ಸಮತೋಲನದ ಅಗತ್ಯ: ಕ್ರಿಮಿನಲ್ ನ್ಯಾಯದ ಕ್ಷೇತ್ರದಲ್ಲಿ ಸಿಬಿಐನಂಥ ಏಜೆನ್ಸಿಗಳ ಶೋಧ ಮತ್ತು ವಶಪಡಿಸಿಕೊಳ್ಳುವ ಅಧಿಕಾರ ಹಾಗೂ ವೈಯಕ್ತಿಕ ಗೋಪ್ಯತೆ ಹಕ್ಕುಗಳ ನಡುವೆ ಸೂಕ್ಷ್ಮ ಸಮತೋಲನವು ನ್ಯಾಯಯುತ ಸಮಾಜದ ಮೂಲಾಧಾರ. ಮತ್ತು, ಈ ಸಮತೋಲದ ಕೇಂದ್ರದಲ್ಲಿ ಕಾನೂನು ಜಾರಿ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳುವ ಸರಿಯಾದ ಪ್ರಕ್ರಿಯೆಯನ್ನು ಎತ್ತಿ ಹಿಡಿಯುವ ಅವಶ್ಯಕತೆಯಿದೆ ಎಂದು ಹೇಳಿದರು.
ʻನ್ಯಾಯಾಲಯಗಳನ್ನುಸುವ್ಯವಸ್ಥಿತಗೊಳಿಸುವುದು ಮಾತ್ರವಲ್ಲದೆ, ಸಿಬಿಐ ಮತ್ತು ತನಿಖಾ ಸಂಸ್ಥೆಗಳ ದಕ್ಷತೆಯನ್ನು ಉತ್ತೇಜಿಸಲು ನಮ್ಮ ಕದನಗಳನ್ನು ಸೂಕ್ತವಾಗಿ ಆಯ್ಕೆ ಮಾಡಿಕೊಳ್ಳುವುದು ಕೂಡ ಮುಖ್ಯವಾಗಲಿದೆʼ ಎಂದು ಹೇಳಿದರು. ʻಕ್ಷಿಪ್ರ ಬದಲಾವಣೆಯ ಹೊರತಾಗಿಯೂ, ತನಿಖಾ ಸಂಸ್ಥೆಗಳನ್ನು ತೆಳುವಾಗಿಸಿದ್ದೇವೆ ಎಂದು ಭಾವಿಸುತ್ತೇನೆ. ನಮ್ಮ ತನಿಖಾ ಸಂಸ್ಥೆಗಳು ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ರಾಷ್ಟ್ರದ ಆರ್ಥಿಕ ಆರೋಗ್ಯಕ್ಕೆ ಬೆದರಿಕೆಯೊಡ್ಡುವ ಅಪರಾಧಗಳ ಮೇಲೆ ತಮ್ಮ ಗಮನ ಮತ್ತು ಪ್ರಯತ್ನಗಳನ್ನು ಕೇಂದ್ರೀಕರಿಸಬೇಕು,ʼ ಎಂದು ಸಿಜೆಐ ಹೇಳಿದರು.
ದಾಳಿಗಳು ಮತ್ತು ಜಪ್ತಿ: ಹೊಸದಾಗಿ ಜಾರಿಗೊಂಡಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 94 ಮತ್ತು ಭಾರತೀಯ ಸಾಕ್ಷಿ ಅಧಿನಿಯಮದ ಸೆಕ್ಷನ್ 185, ನ್ಯಾಯಾಲಯಗಳು ಮತ್ತು ಕಾನೂನು ಜಾರಿ ಪ್ರಾಧಿಕಾರ ತನಿಖೆಗೆ ಅಗತ್ಯವೆಂದು ಪರಿಗಣಿಸಿದ ದಾಖಲೆಗಳು ಮತ್ತು ವಸ್ತುಗಳನ್ನು ಕರೆಸುವ ಅಧಿಕಾರ ನೀಡುತ್ತವೆʼ ಎಂದರು.
ಸಂಸತ್ತು ಜಾರಿಗೊಳಿಸಿದ ಹೊಸ ಕ್ರಿಮಿನಲ್ ಕಾನೂನುಗಳನ್ನು ಶ್ಲಾಘಿಸಿದ ಸಿಜೆಐ, ನ್ಯಾಯ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುವ ಡಿಜಿಟಲೀಕರಣದ ಗುರಿ ಹೊಂದಿದೆ. ಹೊಸ ಕಾನೂನುಗಳು ʻಮಾಹಿತಿಗಳ ತಡೆರಹಿತ ಹರಿವುʼ ಖಾತ್ರಿಗೊಳಿಸು ತ್ತದೆ ಮತ್ತು ತನಿಖೆ-ತೀರ್ಪು ಪ್ರಕ್ರಿಯೆಗಳಲ್ಲಿ ತೊಡಗಿರುವ ಮಧ್ಯಸ್ಥಗಾರರ ನಡುವೆ ಉತ್ತಮ ಸಮನ್ವಯವನ್ನು ಸುಲಭಗೊಳಿಸಲು ಮತ್ತು ಸಹಭಾಗಿತ್ವವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಎಐ ಬಳಕೆ: ಅಪರಾಧ ಪರಿಸ್ಥಿತಿ ಅಭೂತಪೂರ್ವ ವೇಗದಲ್ಲಿ ವಿಕಸನಗೊಳ್ಳುತ್ತಿದೆ. ಸಿಬಿಐನಂತಹ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (ಎಐ) ಯಂಥ ತಾಂತ್ರಿಕ ಸಾಧನಗಳನ್ನು ಬಳಸಿಕೊಂಡು, ಅದನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸುಧಾರಿತ ಡೇಟಾ ಅನಾಲಿಟಿಕ್ಸ್ ಕಾನೂನು ಜಾರಿಯಿಂದ ಏಜೆನ್ಸಿಗಳಿಗೆ ಅಪಾರ ಪ್ರಮಾಣದ ಮಾಹಿತಿ ಲಭ್ಯವಾಗುತ್ತದೆ,ʼ ಎಂದು ಸಿಜೆಐ ಹೇಳಿದರು.
ಎಐ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ʻಗೇಮ್ ಚೇಂಜರ್ʼ. ಆದರೆ, ಅದು ಪೂರ್ವ ಗ್ರಹ ಮತ್ತು ಪಕ್ಷಪಾತದಿಂದ ಮುಕ್ತವಾಗಿಲ್ಲ. ತಪ್ಪು ದತ್ತಾಂಶದಿಂದ ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳ ಸಮುದಾಯ ಆಧರಿತ ಪ್ರೊಫೈಲಿಂಗ್‌ಗೆ ಕಾರಣವಾಗಬಹುದು. ಇದು ವ್ಯಕ್ತಿಗಳ ಗೌಪ್ಯತೆ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮಾತ್ರವಲ್ಲದೆ ಸಾಮಾಜಿಕ ಗುಂಪುಗಳನ್ನು ಗುರಿಯಾಗಿಸಿಕೊಳ್ಳಲು ಕಾರಣವಾಗಬಹುದು. ಎಐ ಯನ್ನು ನೈತಿಕ ಮಿತಿಯೊಳಗೆ ಬಳಸಬೇಕು,ʼಎಂದು ಹೇಳಿದರು.
ಎಐ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳ ದುರುಪಯೋಗವನ್ನು ತಡೆಗಟ್ಟಲು, ಗೌಪ್ಯತೆ ಹಕ್ಕುಗಳನ್ನು ರಕ್ಷಿಸಲು ಮತ್ತು ಅಜಾಗರೂ ಕತೆಯಿಂದ ಉದ್ಭವಿಸಬಹುದಾದ ಪಕ್ಷಪಾತವನ್ನು ಪರಿಹರಿಸಲು ಸ್ಪಷ್ಟ ಮಾರ್ಗಸೂಚಿ ಮತ್ತು ಸುರಕ್ಷತೆ ತಂತ್ರಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು.
ಡಿಜಿಟಲೀಕರಣದಿಂದ ದಕ್ಷತೆ ಹೆಚ್ಚಳ ಮತ್ತು ಎಲ್ಲರಿಗೂ ಪ್ರವೇಶಾವಕಾಶ ಸಿಗುತ್ತದೆ. ಜತೆಗೆ, ಇಂಟರ್ನೆಟ್ ಪ್ರವೇಶ ಅಥವಾ ತಾಂತ್ರಿಕ ಪ್ರಾವೀಣ್ಯತೆ ಇಲ್ಲದ ವ್ಯಕ್ತಿಗಳನ್ನು ಹೊರಗಿಡುವ ಅಪಾಯವನ್ನು ಹೊಂದಿದೆ. ಇಂಥವರು ದೇಶದ ಜನಸಂಖ್ಯೆಯ ಗಮನಾರ್ಹ ಭಾಗವಾಗಿದ್ದಾರೆ ಎಂದು ಹೇಳೀದರು.
ಪುರಸ್ಕಾರ: ಸಿಜೆಐ ಅವರು ಆರು ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ (ಪಿಪಿಎಂ) ಮತ್ತು 29 ಸಿಬಿಐ ಅಧಿಕಾರಿಗಳಿಗೆ ಪೊಲೀಸ್ ಪದಕ (ಪಿಎಂ) ಪ್ರದಾನ ಮಾಡಿದರು. ಸಿಜೆಐ ಚಂದ್ರಚೂಡ್ ಅವರನ್ನು ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಸ್ವಾಗತಿಸಿದರು.