ಸಿಕ್ಕಿಂ: ಪ್ರೇಮ್ ಸಿಂಗ್ ತಮಾಂಗ್ ಪ್ರಮಾಣವಚನ ಇಂದು

Update: 2024-06-10 07:58 GMT

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್(56) ಅವರು ಮುಖ್ಯಮಂತ್ರಿಯಾಗಿ 2ನೇ ಅವಧಿಗೆ ಸೋಮವಾರ(ಜೂನ್ 10) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ವಿಧಾನಸಭೆ ಚುನಾವಣೆ‌ ಮತ್ತು ಸಿಕ್ಕಿಂನ ಏಕೈಕ ಲೋಕಸಭೆ ಕ್ಷೇತ್ರದಲ್ಲಿ ಎಸ್‌ಕೆಎಂ ಪ್ರಚಂಡ ಗೆಲುವು ಸಾಧಿಸಿದೆ. ಪ್ರಮಾಣವಚನ ಸಮಾ ರಂಭ ಸಂಜೆ 4.30 ಕ್ಕೆ ಪ್ರಾರಂಭವಾಗಲಿದ್ದು, 30,000 ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಸಚಿಯ ಸಂಪುಟ ಮುಖ್ಯಮಂತ್ರಿ ಸೇರಿದಂತೆ 12 ಸದಸ್ಯರನ್ನು ಹೊಂದಿರಲಿದೆ. 

ಪಾಲ್ಜೋರ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಆಚಾರ್ಯ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ: ಭದ್ರತೆಯ ದೃಷ್ಟಿಯಲ್ಲಿ ಗ್ಯಾಂಗ್ಟಕ್ ಮತ್ತು ಸುತ್ತಮುತ್ತಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶಿಸಿದೆ. ಎಲ್ಲ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ಯಾಂಗ್ಟಕ್‌ನಾದ್ಯಂತ ವಿಸ್ತೃತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ: ಜೂನ್ 2 ರಂದು ನಡೆದ ಸಭೆಯಲ್ಲಿ ತಮಾಂಗ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ 32 ವಿಧಾನಸಭೆ ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಎಸ್‌ಕೆಎಂ ಗೆದ್ದುಕೊಂಡಿದೆ. ತಮಾಂಗ್ ರೆನಾಕ್ ಮತ್ತು ಸೊರೆಂಗ್-ಚಕುಂಗ್ ಎರಡೂ ಕ್ಷೇತ್ರಗಳಿಂದ ಗೆದ್ದಿದ್ದಾರೆ. 2019 ರವರೆಗೆ ಸತತ 25 ವರ್ಷ ಕಾಲ ರಾಜ್ಯವನ್ನು ಆಳಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಕೇವಲ ಒಂದು ಸ್ಥಾನ ಗೆದ್ದಿದೆ.

Tags:    

Similar News