ನಾಗಪುರದ ಆರ್​ಎಸ್​​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ, ಕೈಬರಹದ ಪತ್ರದಲ್ಲಿ ಶ್ಲಾಘನೆ

"ಪೂಜ್ಯ ಡಾ. ಹೆಡಗೇವಾರ್ ಜೀ ಮತ್ತು ಗೌರವಾನ್ವಿತ ಗುರೂಜೀ ಅವರಿಗೆ ನಾನು ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ. ಅವರ ನೆನಪುಗಳನ್ನು ಕಾಪಾಡಿಕೊಂಡಿರುವ ಈ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ನನಗೆ ವಿಶೇಷ ಅನುಭವವಾಗಿದೆ," ಎಂದು ಮೋದಿ ಹೇಳಿದ್ದಾರೆ.;

Update: 2025-03-30 06:33 GMT

ದಿ ಹಬ್ಬದ ಹಿನ್ನೆಲೆಯಲ್ಲಿ ನಾಗಪುರದ ಆರ್​ಎಸ್​ಎಸ್​ ಕಚೇರಿಯಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದರು. ಈ ವೇಳೆ ಅವರು ಅಲ್ಲಿ ಹೆಡಗೇವಾರ್ ಸ್ಮೃತಿ ಮಂದಿರದಲ್ಲಿ ಕೈಬರಹದ ಶ್ಲಾಘನಾ ಪತ್ರ ಬರೆದಿಟ್ಟಿದ್ದಾರೆ. ಇದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಹತ್ವವನ್ನು ಅವರು ಒತ್ತಿ  ಹೇಳಿದ್ದಾರೆ. ಈ ಮೊದಲು ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಮತ್ತು ಎರಡನೇ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.


ಪ್ರಧಾನಿ ಮೋದಿ ಹಿಂದಿಯಲ್ಲಿ ಬರೆದ ಟಿಪ್ಪಣಿಯಲ್ಲಿ, "ಪೂಜ್ಯ ಡಾ. ಹೆಡಗೇವಾರ್ ಜೀ ಮತ್ತು ಗೌರವಾನ್ವಿತ ಗುರೂಜೀ ಅವರಿಗೆ ನಾನು ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ. ಅವರ ನೆನಪುಗಳನ್ನು ಕಾಪಾಡಿಕೊಂಡಿರುವ ಈ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ನನಗೆ ವಿಶೇಷ ಅನುಭವವಾಗಿದೆ," ಎಂದು ಹೇಳಿದ್ದಾರೆ.

"ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಮತ್ತು ಸಂಘಟನೆಯ ಮೌಲ್ಯಗಳಿಗೆ ಸಮರ್ಪಿತವಾದ ಈ ಪವಿತ್ರ ಸ್ಥಳವು ರಾಷ್ಟ್ರ ಸೇವೆಯಲ್ಲಿ ಮುನ್ನಡೆಯಲು ನಮಗೆ ಪ್ರೇರಣೆ ನೀಡುತ್ತದೆ." ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ. "ಈ ಸ್ಥಳಕ್ಕೆ ಸಂಬಂಧಿಸಿದ ಎಲ್ಲ ಮಹಾನ್ ವ್ಯಕ್ತಿಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ರಾಷ್ಟ್ರ ಸೇವೆಗೆ ಬದ್ಧರಾದ ಲಕ್ಷಾಂತರ ಸ್ವಯಂಸೇವಕರಿಗೆ ಶಕ್ತಿಯ ಮೂಲವಾಗಿದೆ," ಎಂದು ಅವರು ಬರೆದಿದ್ದಾರೆ.

"ನಮ್ಮ ಪ್ರಯತ್ನಗಳ ಮೂಲಕ ಭಾರತಮಾತೆಯ ಗೌರವ ಹೆಚ್ಚಲಿ," ಎಂದು ತಮ್ಮ ಬರಹವನ್ನು ಅವರು ಮುಕ್ತಾಯಗೊಳಿಸಿದ್ದಾರೆ.

ಯುಗಾದಿ ಹಿನ್ನೆಲೆಯಲ್ಲಿ ಮೋದಿ ಭೇಟಿ

ಯಗಾದಿ ಹಿನ್ನೆಲೆಯಲ್ಲಿ ಆರ್​ಎಸ್​​ಎಸ್ ಕಚೇರಿಯಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಪ್ರಧಾನಿ ಮೋದಿ  ಭೇಟಿ ನೀಡಿದ್ದರು. ಯುಗಾದಿ ಹಿಂದೂ ಹೊಸ ವರ್ಷದ ಆರಂಭವಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ವೇಳೆ ಉಪಸ್ಥಿತರಿದ್ದರು.

ಪ್ರಧಾನಿ ಮೋದಿಯ ನಾಗಪುರ ಭೇಟಿ

ಪ್ರಧಾನಿ ಮೋದಿ ಅವರು ಮಾಧವ್ ನೇತ್ರಾಲಯ ಪ್ರೀಮಿಯಂ ಸೆಂಟರ್‌ಗೆ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ. ಇದು ಮಾಧವ್ ನೇತ್ರಾಲಯ ಐ ಇನ್‌ಸ್ಟಿಟ್ಯೂಟ್ ಮತ್ತು ರಿಸರ್ಚ್ ಸೆಂಟರ್‌ನ ವಿಸ್ತರಣೆಯಾಗಿದೆ. ಈ ಸೌಲಭ್ಯವು 250 ಹಾಸಿಗೆಗಳ ಆಸ್ಪತ್ರೆ, 14 ಹೊರ ರೋಗಿಗಳ ವಿಭಾಗಗಳು (ಒಪಿಡಿಗಳು) ಮತ್ತು 14 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳನ್ನು ಒಳಗೊಂಡಿರಲಿದೆ.

ನಂತರ ಅವರು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್‌ನ ಶಸ್ತ್ರಾಸ್ತ್ರ ಸೌಲಭ್ಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಮಾನವರಹಿತ ವೈಮಾನಿಕ ವಾಹನಗಳಿಗೆ (ಯುಎವಿ) ವಿನ್ಯಾಸಗೊಳಿಸಲಾದ 1,250 ಮೀಟರ್ ಉದ್ದ ಮತ್ತು 25 ಮೀಟರ್ ಅಗಲದ ಏರ್‌ಸ್ಟ್ರಿಪ್‌ನ್ನು ಉದ್ಘಾಟಿಸಲಿದ್ದಾರೆ.  ಬಳಿಕ ಲೋಟರಿಂಗ್ ಮ್ಯೂನಿಷನ್ ಮತ್ತು ಇತರ ಶಸ್ತ್ರಾಸ್ತ್ರಗಳಿಗಾಗಿ ಲೈವ್ ಮ್ಯೂನಿಷನ್ ಮತ್ತು ವಾರ್‌ಹೆಡ್ ಪರೀಕ್ಷಾ ಸೌಲಭ್ಯವನ್ನೂ ಉದ್ಘಾಟಿಸಲಿದ್ದಾರೆ.

ನಾಗಪುರದ ಬಳಿಕ, ಪ್ರಧಾನಿ ಮೋದಿ ಇಂದು ಛತ್ತೀಸ್‌ಗಢಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ವಿದ್ಯುತ್, ತೈಲ ಮತ್ತು ಗ್ಯಾಸ್, ರೈಲ್ವೆ, ರಸ್ತೆ, ಶಿಕ್ಷಣ ಮತ್ತು ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ 33,700 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Tags:    

Similar News