J and K Polls | ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯಗೊಂಡಿದೆ: ಮೋದಿ

Update: 2024-09-14 09:36 GMT

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯುಸಿರು ಎಳೆಯುತ್ತಿದೆ. ತಮ್ಮ ಸರ್ಕಾರವು ಈ ಸುಂದರ ಪ್ರದೇಶವನ್ನು ನಾಶಪಡಿಸಿದ ವಂಶಪಾರಂಪರ್ಯ ರಾಜಕೀಯವನ್ನು ಎದುರಿಸಲು ಹೊಸ ನಾಯಕತ್ವವನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. 

ಜಮ್ಮು ಪ್ರದೇಶದ ದೋಡಾ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮಾತನಾಡಿ, ʻನಾವು ಮತ್ತು ನೀವು ಒಟ್ಟಾಗಿ ಜಮ್ಮು- ಕಾಶ್ಮೀರವನ್ನು ದೇಶದ ಸುರಕ್ಷಿತ ಮತ್ತು ಸಮೃದ್ಧ ಭಾಗವಾಗಿ ಮಾಡೋಣ,ʼ ಎಂದು ಹೇಳಿದರು.

ಸೆಪ್ಟೆಂಬರ್ 18 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ ಮುನ್ನ ಪ್ರಧಾನಿ ನಡೆಸಿದ ಮೊದಲ ಚುನಾವಣೆ ಸಭೆ ಇದಾಗಿದೆ.

ʻಸ್ವಾತಂತ್ರ್ಯಾನಂತರ ಜಮ್ಮು- ಕಾಶ್ಮೀರ ವಿದೇಶಿ ಶಕ್ತಿಗಳಿಗೆ ಗುರಿಯಾಯಿತು; ವಂಶಪಾರಂಪರ್ಯ ರಾಜಕೀಯವು ಈ ಸುಂದರ ಪ್ರದೇಶವನ್ನು ಒಳಗಿನಿಂದ ಟೊಳ್ಳಾಗಿಸಿತು. ರಾಜಕೀಯ ಶಕ್ತಿಗಳು ತಮ್ಮ ಮಕ್ಕಳನ್ನು ಬೆಳೆಸಿದರೇ ಹೊರತು ಹೊಸ ನಾಯಕತ್ವ ಬೆಳೆಯಲು ಬಿಡಲಿಲ್ಲ,ʼ ಎಂದು ಹೇಳಿದರು.

ʻ2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರವು ಯುವ ನಾಯಕತ್ವವನ್ನು ರೂಪಿಸುವತ್ತ ಗಮನಹರಿಸಿದೆ,ʼ ಎಂದು ಹೇಳಿದರು. 

Tags:    

Similar News