ಪ್ರಧಾನಿ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ

Update: 2024-03-22 11:35 GMT

ಥಿಂಪು, ಮಾ. 22- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' ಗೌರವವನ್ನುಸ್ವೀಕರಿಸಿದದರು. ಅವರು ಈ ಗೌರವ ಸ್ವೀಕರಿಸಿದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರು. 

ʻಭಾರತ-ಭೂತಾನ್ ಸಂಬಂಧದ ಬೆಳವಣಿಗೆ ಹಾಗೂ ಭೂತಾನ್ ರಾಷ್ಟ್ರ ಮತ್ತು ಜನರಿಗೆ ಅವರ ವಿಶಿಷ್ಟ ಸೇವೆಗಾಗಿ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' ಪ್ರಶಸ್ತಿ ಡಿ ಗೌರವಿಸಲಾಗಿದೆ. ನಾನು ಅದನ್ನು 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆʼ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಾಮ್ಗಲ್ ವಾಂಗ್‌ಚುಕ್ ಅವರು ಪ್ರಧಾನಿ ಅವರಿಗೆ 'ಆರ್ಡರ್ ಆಫ್ ದಿ ಡ್ರುಕ್ ಗ್ಲ್ಯಾಲ್ಪೋ' ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಧಾನಿ ಮೋದಿ ಅವರು ತಮ್ಮ ಎರಡು ದಿನಗಳ ಭೂತಾನ್‌ ಪ್ರವಾಸದಲ್ಲಿ ಇದ್ದಾರೆ.

Tags:    

Similar News