ಹಾದಿ ತಪ್ಪಿ ಬಂದ ಹುಲಿ ಮರಿ ಜತೆ ಸೆಲ್ಫಿ ತೆಗೆದುಕೊಂಡ ಗ್ರಾಮಸ್ಥರು!
ಸುಮಾರು 18 ರಿಂದ 19 ತಿಂಗಳ ವಯಸ್ಸಿನ ಹುಲಿ ಅದಾಗಿದೆ.ಅದು ತನ್ನ ತಾಯಿಯಿಂದ ಬೇರ್ಪಡುವ ಹಂತದಲ್ಲಿದೆ.ತನ್ನದೇ ಆದ ಪ್ರದೇಶವನ್ನು ಹುಡುಕುತ್ತಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.;
ಪೂರ್ವ ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ಹಾದಿ ತಪ್ಪಿ ಬಂದಿದ್ದ ಹುಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಅರಣ್ಯ ಇಲಾಖೆಯು ಹುಲಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದು, ಅದನ್ನು ಬೇರೊಂದು ಅರಣ್ಯ ವಲಯಕ್ಕೆ ವರ್ಗಾಯಿಸಲು ಮುಂದಾಗಿದೆ.
ಸುಮಾರು 18 ರಿಂದ 19 ತಿಂಗಳ ವಯಸ್ಸಿನ ಹುಲಿ ಅದಾಗಿದೆ.ಅದು ತನ್ನ ತಾಯಿಯಿಂದ ಬೇರ್ಪಡುವ ಹಂತದಲ್ಲಿದೆ.ತನ್ನದೇ ಆದ ಪ್ರದೇಶವನ್ನು ಹುಡುಕುತ್ತಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಅಡ್ಯಾಲ್ ಅರಣ್ಯ ವಲಯದ ಬೊರ್ಗಾಂವ್ ಪ್ರದೇಶದಲ್ಲಿ ಚಿತ್ರೀಕರಿಸಲಾದ ವಿಡಿಯೊ ವೈರಲ್ ಆಗಿದೆ. ಜಾನುವಾರುಗಳ ಕೊಂದು ತಿಂದ ಹುಲಿ ವಿಶ್ರಾಂತಿ ಪಡೆಯುತ್ತಿರುವಾಗ ಸ್ಥಳೀಯ ಜನರು 10 ಮೀಟರ್ ದೂರದಿಂದ ಫೋಟೋಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ಬಂದಿದೆ. ಇದು ಬಿಟಿ-10 ಎಂದು ಕರೆಯಲ್ಪಡುವ ಹುಲಿಯ ಮರಿ ಎಂದು ಭಂಡಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಹುಲ್ ಗವಾಯಿ ಹೇಳಿದ್ದಾರೆ.
ಹಳ್ಳಿಗಳಿಗೆ ನುಗ್ಗಿದ ಹುಲಿ 13 ರಿಂದ 14 ಜಾನುವಾರುಗಳನ್ನು ಕೊಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಅರಣ್ಯ ಇಲಾಖೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಈ ಪ್ರದೇಶದಲ್ಲಿ ಗ್ರಾಮಗಳು ಇರುವುದರಿಂದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯ ತೊಂದರೆಗೆ ಒಳಗಾಗುತ್ತಿದೆ. ಹುಲಿ ಕಂಡುಬಂದಾಗಲೆಲ್ಲಾ ಜನರು ಸ್ಥಳಕ್ಕೆ ತಲುಪುತ್ತಾರೆ ಎಂದು ಅವರು ಹೇಳಿದ್ದಾರೆ.
ಹುಲಿಯ ಮೇಲೆ ನಿಗಾ ಇಡಲು ಅಡ್ಯಾಲ್ ಅರಣ್ಯ ವಲಯದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹುಲಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಉನ್ನತ ಅಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಗವಾಯಿ ಹೇಳಿದರು.