Train Derails : ತಮಿಳುನಾಡಿನಲ್ಲಿ ಹಳಿತಪ್ಪಿದ ಮೆಮು ರೈಲು
Train Derails : ಸುಮಾರು 500 ಪ್ರಯಾಣಿಕರನ್ನು ಹೊತ್ತ ವಿಲ್ಲುಪುರಂ-ಪುದುಚೇರಿ ರೈಲು ಬೆಳಿಗ್ಗೆ 5.25 ಕ್ಕೆ ವಿಲ್ಲುಪುರಂನಿಂದ ಹೊರಟಿತ್ತು. ತಿರುವೊಂದರಲ್ಲಿ ಸಾಗುವಾಗ ಬೋಗಿಯೊಂದು ಹಳಿ ತಪ್ಪಿತು.;
ಪುದುಚೇರಿಗೆ ತೆರಳುತ್ತಿದ್ದ ಮೆಮು ರೈಲಿನ ಬೋಗಿಯೊಂದು ವಿಲ್ಲುಪುರಂ ಬಳಿ ಮಂಗಳವಾರ ಹಳಿ ತಪ್ಪಿದೆ. ರೈಲು ಹಳಿ ಬಿಟ್ಟ ಸಾಗುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣ ಬ್ರೇಕ್ ಹಾಕಿದ ಕಾರಣ ದೊಡ್ಡ ಅವಘಡವೊಂದು ತಪ್ಪಿದೆ. ಲೋಕೊ ಪೈಲೆಟ್ ಸಮಯಪ್ರಜ್ಞೆಯಿಂದ ಭೀಕರ ಅವಘಡ ತಪ್ಪಿದೆ ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆಯಲ್ಲಿ ಯಾರಿಗೂ ಯಾರಿಗೂ ಗಾಯಗಳಾಗಿಲ್ಲ. ಸುಮಾರು 3 ಗಂಟೆಗಳಲ್ಲಿ ಸಂಚಾರ ಪುನಃಸ್ಥಾಪಿಸಲಾಗಿದೆ. ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ಪೂರ್ಣಗೊಂಡ ನಂತರವೇ ಹಳಿ ತಪ್ಪಿದ ಕಾರಣ ತಿಳಿಯಲಿದೆ ಎಂದು ಅಧಿಕಾರಿ ಹೇಳಿದರು.
ಸುಮಾರು 500 ಪ್ರಯಾಣಿಕರನ್ನು ಹೊತ್ತ ವಿಲ್ಲುಪುರಂ-ಪುದುಚೇರಿ ರೈಲು ಬೆಳಿಗ್ಗೆ 5.25 ಕ್ಕೆ ವಿಲ್ಲುಪುರಂನಿಂದ ಹೊರಟಿತ್ತು. ತಿರುವೊಂದರಲ್ಲಿ ಸಾಗುವಾಗ ಬೋಗಿಯೊಂದು ಹಳಿ ತಪ್ಪಿತು. ತಕ್ಷಣ ಲೋಕೋ ಪೈಲಟ್ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ.
ಹಳಿ ತಪ್ಪಿದ ಕಾರಣ ವಿಲ್ಲುಪುರಂ ಮಾರ್ಗದಲ್ಲಿ ಬೆಳಿಗ್ಗೆ 8.30ರವರೆಗೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ವಿಲ್ಲುಪುರಂ-ಪುದುಚೇರಿ ಮೆಮು ಸುಮಾರು 38 ಕಿ.ಮೀ ದೂರವನ್ನು ಕ್ರಮಿಸುವ ಅಲ್ಪ ದೂರದ ರೈಲಾಗಿದೆ. ಆದರೆ, ತಮಿಳುನಾಡಿನಲ್ಲಿ ಪೊಂಗಲ್ ಆಚರಣೆಯ ಸಂಭ್ರಮದಲ್ಲಿ ಜನರು ಇದ್ದ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.