ಅದಾನಿ ಗುಂಪಿನ ಸ್ವಾಧೀನಕ್ಕೆ ಶಾಲೆ: ಹೊರನಡೆದ ಸನ್ಯಾಸಿನಿಯರು

ʻನಾವು ಅದಾನಿ ಗುಂಪಿನಡಿ ಕೆಲಸ ಮಾಡಲು ಬಯಸುವುದಿಲ್ಲ.ಅವರ ನೀತಿ ಮತ್ತು ನಮ್ಮ ನೀತಿ ಸಂಪೂರ್ಣ ವಾಗಿ ವಿಭಿನ್ನ,ʼ ಎಂದು ಶಾಲೆಯ ಮಾಜಿ ಪ್ರಾಂಶುಪಾಲರಾದ ಸಿಸ್ಟರ್ ಲೀನಾ ಹೇಳಿದ್ದಾರೆ.

Update: 2024-10-03 08:49 GMT

ಅದಾನಿ ಪ್ರತಿಷ್ಠಾನವು ಮಹಾರಾಷ್ಟ್ರದ ಪ್ರತಿಷ್ಠಿತ ಹೈಸ್ಕೂಲಿನ ನಿರ್ವಹಣೆಯನ್ನು ವಹಿಸಿಕೊಂಡ ಬಳಿಕ, ಐದು ದಶಕಗಳಿಂದ ಶಾಲೆಯನ್ನು ನಡೆಸುತ್ತಿದ್ದ ಸನ್ಯಾಸಿನಿಯರು ಹೊರನಡೆದಿದ್ದಾರೆ.

ಚಂದ್ರಾಪುರ ಜಿಲ್ಲೆಯ ಸಿಮೆಂಟ್ ನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಸೀನಿಯರ್ ಸೆಕೆಂಡರಿ ಶಾಲೆಯ ನಿರ್ವಹಣೆಯನ್ನು ಅದಾನಿ ಪ್ರತಿಷ್ಠಾನ ವಹಿಸಿಕೊಂಡಿದೆ. ಶಾಲೆಯನ್ನು 1972ರಿಂದ ಕಂಗ್ರಿಗೇಷನ್‌ ಆಫ್‌ ದ ಮದರ್‌ ಆಫ್‌ ಕಾರ್ಮೆಲ್‌ (ಸಿಎಂಸಿ) ನಡೆಸುತ್ತಿದೆ. ಶಾಲೆಯನ್ನು ಅಸೋಸಿಯೇಟೆಡ್ ಸಿಮೆಂಟ್ ಕಂಪನಿ(ಎಸಿಸಿ) ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾಗವಾಗಿ ನಿರ್ಮಿಸಿದೆ. 

ಅದಾನಿಯಡಿ ಕೆಲಸ ಮಾಡಲ್ಲ: ಅದಾನಿ ಗುಂಪಿಗೆ ಹಸ್ತಾಂತರಿಸಿದ ನಂತರ ನಾವು ಸೆಪ್ಟೆಂಬರ್ 1 ರಂದು ಶಾಲೆಯಿಂದ ಹೊರನಡೆದಿದ್ದೇವೆ ಎಂದು ಶಾಲೆಯ ಮಾಜಿ ಪ್ರಾಂಶುಪಾಲರಾದ ಸಿಸ್ಟರ್ ಲೀನಾ ತಿಳಿಸಿದರು. 

ʻನಾವು ಅದಾನಿ ಅಡಿಯಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ವಾಣಿಜ್ಯ ಹಿತಾಸಕ್ತಿ ಅವರ ಆದ್ಯತೆ. ಅವರ ನೀತಿ ಮತ್ತು ನಮ್ಮ ನೀತಿ ಸಂಪೂರ್ಣವಾಗಿ ವಿಭಿನ್ನ,ʼ ಎಂದು ಹೇಳಿದರು. 

ಅದಾನಿ ಪ್ರತಿಷ್ಠಾನದಿಂದ ಸ್ವಾಧೀನ: 2022 ರಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಹೋಲ್ಸಿಮ್‌ ಕಂಪನಿಯಿಂದ ಎಸಿಸಿಯನ್ನು ಅದಾನಿ ಗುಂಪು ಸ್ವಾಧೀನಪಡಿಸಿಕೊಂಡ ನಂತರ, ಶಾಲೆ ಅದಾನಿ ಗುಂಪಿಗೆ ಸೇರಿತು.ತಾವು ಶಾಲೆಯಲ್ಲಿ ಇಲ್ಲದೆ ಇರುವುದರಿಂದ, ʻಮೌಂಟ್ ಕಾರ್ಮೆಲ್ʼ ಹೆಸರು ತೆಗೆದುಹಾಕಬೇಕೆಂದು ಸಿಎಂಸಿ,  ಅದಾನಿ ಸಮೂಹವನ್ನು ಒತ್ತಾಯಿಸಿದೆ.

ಎಸಿಸಿಯ ಆಹ್ವಾನದ ಮೇರೆಗೆ ಸಿಎಂಸಿ ಶಾಲೆಯನ್ನು ಪ್ರಾರಂಭಿಸಿತು.ʼಅವರು ಮಹಾರಾಷ್ಟ್ರದ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ನಮ್ಮ ಮಿಷನ್ ಅನ್ನು ಪೂರ್ಣ ಹೃದಯದಿಂದ ಬೆಂಬಲಿಸಿದರು,ʼ ಎಂದು ಲೀನಾ ಹೇಳಿದರು.

ಶಾಲೆಯಲ್ಲಿ ಹಸ್ತಕ್ಷೇಪ: ಶಾಲೆಯ ಮೇಲ್ವಿಚಾರಕ ಬಿಷಪ್ ಎಫ್ರೆಮ್ ನರಿಕುಲಮ್ ಅವರು, ಆಡಳಿತದಲ್ಲಿ ಅದಾನಿ ಗುಂಪಿನ ಹಸ್ತಕ್ಷೇಪದಿಂದ ಸನ್ಯಾಸಿನಿಯರು ಶಾಲೆಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಶಾಲೆಯಲ್ಲಿ ಸುಮಾರು 2,000 ವಿದ್ಯಾರ್ಥಿಗಳು ಇದ್ದಾರೆ.

Tags:    

Similar News