ಬಿಎಸ್‌ವೈ ಭೇಟಿ ನೀಡಿದ್ದ ಕೇರಳದ ರಾಜರಾಜೇಶ್ವರ ದೇವಾಲಯದಲ್ಲಿ ಕಮಾಂಡೋಗಳ ಕಾರ್ಯಾಚರಣೆ; ಕಾರಣವೇನು?

ಈ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ ಎಂಬ ವರದಿಯಿದೆ. ಮಾಜಿ ಸಿಎಂ ಯಡಿಯೂರಪ್ಪ ಆಗಾಗ ಭೇಟಿ ನೀಡುತ್ತಾರೆ ̤ ಇಲ್ಲಿ ತಮ್ಮ ಮತ್ತು ಸಿದ್ದರಾಮಯ್ಯ ವಿರುದ್ಧ ವಾಮಾಚಾರ ನಡೆದಿದೆ ಎಂದು ಹಿಂದೊಮ್ಮೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದರು.;

Update: 2025-02-20 05:33 GMT
ರಾಜರಾಜೇಶ್ವರದ ದೇವಸ್ಥಾನದ ಹೊರನೋಟ.

ಎನ್​ಎಸ್​​ಜಿ ಕಮಾಂಡೊಗಳು ಫೆಬ್ರವರಿ 19 ಮುಂಜಾನೆ ಕೇರಳದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾದ ತಳಿಪರಂಬ ರಾಜರಾಜೇಶ್ವರ ಹಾಗೂ ಪರಶಿನಿಕಡವು ಮುತ್ತಪ್ಪನ್ ದೇವಾಲಯಗಳಲ್ಲಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿವೆ. ಒಮ್ಮಿಂದೊಮ್ಮೆಲೆ ಸೇನಾ ಕಮಾಂಡೊಗಳು ಬಂದು ಕಾರ್ಯಾಚರಣೆ ನಡೆಸಿದ್ದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ.

ಮಾಧ್ಯಮ ವರದಿಗಳು ,ಈ ಕಾರ್ಯಾಚರಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಭೇಟಿ ಮುನ್ನ ಮುನ್ನೆಚ್ಚರಿಕಾ ಭದ್ರತಾ ಕಸರತ್ತು ಎಂದು ಹೇಳಿವೆ. ಆದರೆ ಅಧಿಕಾರಿಗಳು ಅದನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ. ಇದು ದೇಶದ ಪ್ರಮುಖ ದೇವಾಲಯಗಳ ಭದ್ರತಾ ಪರಿಶೀಲನೆಯ ಭಾಗವಾಗಿದೆ ಎಂದು ಹೇಳಿದ್ದಾರೆಯೇ ಹೊರತು ಮೋದಿಯ ಭೇಟಿ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ.

ವಿದ್ಯುತ್ ಸಂಪರ್ಕ ಕಡಿತ, ಸಂಚಾರ ಸ್ಥಗಿತ

ಚೆನ್ನೈಮೂಲದ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್​​ಜಿ) ನ 150ಕ್ಕೂ ಹೆಚ್ಚು ಕಮಾಂಡೊಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 4 ಗಂಟೆಯ ತನಕ ಕಾರ್ಯಾಚರಣೆ ನಡೆದಿದ್ದು , ಸ್ಥಳೀಯರಿಗೆ ಕುತೂಹಲ ಹುಟ್ಟಿಸಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಆ ಪ್ರದೇಶದ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿತ್ತು. ಜನ ಹಾಗೂ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಈ ಪ್ರಕ್ರಿಯೆ ಜನರ ಆತಂಕ್ಕಕೆ ಕಾರಣವಾಗಿತ್ತು.

ಮಾಹಿತಿ ಪ್ರಕಾರ, ಪ್ರಧಾನಿ ಮೋದಿ, ಕೇರಳದಲ್ಲಿ ನಿರ್ಮಾಣವಾಗಿರುವ ಅತಿ ಎತ್ತರದ ತಾಮ್ರದ ಶಿವನ ಮೂರ್ತಿಯನ್ನು ಅನಾವರಣಗೊಳಿಸಲು ಆಗಮಿಸುತ್ತಿದ್ದಾರೆ. ಈ ಮೂರ್ತಿಯನ್ನು ಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಮೊಟ್ಟಮ್ಮಲ್ ರಾಜನ್ ನಿರ್ಮಿಸಿದ್ದಾರೆ. ಕೇಂದ್ರ ಪುರಾತತ್ವ ಇಲಾಖೆ ತಂಡವು ಇದನ್ನು ಪರಿಶೀಲಿಸಿದೆ.

ಪ್ರಸಿದ್ಧ ಶಿವ ದೇವಾಲಯ

ಕಣ್ಣೂರಿನ ತಳಿಪರಂಬದಲ್ಲಿರುವ ರಾಜರಾಜೇಶ್ವರ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಶಿವ ದೇವಾಲಯಗಳಲ್ಲಿ ಒಂದಾಗಿದೆ.

ಈ ದೇವಾಲಯದ ಮೂಲ ಬಗ್ಗೆ ಹಲವಾರು ವಾದಗಳಿವೆ. ಆದಾಗ್ಯೂ ಇದು ಮುಷಿಕ ವಂಶ ಅಂದರೆ ಕೇರಳದ ಪ್ರಥಮ ಬ್ರಾಹ್ಮಣ ವಸಾಹತು ಹಾಗೂ ಚೋಳ ವಂಶದ ಜೊತೆ ಸಂಬಂಧ ಹೊಂದಿದೆ ಎಂಬ ಐತಿಹ್ಯವನ್ನು ಹೊಂದಿದೆ.

ಹಲವಾರು ರಾಜಕೀಯ ನಾಯಕರು ಈ ದೇವಸ್ಥಾನಕ್ಕೆಭೇಟಿ ನೀಡಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಪ್ರಧಾನಮಂತ್ರಿ ಭೇಟಿ ಬಗ್ಗೆ ಮಾಹಿತಿ ಇಲ್ಲ

"ಭದ್ರತಾ ಸಂಸ್ಥೆಗಳು ಇಲ್ಲಿ ಭೇಟಿ ನೀಡಿದ್ದು ನಿಜ, ಆದರೆ ಪ್ರಧಾನಿ ಮೋದಿಯವರ ಭೇಟಿ ಬಗ್ಗೆ ನಮಗೆ ಅಧಿಕೃತ ಮಾಹಿತಿ ಇಲ್ಲ" ಎಂದು ದೇವಾಲಯಕ್ಕೆ ಸಂಬಂಧಿಸಿದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

"ಪ್ರಧಾನಮಂತ್ರಿಯವರು ಈ ದೇವಾಲಯಕ್ಕೆ ಬರಲು ಇಚ್ಛಿಸಿದ್ದರು ಎಂಬ ಮಾತು ಇದೆ. ವರ್ಷಗಳ ಹಿಂದೆ ಗೃಹ ಸಚಿವ ಅಮಿತ್ ಶಾ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಈ ಕ್ಷೇತ್ರಕ್ಕೆ ನಿಯಮಿತವಾಗಿ ಬರುತ್ತಾರೆ" ಎಂದು ಮೂಲಗಳು ತಿಳಿಸಿವೆ.

ಡಿ.ಕೆ.ಶಿ ಆರೋಪ

ಹಿಂದೊಮ್ಮೆಈ ದೇವಳದಲ್ಲಿ ತಮ್ಮ ವಿರುದ್ಧ ವಾಮಾಚಾರ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದರು. "ಅಘೋರಿಗಳ ಮೂಲಕ ಕೇರಳದ ರಾಜರಾಜೇಶ್ವರ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದಿಂದ ಶತ್ರು ಭೈರವಿ ಯಾಗವನ್ನು ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನಡೆಸಲಾಗುತ್ತಿದೆ," ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಳೆದ ವರ್ಷ ಆರೋಪಿಸಿದ್ದರು.



ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ದೇವಳದ ಅರ್ಚಕರು ಈ ಆರೋಪವನ್ನು ಅಲ್ಲಗಳೆದಿದ್ದರು. ಬಳಿಕ ಡಿಕೆಶಿ ನಾನು ರಾಜರಾಜೇಶ್ವರಿ ದೇವರ ಭಕ್ತ. ಆದರೆ ಅಲ್ಲಿ ನಾನು ಪೂಜೆ ಮಾಡಿಸಿಲ್ಲ. ದೇವಸ್ಥಾನದ 15 ಕಿಲೋಮೀಟರ್​ ದೂರದಲ್ಲಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದರು. 


Tags:    

Similar News