NEET-UG 2024| 1,563 ಅಭ್ಯರ್ಥಿಗಳ ಫಲಿತಾಂಶ, ಶ್ರೇಣಿ ಪ್ರಕಟ

NEET-UG 2024 ರ ಎಲ್ಲಾ ಅಭ್ಯರ್ಥಿಗಳ ಪರಿಷ್ಕೃತ ಅಂಕ ಹಾಗೂ ಶ್ರೇಣಿಯನ್ನು ಜಾಲತಾಣದಲ್ಲಿ ಅಳವಡಿಸಲಾಗಿದೆ. (https://exams.nta.ac.in/NEET/)

Update: 2024-07-01 08:55 GMT

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯು 1,563 ಅಭ್ಯರ್ಥಿಗಳ ಪರಿಷ್ಕೃತ ಫಲಿತಾಂಶ ಮತ್ತು ನೀಟ್‌-ಯುಜಿ 2024 ರ ಎಲ್ಲ ಅಭ್ಯರ್ಥಿಗಳ ಪರಿಷ್ಕೃತ ಶ್ರೇಣಿಯನ್ನು ಪ್ರಕಟಿಸಿದೆ. 

ಮೇ 5 ರಂದು ಆರು ಕೇಂದ್ರಗಳಲ್ಲಿ ಪರೀಕ್ಷೆ ತಡವಾಗಿ ಆರಂಭವಾದ ಕಾರಣ ನಷ್ಟವಾದ ಸಮಯವನ್ನು ಸರಿದೂಗಿಸಲು, ಕೃಪಾಂಕ ಪಡೆದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಿದ ಬಳಿಕ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಾಗಿದೆ. 

7 ಕೇಂದ್ರಗಳಲ್ಲಿ ಮರುಪರೀಕ್ಷೆ: ಸುಪ್ರೀಂ ಕೋರ್ಟ್ ಆದೇಶದ ನಂತರ ಜೂನ್ 23 ರಂದು ಏಳು ಕೇಂದ್ರಗಳಲ್ಲಿ ನಡೆದ ಮರುಪರೀಕ್ಷೆಗೆ 1,563 ಅಭ್ಯರ್ಥಿಗಳ ಪೈಕಿ 813 ವಿದ್ಯಾರ್ಥಿಗಳು( ಶೇ.48) ಹಾಜರಾಗಲಿಲ್ಲ. ಇತರರು ಕೃಪಾಂಕವಿಲ್ಲದ ವಿಧಾನವನ್ನು ಆಯ್ಕೆ ಮಾಡಿಕೊಂಡಿ ದ್ದಾರೆ ಎಂದು ಎನ್‌ಟಿಎ ಅಧಿಕಾರಿಗಳು ಹೇಳಿದ್ದಾರೆ. 

ಚಂಡೀಗಢದಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳಿದ್ದು, ಇಬ್ಬರೂ ಹಾಜರಾಗಲಿಲ್ಲ. ಜಜ್ಜರ್ ಕೇಂದ್ರ ಶೇ. 58 ಹಾಜರಿ ದಾಖಲಿಸಿದ್ದು, 494 ಅಭ್ಯರ್ಥಿಗಳ ಪೈಕಿ 287 ಮಂದಿ ಮರುಪರೀಕ್ಷೆ ತೆಗೆದುಕೊಂಡಿದ್ದರು. 

ಮರು ಪರೀಕ್ಷೆ ನಂತರ 813 ಅಭ್ಯರ್ಥಿಗಳ ತಾತ್ಕಾಲಿಕ ಕೀ ಉತ್ತರ ಮತ್ತು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಜೂನ್ 28, 2024 ರಂದು ಪ್ರದರ್ಶಿಸಿ, ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು ಎಂದು ಎನ್ಟಿಎ ಹೇಳಿದೆ. ಆಕ್ಷೇಪಣೆಗಳನ್ನು ತಜ್ಞರು ಪರಿಶೀಲಿಸಿದ್ದಾರೆ ಮತ್ತು ಅವರು ಅಂತಿಮಗೊಳಿಸಿದ ಕೀ ಉತ್ತರಗಳ ಪ್ರಕಾರ ಫಲಿತಾಂಶ ಪ್ರಕಟಿಸಲಾಗಿದೆ. 

ಜಾಲತಾಣದಲ್ಲಿ ಅಂಕಗಳ ಪ್ರಕಟಣೆ: ನೀಟ್-ಯುಜಿ 2024 ರ ಎಲ್ಲಾ ಅಭ್ಯರ್ಥಿಗಳ ಪರಿಷ್ಕೃತ ಅಂಕಗಳನ್ನು ಜಾಲತಾಣ ( https://exam s.nta.ac.in/NEET/ )ದಲ್ಲಿ ಅಳವಡಿಸಲಾಗಿದೆ ಎಂದು ಎನ್‌ಟಿಎ ಹೇಳಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ ನಿಂದ ಪರಿಷ್ಕೃತ ಸ್ಕೋರ್ ಕಾರ್ಡ್‌ ಗಳನ್ನು ವೀಕ್ಷಿಸಬಹುದು/ಡೌನ್‌ಲೋಡ್ ಮಾಡಬಹುದು/ಮುದ್ರಿಸಿಕೊಳ್ಳಬಹುದು ಎಂದು ಪರೀಕ್ಷಾ ಸಂಸ್ಥೆ ತಿಳಿಸಿದೆ. 

ಸುಪ್ರೀಂನಿಂದ ಕೃಪಾಂಕ ರದ್ದು: ಕೃಪಾಂಕದಿಂದ ಹರಿಯಾಣದ ಪರೀಕ್ಷಾ ಕೇಂದ್ರವೊಂದರ ಆರು ಮಂದಿ ಸೇರಿದಂತೆ 67 ಮಂದಿ 720ಕ್ಕೆ 720 ಅಂಕ ಗಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ಈ ಹಿನ್ನೆಲೆಯಲ್ಲಿ ಕೃಪಾಂಕಗಳನ್ನು ರದ್ದುಗೊಳಿಸುವಂತೆ ಮತ್ತು ಮರುಪರೀಕ್ಷೆಗೆ ಆದೇಶಿಸಿತು.

ನೀಟ್-ಯುಜಿ ಪರೀಕ್ಷೆ ಮೇ 5 ರಂದು 4,750 ಕೇಂದ್ರಗಳಲ್ಲಿ ನಡೆದಿದ್ದು, 24 ಲಕ್ಷ ಮಂದಿ ಹಾಜರಾಗಿದ್ದರು. ಆರಂಭದಲ್ಲಿ ಜೂನ್ 14 ರಂದು ನಿರೀಕ್ಷಿಸಲಾಗಿತ್ತು; ಆದರೆ, ಜೂನ್ 4 ರಂದು ಫಲಿತಾಂಶ ಪ್ರಕಟಿಸಲಾಯಿತು.67 ವಿದ್ಯಾ ರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದರಿಂದ, ಅಕ್ರಮ ಮತ್ತು ಕೃಪಾಂಕ ಕುರಿತು ಅನುಮಾನ ಹುಟ್ಟುಹಾಕಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅವ್ಯವಹಾರ ನಡೆದಿದೆ ಎಂಬ ದೇಶದ ಹಲವೆಡೆ ಪ್ರತಿಭಟನೆ ನಡೆದಿತ್ತು; ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು.

Tags:    

Similar News