ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್, ಸೋನಿಯಾ ಗಾಂಧಿ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಕೆ

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಾಶಿಸುತ್ತದೆ, ಇದನ್ನು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL) ಒಡೆತನದಲ್ಲಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಯಂಗ್ ಇಂಡಿಯನ್‌ನಲ್ಲಿ ತಲಾ ಶೇಕಡಾ 38ರಷ್ಟು ಷೇರುಗಳನ್ನು ಹೊಂದಿದ್ದಾರೆ.;

Update: 2025-04-15 13:44 GMT

ಪ್ರಾತಿನಿಧಿಕ ಚಿತ್ರ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣಕಾಸಿನ ಅಕ್ರಮ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡ, ಸುಮನ್ ದುಬೆ ಮತ್ತು ಇತರರ ವಿರುದ್ಧ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ದಾಖಲಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 25ಕ್ಕೆ ನಿಗದಿಪಡಿಸಲಾಗಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಾಶಿಸುತ್ತದೆ, ಇದನ್ನು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL) ಒಡೆತನದಲ್ಲಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಯಂಗ್ ಇಂಡಿಯನ್‌ನಲ್ಲಿ ತಲಾ ಶೇಕಡಾ 38ರಷ್ಟು ಷೇರುಗಳನ್ನು ಹೊಂದಿದ್ದಾರೆ. 2012ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಯವರ ವಿರುದ್ಧ ಎಜೆಎಲ್​​ನ ಸಾಲವನ್ನು ಕಾಂಗ್ರೆಸ್ ಪಕ್ಷದ ಹಣದಿಂದ ಖರೀದಿಸಲು ವೈಐಎಲ್​ ಅನ್ನು ಸ್ಥಾಪಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಇಡಿಯ ತನಿಖೆಯು ವೈಐಎಲ್​ನಿಂದ ಎಜೆಎಲ್​ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಕೇವಲ 50 ಲಕ್ಷಕ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿರುವುದು "ಕಾನೂನುಬಾಹಿರ" ಎಂದು ಆರೋಪಿಸಿದೆ. ಈ ಆಸ್ತಿಗಳಲ್ಲಿ ದೆಹಲಿಯ ಬಹದ್ದೂರ್ ಷಾ ಜಫರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್, ಲಕ್ನೋದ ನೆಹರೂ ಭವನ ಮತ್ತು ಮುಂಬೈನ ವಾಣಿಜ್ಯ ಕಟ್ಟಡಗಳು ಸೇರಿವೆ. ಇಡಿಯ ಪ್ರಕಾರ, ಈ ಆಸ್ತಿಗಳನ್ನು ವಾಣಿಜ್ಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಚಾರ್ಜ್‌ಶೀಟ್‌ನ ವಿವರಗಳು

ಚಾರ್ಜ್‌ಶೀಟ್‌ನಲ್ಲಿ ಇಡಿಯು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡ, ಸುಮನ್ ದುಬೆ, ದಿವಂಗತ ಮೋತಿಲಾಲ್ ವೋರಾ ಮತ್ತು ದಿವಂಗತ ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಹಲವರು ವೈಐಎಲ್​ನಿಂದ ಎಜೆಎಲ್​ ಆಸ್ತಿಗಳನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದೆ.

ಎಜೆಎಲ್​ನಿಂ 988 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು,. ಪಿಎಮ್​ಎಲ್​ಎ 2002ರ ಸೆಕ್ಷನ್ 3, 44, 45, ಮತ್ತು 70ರ ಅಡಿಯಲ್ಲಿ ಅಪರಾಧ ಎಂದು ಚಾರ್ಜ್​ ಶೀಟ್​​ನಲ್ಲಿ ಹೇಳಲಾಗಿದೆ.

ಆಸ್ತಿಗಳ ಜಪ್ತಿ ಪ್ರಕ್ರಿಯೆ

ಏಪ್ರಿಲ್ 11ರಂದು, ಇಡಿಯು 661 ಕೋಟಿ ರೂಪಾಯಿ ಮೌಲ್ಯದ ಎಜೆಎಲ್​ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿತು. ದೆಹಲಿ, ಮುಂಬೈ ಮತ್ತು ಲಕ್ನೋದ ಆಸ್ತಿ ನೋಂದಣಾಧಿಕಾರಿಗಳಿಗೆ ಪಿಎಮೆಲ್​ಎ ಸೆಕ್ಷನ್ 8 ಮತ್ತು ರೂಲ್ 5(1) ಅಡಿಯಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ಆಸ್ತಿಗಳನ್ನು ನವೆಂಬರ್ 2023ರಲ್ಲಿ ಇಡಿಯು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು,  

Tags:    

Similar News