ಉಕ್ರೇನ್ ಯುದ್ಧವನ್ನು ಕೊನೆಗೊಳಿಸಿ: ಮೋದಿ
ಟ್ರಾವೆಲ್ ಏಜೆಂಟ್‌ಗಳಿಂದ ಮೋಸ ಹೋಗಿ, ರಷ್ಯಾದ ಸೈನ್ಯ ಸೇರಿರುವ ಸುಮಾರು ಎರಡು ಡಜನ್ ಭಾರತೀಯ ರ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು.;
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಾಯಿಸಿದ್ದಾರೆ.
ಗೌರವಾರ್ಥ ಆಯೋಜಿಸಿದ್ದ ಔತಣ ಕೂಟದಲ್ಲಿ ʻಯುದ್ಧಭೂಮಿಯಿಂದ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ. ಎಲ್ಲ ದೇಶಗಳ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವಿದೆ,ʼ ಎಂದು ಪುಟಿನ್ ಅವರಿಗೆ ಹೇಳಿದರು ಎಂದು ವರದಿಯಾಗಿದೆ.
ಸೋಮವಾರ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದೆ ಎನ್ನಲಾದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದು, 190 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮೋದಿ ಅವರ ಮನವಿ ಬಂದಿದೆ.
ವಿಶ್ವ ಸಂಸ್ಥೆ ಒಪ್ಪಂದವನ್ನು ಗೌರವಿಸಿ: ʻಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಸೇರಿದಂತೆ ವಿಶ್ವ ಸಂಸ್ಥೆಯ ಒಪ್ಪಂದವನ್ನು ಗೌರವಿಸಬೇಕೆಂದು ಭಾರತ ಮೊದಲಿನಿಂದಲೂ ಹೇಳುತ್ತಿದೆ. ಯುದ್ಧದಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆ ಮುಂದಿನ ದಾರಿಯಾಗಬೇಕು,ʼ ಎಂದು ಮೋದಿ ಹೇಳಿದರು.
ನಿರ್ಲಜ್ಜ ಟ್ರಾವೆಲ್ ಏಜೆಂಟರು ರಷ್ಯಾದ ಸೈನ್ಯಕ್ಕೆ ಸೇರಿಸಲು ಭಾರತೀಯ ಪ್ರಜೆಗಳನ್ನು ವಂಚಿಸುವ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು. ಇಂಥ ಸುಮಾರು ಎರಡು ಡಜನ್ ವ್ಯಕ್ತಿಗಳನ್ನು ವಾಪಸು ಕಳುಹಿಸಲು ರಷ್ಯಾ ಬದ್ಧವಾಗಿದೆ ಎಂದು ವರದಿಗಳು ತಿಳಿಸಿವೆ. ವರ್ಷದ ಆರಂಭದಲ್ಲಿ ವೈರಲ್ ಆದ ವಿಡಿಯೋ, ಉಕ್ರೇನ್‌ನಲ್ಲಿ ಯುದ್ಧದಲ್ಲಿ ಹೋರಾಡಲು ತಮ್ಮನ್ನು ಮೋಸದಿಂದ ನೇಮಿಸಿಕೊಳ್ಳಲಾಗಿದೆ. ನಾವು ಮನೆಗೆ ಮರಳಲು ಬಯಸಿದ್ದೇವೆ ಎಂದು ಹೇಳುತ್ತಿರುವ ಸಮವಸ್ತ್ರದಲ್ಲಿರುವ ಪಂಜಾಬ್ ಮತ್ತು ಹರಿಯಾಣದ ಸೈನಿಕರನ್ನು ತೋರಿಸಿತ್ತು.
ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾವನ್ನು ಭಾರತ ಸ್ಪಷ್ಟವಾಗಿ ಖಂಡಿಸಿಲ್ಲ. ಮಾಸ್ಕೋವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದಲೂ ನವದೆಹಲಿ ದೂರವಿತ್ತು.
ಮೋದಿ ಅವರಿಗೆ ಅಭಿನಂದನೆ: ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ಅವರನ್ನು ಪುಟಿನ್ ಅಭಿನಂದಿಸಿದ್ದಾರೆ. ʻಫಲಿ ತಾಂಶಗಳು ಮಾತನಾಡುತ್ತವೆ; ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ,ʼ ಎಂದು ಪುಟಿನ್ ಹೇಳಿದರು. ಕಳೆದ ದಶಕದಲ್ಲಿ ಮೋದಿ ಮತ್ತು ಪುಟಿನ್, 16 ಬಾರಿ ಭೇಟಿಯಾಗಿದ್ದಾರೆ.