ಮಹಾರಾಷ್ಟ್ರ: ಪಾಲ್ಘರ್ ಜಿಲ್ಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಇಬ್ಬರ ಬಂಧನ

Update: 2024-08-24 06:51 GMT

ಬಹಿರ್ದೆಸೆಗೆ ತೆರಳಿದ್ದ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಹಾ ರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸ್‌ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 

ಮುಂಬೈ ನಿವಾಸಿಯಾದ ಬಾಲಕಿ, ಸ್ನೇಹಿತೆಯನ್ನು ಭೇಟಿಯಾಗಲು ಆಗಾಗ ನಲ್ಲಸೊಪಾರಕ್ಕೆ ಭೇಟಿ ನೀಡುತ್ತಿದ್ದರು. ಭೇಟಿ ಸಮಯದಲ್ಲಿ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿದ್ದ ಸೋನು ಎಂಬ ಆರೋಪಿಯ ಪರಿಚಯವಾಯಿತು. ಸೋನು ಮತ್ತು ಅವನ ಸ್ನೇಹಿತ, ಬಾಲಕಿಯನ್ನು ವಿಹಾರಕ್ಕೆ ಆಹ್ವಾನಿಸಿದ್ದರು. ಆಕೆಯನ್ನು ಆಟೋದಲ್ಲಿ ಕರೆದೊಯ್ದು, ಅತ್ಯಾಚಾರ ನಡೆಸಿದರು ಎಂದು ತುಳಿಂಜ್ ಠಾಣೆ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. 

ಬಾಲಕಿ ವಿಷಯವನ್ನು ಪೋಷಕರಿಗೆ ತಿಳಿಸಿದ್ದು, ಅವರು ದೂರು ದಾಖಲಿಸಿದ್ದಾರೆ. ತುಳಿಂಜ್ ಪೊಲೀಸರು ಶುಕ್ರವಾರ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಿದ್ದಾರೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಶೈಲೇಂದ್ರ ನಗರ್ಕರ್ ತಿಳಿಸಿದ್ದಾರೆ.

Tags:    

Similar News