Lok Sabha Election 2024| ಮಹಿಳಾ ಪ್ರಾತಿನಿಧ್ಯ ಶೇ.14ರಿಂದ ಶೇ.6ಕ್ಕೆ ಕುಸಿತ

ಮಹಿಳಾ ಮೀಸಲಾತಿ ಮಸೂದೆ (ಮೂರನೇ ಒಂದರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ) ಜಾರಿಗೊಳಿಸಿದ್ದ ನಿಕಟಪೂರ್ವ ಲೋಕಸಭೆಯಲ್ಲಿಇದ್ದ ಸಂಸದೆಯರು 78. ಅಂದರೆ 543 ಸಂಸದರಲ್ಲಿ ಶೇಕಡಾ 14.4 ಮಹಿಳೆಯರು ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದರು. ಆದರೆ ಮಂಗಳವಾರದ ಲೋಕಸಭಾ ಚುನಾವಣಾ ಫಲಿತಾಂಶ ಮಹಿಳೆಯರ ಪಾತಿನಿಧ್ಯವನ್ನು ಇನ್ನಷ್ಟು ದುರ್ಬಲಗೊಳಿಸಿದೆ.

Update: 2024-06-05 07:59 GMT
ಮಹುವಾ ಮೊಯಿತ್ರಾ, ಕಂಗನಾ ರನೌತ್

ಮಹಿಳಾ ಮೀಸಲಾತಿ ಮಸೂದೆ (ಮೂರನೇ ಒಂದರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ)  ಜಾರಿಗೊಳಿಸಿದ್ದ ನಿಕಟಪೂರ್ವ ಲೋಕಸಭೆಯಲ್ಲಿಇದ್ದ ಸಂಸದೆಯರು  78.  ಅಂದರೆ 543  ಸಂಸದರಲ್ಲಿ ಶೇಕಡಾ  14.4 ಮಹಿಳೆಯರು  ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದರು.

 ಆದರೆ ಮಂಗಳವಾರದ ಲೋಕಸಭಾ ಚುನಾವಣಾ ಫಲಿತಾಂಶ  ಮಹಿಳೆಯರ ಪಾತಿನಿಧ್ಯವನ್ನು ಇನ್ನಷ್ಟು ದುರ್ಬಲಗೊಳಿಸಿದೆ.  2024  ರ ಚುನಾವಣೆಯಲ್ಲಿ ಲೋಕಸಭೆಗೆ ಆರಿಸಿಬಂದವರ ಸಂಖ್ಯೆ  ಕೇವಲ 30 ! ಅಂದರೆ  ಶೇಕಡಾ 5.5   ಮಹಿಳೆಯರು ಈ ಬಾರಿ ಲೋಕಸಭೆಯನ್ನು ಪ್ರತಿನಿಧಿಸಲಿದ್ದಾರೆ. 

ಗೆದ್ದು ಬೀಗಿರುವ ಮಹಿಳಾ ಸಂಸದರಲ್ಲಿ ಕಾಂಗ್ರೆಸ್‌ನ ಸೆಲ್ಜಾ ಕುಮಾರಿ, ಬಿಜೆಪಿಯ ಕಂಗನಾ ರನೌತ್ ಮತ್ತು ಹೇಮಾಮಾಲಿನಿ, ಟಿಎಂಸಿಯ ಮಹುವಾ ಮೊಯಿತ್ರಾ, ಸಮಾಜವಾದಿ ಪಕ್ಷದ (ಎಸ್‌ಪಿ) ಡಿಂಪಲ್ ಯಾದವ್ ಮತ್ತು ಆರ್‌ಜೆಡಿಯ ಮಿಶಾ ಭಾರತಿ , ಎನ್‌ಸಿಪಿಯ ಸುಪ್ರಿಯಾ ಸುಳೆ  2024 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಪ್ರಮುಖ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 797 ಮಹಿಳೆಯರು ಸ್ಪರ್ಧಿಸಿದ್ದರು. 2019ರಲ್ಲಿ ಸಂಸದೆಯರ ಸಂಖ್ಯೆ 78 ಇದ್ದಿತ್ತು. ಈ ಬಾರಿ ಸಂಖ್ಯಾಬಲ 30 ಕ್ಕೆ ಕುಸಿದಿದೆ.

ಅಮೇಥಿಯ ಹಾಲಿ ಸಂಸದೆ ಸ್ಮೃತಿ ಇರಾನಿ ಮತ್ತು ಸುಲ್ತಾನ್‌ಪುರದ ಸಂಸದೆ ಮೇನಕಾ ಗಾಂಧಿ ಅಪಜಯ ಹೊಂದಿಗೊಂಡಿದ್ದಾರೆ.ಹರಿಯಾ ಣದ ಸಿರ್ಸಾ ಲೋಕಸಭೆ ಕ್ಷೇತ್ರದಲ್ಲಿ ಕುಮಾರಿ ಸೆಲ್ಜಾ 2.5 ಲಕ್ಷ ಹಾಗೂ ಬಿಜೆಪಿ ನಾಯಕಿ, ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ 78,370 ಮತಗಳಿಂದ ಹೊಸದಿಲ್ಲಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ.

ನಟಿ ಕಂಗನಾ ರಣೌತ್ ಅವರು ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳಿಂದ ಗೆದ್ದಿದ್ದಾರೆ. ಹಿರಿಯ ನಟಿ ಮತ್ತು ಮಥುರಾದ ಹಾಲಿ ಸಂಸದೆ ಹೇಮಾ ಮಾಲಿನಿ ಅವರು 5.1 ಲಕ್ಷ ಮತ ಗಳಿಸಿ ಸ್ಥಾನವನ್ನು ಉಳಿಸಿಕೊಂಡರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್‌ ಯಾದವ್‌ ಅವರು ಮೈನ್‌ಪುರಿ ಕ್ಷೇತ್ರದಿಂದ ಪ್ರತಿಸ್ಪರ್ಧಿ ಬಿಜೆಪಿಯ ಜಯವೀರ್ ಸಿಂಗ್ ವಿರುದ್ಧ 2,21,639 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಶಾ ಭಾರತಿ ಅವರು ಕೇಂದ್ರ ಸಚಿವ ಮತ್ತು ಬಿಹಾರದ ಪಾಟಲಿಪುತ್ರದ ಹಾಲಿ ಸಂಸದ ರಾಮ್ ಕೃಪಾಲ್ ಯಾದವ್ ವಿರುದ್ಧ 85,174 ಮತಗಳ ಅಂತರದಿಂದ ಜಯ ಗಳಿಸಿದರು.

ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರು 56,705 ಮತಗಳಿಂದ, ಡಿಎಂಕೆಯ ಕನಿಮೋಳಿ ಅವರು 5,40,729 ಮತ ಗಳಿಸಿ ತೂತುಕುಡಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಮಚ್ಲಿಶಹರ್‌ ಕ್ಷೇತ್ರದ ಅಭ್ಯರ್ಥಿ ಪ್ರಿಯಾ ಸರೋಜ್(25) ಮತ್ತು ಕೈರಾನಾ ಕ್ಷೇತ್ರದಿಂದ ಇಕ್ರಾ ಚೌಧರಿ(29) ಗೆಲುವು ಸಾಧಿಸಿದ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.

Tags:    

Similar News